ಪತ್ರಿಕಾರಂಗಕ್ಕೆ ವಿ.ಎನ್.ಸುಬ್ಬರಾಯರ ಕೊಡುಗೆ ಅಪಾರ

0
25

ಹರಿಹರ:

      ಹರಿಹರ ಮತ್ತು ದಾವಣಗೆಯ ವಿ.ಎನ್. ಸುಬ್ಬರಾಯ ರಂತವರು ಹಾಗೂ ಇನ್ನೂ ಅನೇಕರು ಪತ್ರಿಕಾ ರಂಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂತವರ ನಾಡಾದ ಹರಿಹರದಲ್ಲಿನಾನು ಮಾತನಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅವರು ಉಪನ್ಯಾಸ ನೀಡಿದರು.

      ನಗರದ ರಚನಾ ಕ್ರೀಡಾ ಟ್ರಸ್ಟ್‍ನಲ್ಲಿ ಹರಿಹರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ, ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಉಪನ್ಯಾಸಕರಾಗಿ ಮಾತನಾಡಿದ ಅವರು,
ಹರಿಹರ ಮತ್ತು ದಾವಣಗೆರೆಯಿಂದ ವಿ.ಎನ್.ಸುಬ್ಬರಾಯರಂತವರು ಹಾಗೂ ಇನ್ನೂ ಅನೇಕರು ಪತ್ರಿಕಾ ರಂಗಕ್ಕೆ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ಇಂತವರ ನಾಡಾದ ಹರಿಹರದಲ್ಲಿ ಮಾತನಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ.

      ಸ್ವಾತಂತ್ರ್ಯ ಪೂರ್ವದ ಪತ್ರಿಕೆಗಳು ದೇಶದಲ್ಲಿ ಬ್ರಿಟಿಷರ ವಿರುದ್ಧ ಜನರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸಲು ಪ್ರಕಟಗೊಳ್ಳುತ್ತಿದ್ದವು. ಆ ಪತ್ರಿಕೆಗಳು ಬ್ರಿಟಿಷರ ವಿರುದ್ಧದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದವು. ಸ್ವಾತಂತ್ರ್ಯ ನಂತರದ ಪತ್ರಿಕೆಗಳು ರಾಷ್ಟ್ರದ ನೀತಿನಿಯಮ ಮತ್ತು ಸಾಮಾಜಿಕ ನ್ಯಾಯಾಗಳ ಬಗ್ಗೆ ಮಾಹಿತಿಯನ್ನು ಓದುಗರಿಗೆ ನೀಡುತ್ತಿದ್ದವು.

      ಇಂದು ಪತ್ರಿಕಾ ರಂಗವು ಕವಲು ದಾರಿಯಲ್ಲಿ ಇದ್ದು, ಚಂದಾದಾರ ಹಾಗೂ ಜಾಹೀರಾತುದಾರ ಎಂಬ ಕವಲುದಾರಿಯಲ್ಲಿ ಸಾಗುತ್ತಿದ್ದು, ಚಂದಾದರನ್ನು ತೃಪ್ತಿಪಡಿಸಬೇಕೋ ಅಥವಾ ಜಾಹೀರಾತುದಾರರನ್ನು ತೃಪ್ತಿ ಪಡಿಸಬೇಕೋ ಎನ್ನುವ ಗೊಂದಲದಲ್ಲಿದೆ. ಪತ್ರಿಕೆಯ ಬೆಳವಣಿಗೆಯ ಬಗ್ಗೆ ಚಿಂತಿಸಿ ಜಾಹೀರಾತುದಾರರಿಗೆ ಸ್ಪಂದಿಸಿದರೆ ಚಂದಾದಾರರಿಗೆ ಅನ್ಯಾಯವೆಸಗಿದಂತಾಗುತ್ತದೆ. ಇನ್ನೂ ವಸ್ತುನಿಷ್ಟ ವಿಷಯಗಳನ್ನು ನೀಡಿ ಚಂದಾದಾರರನ್ನು ತೃಪ್ತಿ ಪಡಿಸಿದರೆ, ಜಾಹೀರಾತುದಾರರಿಗೆ ಅನ್ಯಾಯವೆಸಗಿದಂತಾಗುವ ಸಂದ್ಗಿದತೆಯಲ್ಲಿ ಪತ್ರಿಕೆಗಳು ಇವೆ ಎಂದು ಬೇಸರ ವ್ಯಕ್ತಪಡಿಸಿದರು.

      ನಾವುಗಳು ಜುಲೈ-1ನೇ ತಾರೀಖನ್ನು ಪತ್ರಿಕಾ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತೇವೆ. ಆದರೆ, ನಾವುಗಳು ಸರ್.ಎಮ್.ವಿಶ್ವೇಶ್ವರಾಯರ ಜನ್ಮ ದಿನದಂದು ಪತ್ರಿಕೆ ದಿನಾಚರಣೆಯನ್ನಾಗಿ ಆಚರಣೆ ಮಾಡಬೇಕು. ಏಕೆಂದರೆ ಬ್ರಿಟಿಷರು ಎಲ್ಲಾ ಪತ್ರಿಕೆಗಳ ಮೇಲೆ ನಿರ್ಭಂದ ಹೆರಿದ ಸಂದರ್ಭದಲ್ಲಿ ಮೈಸೂರು ದಿವಾನರಾಗಿದ್ದ, ವಿಶ್ವೇಶ್ವರಾಯನವರು ನಿರ್ಭಂದದ ವಿರುದ್ಧ ಅಪ್ಪಿಲ್ ಹೋಗಿ ಪತ್ರಿಕೆಗಳು ಪ್ರಾರಂಭಿಸಲು ನಾಂದಿ ಹಾಡಿದರು. ಈ ಕಾರಣಕ್ಕಾಗಿ ಅವರ ಜನ್ಮ ದಿನದಂದು ಪತ್ರಿಕಾ ದಿನಾಚರಣೆ ಆಚರಿಸಬೇಕೆಂದು ಹೇಳಿದರು.

      ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ರಾಮಪ್ಪ ಅವರು ತಾಲೂಕಿನಲ್ಲಿ ಅತೀ ಶೀಘ್ರವಾಗಿ ಕ್ಷೇತ್ರದ ಬಡವರಿಗೆ ಸುಮಾರು 2-3 ಸಾವಿರ ಮನೆಗಳ ವಸತಿ (ಜಿ+1)ದ ಯೋಜನೆಯಿದ್ದು, ಆ ಸಂದರ್ಭದಲ್ಲಿ ಪ್ರತ್ಯೇಕವಾಗಿ ಸ್ಥಳ ನಿಗಧಿ ಮಾಡಿ ಪತ್ರಕರ್ತರಿಗಾಗಿ ಮನೆಗಳನ್ನು ನಿರ್ಮಿಸಲಾಗುವುದು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಇನ್ನೂ ಅನೇಕ ಸಮಸ್ಯೆಗಳು ಇದ್ದು, ನಿವಾರಣೆ ದೃಷ್ಟಿಯಿಂದ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆಯನ್ನು ಮಾಡಲಾಗುತ್ತಿದ್ದು, ಕೆಲ ದಿನಗಳಲ್ಲಿ ಕಾರ್ಯಾಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

      ಇಂದು ನಿಮ್ಮ ಸಂಘದಿಂದ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ತುಂಬ ಒಳ್ಳೆಯ ಕೆಲಸವಾಗಿದ್ದು, ಎಲೆ ಮರೆಯ ಕಾಯಿಯಾಗಿರುವ ಇಂತಹ ಸಾಧಕರನ್ನು ಸನ್ಮಾನಿಸಿ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ಮತ್ತು ಮುಕ್ತಾಯ ಅಂತದಲ್ಲಿರುವ ಪತ್ರಿಕಾಭವನವನ್ನು ಉದ್ಘಾಟನೆಯಾದ ಮೇಲೆ ಒಳ್ಳೆಯ ಸತ್ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿರಿ. ನಿಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ನನ್ನ ಸಹಾಯ-ಸಹಕಾರ ಎಂದಿಗೂ ಇರುತ್ತದೆ ಎಂದು ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

      ಈ ವೇಳೆ ಸಾಧಕರುಗಳಾದ ಪೊಲೀಸ್ ಇಲಾಖೆಯ ಶ್ರೀನಿವಾಸ್ ಡಿ.ಟಿ., ಆರೋಗ್ಯ ಇಲಾಖೆಯ ಶ್ರೀಮತಿ ವಿಜಯಲಕ್ಷ್ಮೀ, ಪೌರಸೇವಾ ಇಲಾಖೆಯ ಹಾಲಪ್ಪ, ಕೊಟ್ರಪ್ಪ ಎಚ್.ಡಿ. ಮತ್ತು ನಾಗರಾಜ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವೀರಪ್ಪ ಎಮ್.ಬಾವಿ, ತಾಲೂಕು ಕಾ.ನಿ.ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್ ಮಾತನಾಡಿದರು.

      ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸುಜಾತ ರೇವಣಸಿದ್ದಪ್ಪ, ತಾ.ಕಾ.ನಿ.ಸಂಘದ ಉಪಾಧ್ಯಕ್ಷ ಬಿ.ವಾಸುದೇವ್. ಗೌರವ ಕಾರ್ಯದರ್ಶಿ ಡಾ.ಕೆ.ಜೈಮುನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪತ್ರಕರ್ತರು, ಎಸ್.ಜೆ.ವಿ.ಪಿ.ಕಾಲೇಜಿನ ಪತ್ರಿಕಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಅನೇಕ ಮುಖಂಡರುಗಳು ಭಾಗವಹಿಸಿದ್ದರು.
 

LEAVE A REPLY

Please enter your comment!
Please enter your name here