ಚುನಾವಣೆ: ನೀತಿ ಸಂಹಿತೆ ಜಾರಿ, ಜನಪ್ರತಿನಿಧಿಗಳ ಕೊಠಡಿ ವಶ, ವಾಹನ ವಾಪಸ್, ಫ್ಲೆಕ್ಸ್ ತೆರವು

0
64

ತುಮಕೂರು:

      ತುಮಕೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಆಗಸ್ಟ್ 9 ರಂದು ಸಂಜೆಯಿಂದಲೇ ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿದೇಶನದ ಅನುಸಾರ ನೀತಿ ಸಂಹಿತೆ ಜಾರಿಯಾಗಿದೆ.

      ತುಮಕೂರು ಪಾಲಿಕೆಯ ಆಡಳಿತವು ತಕ್ಷಣದಿಂದಲೇ ಕ್ರಮ ಆರಂಭಿಸಿದೆ. ಅದರ ಪರಿಣಾಮ ಶುಕ್ರವಾರ (ಆಗಸ್ಟ್ 10) ಬೆಳಗ್ಗೆ ತುಮಕೂರು ಪಾಲಿಕೆಯ ಕಚೇರಿಯಲ್ಲಿರುವ ಎಲ್ಲ ಜನಪ್ರತಿನಿಧಿಗಳ ಕೊಠಡಿಗಳನ್ನು ವಶಕ್ಕೆ ಪಡೆದು, ಚುನಾವಣಾಧಿಕಾರಿಗಳಿಗೆ ವಹಿಸಲಾಗಿದೆ.

ವಾಹನ ವಾಪಸ್, ಬೈಕ್ನಲ್ಲಿ ಬಂದ ಮೇಯರ್:

      ಮೇಯರ್ ಸುಧೀಶ್ವರ್ ಮತ್ತು ಉಪಮೇಯರ್ ಎಂ.ಆರ್. ಜಯಲಕ್ಷ್ಮಿ ಅವರಿಗೆ ನೀಡಲಾಗಿದ್ದ ಪಾಲಿಕೆಯ ಅಧಿಕೃತ ವಾಹನಗಳನ್ನು ಹಿಂಪಡೆಯಲಾಗಿದೆ.

      ಅಧಿಕೃತ ವಾಹನ ಇಲ್ಲದಿರುವುದರಿಂದ ಶುಕ್ರವಾರ ಬೆಳಗ್ಗೆ ಮೇಯರ್ ಸುಧೀಶ್ವರ್ ಅವರು ಬೈಕ್ ಚಾಲನೆ ಮಾಡಿಕೊಂಡು ಪಾಲಿಕೆ ಕಚೇರಿಯತ್ತ ಬಂದುದು ಅಲ್ಲಿದ್ದ ಸಾರ್ವಜನಿಕರ ಗಮನ ಸೆಳೆಯಿತು.

ಕೊಠಡಿಗಳ ವಶ :

      ಪಾಲಿಕೆಯ ಮೇಯರ್ ಸುಧೀಶ್ವರ್ ಅವರ ಕೊಠಡಿಗೆ ಬೀಗ ಹಾಕಲಾಗಿದೆ. ಕೊಠಡಿಯ ಮುಂಭಾಗದ ನಾಮಲಕಕ್ಕೆ ಬಿಳಿ ಪೇಪರ್ ಅಂಟಿಸಿ ಹೆಸರನ್ನು ಮುಚ್ಚಲಾಗಿದೆ. ಕೊಠಡಿಯನ್ನು ಹಾಗೆಯೇ ಖಾಲಿ ಬಿಡಲಾಗಿದೆ.

      ಉಪಮೇಯರ್ ಜಯಲಕ್ಷ್ಮಿ ಅವರ ಕೊಠಡಿಯನ್ನೂ ವಶಕ್ಕೆ ತೆಗೆದುಕೊಂಡು, ನಾಮಲಕಕ್ಕೆ ಪೇಪರ್ ಅಂಟಿಸಿ, ಆ ಕೊಠಡಿಯನ್ನು ಚುನಾವಣಾಧಿಕಾರಿಗಳಿಗೆ ವಹಿಸಲಾಗಿದೆ. ಇನ್ನು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಅವರ ಕೊಠಡಿ, ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ಕೊಠಡಿ, ವಿರೋ‘ ಪಕ್ಷದ ನಾಯಕ ಇಂದ್ರಕುಮಾರ್ ಅವರ ಕೊಠಡಿಗಳನ್ನು ವಶಕ್ಕೆ ಪಡೆದು, ಚುನಾವಣಾಧಿಕಾರಿಗಳಿಗೆ ವಹಿಸಲಾಗಿದೆ. ಜೊತೆಗೆ ಕಂದಾಯ ಶಾಖೆಯಲ್ಲಿ ಮತ್ತು ಪಾಲಿಕೆ ಪ್ರವೇಶದ್ವಾರದಲ್ಲಿರುವ ಚಿಕ್ಕ ಕೊಠಡಿಯಲ್ಲೂ ಚುನಾವಣಾಧಿಕಾರಿಗಳಿಗೆ ವ್ಯವಸ್ಥೆ ಮಾಡಲಾಗಿದೆ.

6 ಜನ ಚುನಾವಣಾಧಿಕಾರಿಗಳು:

      ಈ ಆರೂ ಕೊಠಡಿಗಳನ್ನು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಪಾಲಿಕೆ ಚುನಾವಣೆಗಾಗಿ ಆರು ಜನ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 35 ವಾರ್ಡ್ಗಳಿದ್ದು, ಇವುಗಳಲ್ಲಿ ವಾರ್ಡ್ಗಳನ್ನು ವಿಂಗಡಿಸಿ ಇವರುಗಳಿಗೆ ನಿಗದಿಪಡಿಸಲಾಗಿದೆ. ಬೇರೆ ಇಲಾಖೆಗಳ ಜಿಲ್ಲಾ ಮಟ್ಟದ ಕ್ಲಾಸ್ ಒನ್ ಕೇಡರ್ನ ಅಧಿಕಾರಿಗಳನ್ನೇ ಇಲ್ಲಿ ಚುನಾವಣಾಧಿಕಾರಿಗಳನ್ನಾಗಿ ನಿಯಮಿಸಲಾಗುತ್ತಿದೆ. ಇವರೊಂದಿಗೆ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿ ಇರುತ್ತಾರೆ.

ನಗರಾದ್ಯಂತ ಫ್ಲೆಕ್ಸ್ ತೆರವು:

      ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಶುಕ್ರವಾರ ಮುಂಜಾನೆ 5-30 ರಿಂದಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡು ನಗರಾದ್ಯಂತ ಎಲ್ಲೆಡೆ ‘‘ದೃಶ್ಯ ಮಾಲಿನ್ಯ’’ ಉಂಟುಮಾಡುತ್ತಿದ್ದ ಎಲ್ಲ ಬಗೆಯ ಫ್ಲೆಕ್ಸ್ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದರು. ಯಾವುದೇ ರಾಜಕಾರಣಿಯ ಫೋಟೋ ಇರುವ ಹಾಗೂ ಖಾಸಗಿ ಫ್ಲೆಕ್ಸ್ ಗಳನ್ನು ತೆಗೆದುಹಾಕಿದರು.

      ರಸ್ತೆಬದಿಯ ಬಸ್ ಷೆಲ್ಟರ್ಗಳಲ್ಲಿದ್ದ ರಾಜಕಾರಣಿಗಳ ಫೋಟೋಗಳನ್ನು ಸಹ ತೆರವುಗೊಳಿಸಿದರು. ನಗರದ ವಿವಿ‘ ಬಡಾವಣೆಗಳಲ್ಲಿ ರಸ್ತೆ/ಕ್ರಾಸ್ಗಳ ಹೆಸರಿನ ಲಕಗಳಲ್ಲಿದ್ದ ಕಾರ್ಪೊರೇಟರ್ ಮತ್ತಿತರ ರಾಜಕಾರಣಿಗಳ ಹೆಸರುಗಳನ್ನೂ ಅಳಿಸಲು ಕ್ರಮ ಕೈಗೊಂಡರು. ಬ್ಯಾನರ್, ಭಿತ್ತಿಪತ್ರ ಮೊದಲಾದವುಗಳ ತೆರವಿಗೂ ಕ್ರಮ ಜರುಗಿಸಿದರು.

      ಇದರೊಂದಿಗೆ ದೀರ್ಘಕಾಲದಿಂದ ಪಿಡುಗಾಗಿ ಕಾಡುತ್ತಿದ್ದ ‘‘್ಲೆಕ್ಸ್ ಹಾವಳಿ’’ ನಗರಾದ್ಯಂತ ಒಂದೇ ದಿನದಲ್ಲಿ ಬಹುತೇಕ ನಿರ್ಮೂಲನಗೊಂಡಂತಾಗಿದೆ.

  2.59 ಲಕ್ಷ ಮತದಾರರು:

      35 ವಾರ್ಡ್ಗಳನ್ನು ಒಳಗೊಂಡಿರುವ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,59,513 ಮತದಾರರಿದ್ದಾರೆ. ಇವರಲ್ಲಿ 1,28,882 ಪುರಷ ಮತದಾರರು ಮತ್ತು 1,30,597 ಮಹಿಳಾ ಮತದಾರರು ಇದ್ದಾರೆ.

 
ಕಚೇರಿ ಕಾರ್ಯ ಎಂದಿನಂತೆ:

       ‘‘ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಅದರಂತೆ ನಗರಾದ್ಯಂತ ಫ್ಲೆಕ್ಸ್ ಇತ್ಯಾದಿಯನ್ನು ತೆರವುಗೊಳಿಸಲಾಗಿದೆ.

      ಪಾಲಿಕೆಯ ಜನಪ್ರತಿನಿಧಿಗಳ ಕೊಠಡಿಗಳನ್ನು ಮತ್ತು ವಾಹನಗಳನ್ನು ಹಿಂಪಡೆಯಲಾಗಿದೆ. ನೀತಿ ಸಂಹಿತೆ ಪ್ರಕಾರ ಸಭೆ ನಡೆಸುವಂತಿಲ್ಲ. ಹೊಸ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಹೊಸ ಟೆಂಡರ್ ಕರೆಯುವಂತಿಲ್ಲ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿ ಮುಂದುವರೆಯಬಹುದು. ಪಾಲಿಕೆ ಕಚೇರಿಯ ಕಾರ್ಯಗಳು ಎಂದಿನಂತೆ ನಡೆಯಲಿವೆ. ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ, ಜನನ-ಮರಣ ಪ್ರಮಾಣ ಪತ್ರ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಯಲ್ಲಿ ಕೆಲಸ ಎಂದಿನಂತೆ ನಡೆಯುವುದು. ಈಗ ಚುನಾವಣೆ ಇರುವುದರಿಂದ ಒಂದು ವೇಳೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿ ಇಲ್ಲದೆ ವಿಳಂಬವಾದರೆ, ಸಾರ್ವಜನಿಕರು ಸಹಕರಿಸಬೇಕು’’ ಎಂದು ಪಾಲಿಕೆಯ ಆಯುಕ್ತ ಎಲ್. ಮಂಜುನಾಥಸ್ವಾಮಿ ಅವರು ‘‘ಪ್ರಜಾಪ್ರಗತಿ’’ಯೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here