ಪದವಿ ಕಾಲೇಜುಗಳ ಕಟ್ಟಡಗಳಿಗಾಗಿ 250 ಕೋಟಿ ರೂ. ಮೀಸಲು

0
13

ಬೆಂಗಳೂರು:

Image result for universities in karnataka

      ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದಲ್ಲಿ ಸಾಕಷ್ಟು ಮಾರ್ಪಾಡಾಗಬೇಕಾಗಿದೆ.  ಎಲ್ಲ ಕಾಲೇಜುಗಳಲ್ಲಿ ಕೌಶಲಾಭಿವೃದ್ಧಿ ತರಬೇತಿಗಳು ಏಕಕಾಲಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

      ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸ್ಕಿಲ್ ಡೆವಲಪ್‍‍ಮೆಂಟ್ ಗೆ ಎಲ್ಲ ಕಾಲೇಜುಗಳಲ್ಲಿ ಏಕಕಾಲಕ್ಕೆ ಕೋರ್ಸ್ ಪ್ರಾರಂಭಿಸಲಾಗುತ್ತದೆ.  3800 ಉಪನ್ಯಾಸಕರ ಅಗತ್ಯವಿದ್ದು, 10 ಸಾವಿರ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.

      102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲವಾಗಿದ್ದು, ವಿಶೇಷವಾಗಿ ಕಟ್ಟಡಗಳ ನಿರ್ಮಾಣಕ್ಕಾಗಿಯೇ 250 ಕೋಟಿ ರೂ.ಗಳನ್ನು ಮೀಸಲಿರಿಸಲಾಗುತ್ತದೆ. ಈ ಕುರಿತು ವಿಶ್ವಬ್ಯಾಂಕ್ ಅವರ ಜತೆ ಸಭೆ ನಡೆಸಲು ಮುಂದಾಗಿದ್ದೇವೆ. ವಿಶ್ವಬ್ಯಾಂಕ್ ನಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯುವ ಕುರಿತು ಸಭೆ ನಡೆಸಲಿದ್ದೇವೆ ಎಂದರು. 

ವಿವಿಗಳಿಗೆ ಕುಲಪತಿಗಳ ನೇಮಕ:

      ಹಿಂದಿನ ಸರಕಾರದಲ್ಲಿ ಹೇಗೇಗೋ ಕುಲಪತಿಗಳ ನೇಮಕ ಮಾಡಲಾಗಿತ್ತು. ನಮ್ಮ ಸರಕಾರ ಬಂದ ಮೇಲೆ ವಿವಿ ಕುಲುಪತಿಗಳ ನೇಮಕವಾಗಿಲ್ಲ. ಯಾವ ಯಾವ ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ ಇವೆ, ಎಷ್ಟು ವರ್ಷದಿಂದ ಖಾಲಿ ಇವೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

LEAVE A REPLY

Please enter your comment!
Please enter your name here