ಪಾಲಿಕೆ ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್ ವಶ

0
5

 ದಾವಣಗೆರೆ:

      ಆರೋಗ್ಯ ಶಾಖೆಯ ಅಧಿಕಾರಿಗಳು ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, 150ಕ್ಕೂ ಹೆಚ್ಚು ಕೆಜಿ ಪ್ಲಾಸ್ಟಿಕ್ ಕವರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

      ಪಾಲಿಕೆ ವ್ಯಾಪ್ತಿಯ ಹೂವಿನ ಅಂಗಡಿ, ಹೋಟಲ್, ಬೇಕರಿ, ಬೀದಿ ಬದಿಯ ಹಣ್ಣಿನ ಅಂಗಡಿ, ಆಹಾರ್ 2000, ಕಾಮತ್ ಹೋಟಲ್, ವಿನಾಯಕ ಪ್ರಾವಿಜನ್ಸ್ ಸ್ಟೋರ್, ಹಳೇ ಬಸ್ ನಿಲ್ದಾಣದ ಪ್ರತಾಪ್ ಬೇಕರಿ, ಮೋತಿ ಸ್ವೀಟ್ಸ್‍ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಪ್ಲಾಸ್ಟಿಕ್ ವಶ ಪಡಿಸಿಕೊಂಡಿದೆ. ಅಲ್ಲದೆ, ಈ ಸಂದರ್ಭದಲ್ಲಿಯೇ ಸ್ವಚ್ಚತೆ ಬಗ್ಗೆ ಹಾಗೂ ಹಸಿ ಕಸ ಒಣ ಕಸ ವಿಂಗಡನೆ ಮಾಡಿ ಕಸ ನೀಡುವಂತೆ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here