ಪಾಲಿಕೆ ನೂತನ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭ

0
139

ತುಮಕೂರು:

             ನಗರದ ಬಿ.ಎಚ್.ರಸ್ತೆಯಲ್ಲಿರುವ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ವತಿಯಿಂದ ತುಮಕೂರು ಮಹಾನಗರ ಪಾಲಿಕೆಯ ನೂತನ ಸದಸ್ಯರುಗಳಾದ ನಳಿನಾ, ಮಂಜುಳ, ರೂಪಶ್ರೀ ಮತ್ತು ಮಹೇಶ್ ಅವರುಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನಯ್ಯ ಮಾತನಾಡಿ ನಾವುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಆಶೋತ್ತರಗಳಿಗೆ ಸಪಂದಿಸಿ ಉತ್ತಮವಾದ ಕೆಲಸ ಮಾಡಬೇಕು. ಬಡವರ ಕಷ್ಟಗಳಿಗೆ ಸ್ಪಂದಿಸಬೇಕು. ಜಾತಿ, ಮತ ಬೇಧವಿಲ್ಲದೆ ಸಮಾಜ ಸೇವೆ ಮಾಡಬೇಕು. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಬೇಕು ಎಂದರು.
ನಿಲಯದ ಅಧ್ಯಕ್ಷ ಜಿ.ಎನ್.ಬಸವರಾಜಪ್ಪ ಮಾತನಾಡಿ ಸಮಾಜದ ಒಳಿತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ನಗರದ ಅಭಿವೃದ್ಧಿಗೆ ಶ್ರಮಿಸಿ ತುಮಕೂರು ನಗರವನ್ನು ಉತ್ತಮ ಮಹಾನಗರ ಪಾಲಿಕೆ ಎಂಬ ಹೆಸರನ್ನು ತರಲು ವಿಜೇತ ಅಭ್ಯರ್ಥಿಗಳು ಶ್ರಮಿಸಬೇಕು. ಜನಗಳ ಒಡನಾಟ ಯಾವಾಗಲೂ ಇಟ್ಟುಕೊಂಡಿರಬೇಕು ಎಂದರು.
ಈ ಸಂದರ್ಭದಲ್ಲಿ ನಿಲಯದ ಉಪಾಧ್ಯಕ್ಷ ಎಂ.ಆರ್. ಸಿದ್ಧಲಿಂಗಯ್ಯ, ಜಂಟಿ ಕಾರ್ಯದರ್ಶಿ ಎನ್.ಜಯಣ್ಣ, ನಿರ್ದೇಶಕರಾದ ಮಹದೇವಯ್ಯ, ಎಂ.ಎನ್.ರೇಣುಕಾರಾಧ್ಯ, ಕೆ.ಎಸ್.ವಿಶ್ವನಾಥ್, ವಿಶ್ವನಾಥಸ್ವಾಮಿ, ನಟರಾಜು ಮುಂತಾದವರು ಉಪಸ್ಥಿತರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here