ಪಾಲಿಕೆ: ಮತ್ತೆ ತೆರೆದ ಜನಪ್ರತಿನಿಧಿಗಳ ಕಚೇರಿ

 -  - 


ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳಲ್ಲಿ ಮತ್ತೆ ಮಂದಹಾಸ ಮರುಕಳಿಸಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿವಿಧ‘ ಸೌಲ‘ಭ್ಯಗಳನ್ನು ಕಳೆದುಕೊಂಡಿದ್ದ ಜನಪ್ರತಿನಿಧಿಗಳಿಗೆ ಇದೀಗ ಮತ್ತೆ ಆ ಸೌಲಭ್ಯಗಳು ಈ ಮಂದಹಾಸಕ್ಕೆ ಕಾರಣವಾಗಿದೆ.
ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಗೊಂಡ ಕ್ಷಣದಿಂದಲೇ ನಿಯಮಾನುಸಾರ ಜನಪ್ರತಿನಿಧಿಗಳಿಗಿದ್ದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯಲಾಗಿತ್ತು. ಮೇಯರ್, ಉಪಮೇಯರ್ ಅವರಿಗೆ ನೀಡಲಾಗಿದ್ದ ಅಧಿಕೃತ ಕಾರುಗಳನ್ನು ಹಿಂಪಡೆಯಲಾಗಿತ್ತು. ಮೇಯರ್, ಉಪಮೇಯರ್ ಕೊಠಡಿಗಳಿಗೆ ಬೀಗಮುದ್ರೆ ಹಾಕಲಾಗಿತ್ತು.

 

ಮತ್ತೆ ಚುನಾವಣಾ ಕಾರ್ಯ
ಈಗಷ್ಟೇ ವಿಧಾನ ಸಭೆ ಚುನಾವಣೆ ಕಾರ್ಯ ಮುಗಿದು ಪಾಲಿಕೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ನಿಟ್ಟುಸಿರು ಬಿಟ್ಟಿದ್ದರೂ, ಇದೇ ಬು‘ವಾರದಿಂದ ಮಹಾನಗರ ಪಾಲಿಕೆಯ ಮುಂಬರುವ (ಈ ವರ್ಷಾಂತ್ಯದೊಳಗೆ) ಚುನಾವಣೆಗೆ ಸಂಬಂಧಿಸಿದ ಪ್ರಾಥಮಿಕ ಕಾರ್ಯಗಳನ್ನು ಆರಂಭಿಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗವು ಪಾಲಿಕೆ ಅಧಿಕಾರಿಗಳ ಹೆಗಲಿಗೆ ಹೊರಿಸಿದೆ.
ಅದರಂತೆ ಮೇ 16 ರಿಂದ 20 ರವರೆಗೆ ವಾರ್ಡ್‌ಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸಬೇಕು. ಮೇ 25 ರಿಂದ 31 ರವರೆಗೆ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಬೇಕು. ಜೂನ್ 11 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಜೂನ್ 17 ಕೊನೆಯ ದಿನವಾಗಿದೆ. ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಜೂನ್ 22 ಕೊನೆಯ ದಿನವಾಗಿದೆ. ಜೂನ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕಾಗಿದೆ.

ಸ್ಥಾಯಿ ಸಮಿತಿ ಕೊಠಡಿಗಳಿಗೂ ಬೀಗ ಹಾಕಲಾಗಿತ್ತು. ಮೇಯರ್ ಆದಿಯಾಗಿ ಯಾವುದೇ ಕಾರ್ಪೊರೇಟರ್‌ಗಳಿಗೆ ಪಾಲಿಕೆ ಕಚೇರಿಯಲ್ಲಿ ಕುಳಿತುಕೊಳ್ಳಲೂ ಸ್ಥಳವಿಲ್ಲದಂತಾಗಿತ್ತು. ಮಹಾನಗರ ಪಾಲಿಕೆಯ ಕಚೇರಿಯು ಬಹುತೇಕ ಚುನಾವಣಾ ಕಚೇರಿಯಂತಾಗಿತ್ತು. ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನರಿತಿದ್ದ ಅನೇಕ ‘‘ಬುದ್ಧಿವಂತ’’ ಕಾರ್ಪೊರೇಟರ್‌ಗಳು ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ಪಾಲಿಕೆ ಕಚೇರಿಯತ್ತ ತಲೆಯನ್ನೇ ಹಾಕಲಿಲ್ಲ.
ಹೊಸದಾಗಿ ಮೇಯರ್ ಆಗಿದ್ದ ಸುಧೀಶ್ವರ್ (ಕಾಂಗ್ರೆಸ್) ಅವರು ನೀತಿ ಸಂಹಿತೆ ಜಾರಿಯ ಬಳಿಕವೂ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದರಾದರೂ, ಅವರಿಗೆ ಅವರ ಅಧಿಕೃತ ಕೊಠಡಿಯಲ್ಲಿ ಕುಳಿತುಕೊಳ್ಳಲು ಅವಕಾಶವೇ ಇರಲಿಲ್ಲ. ಆದರೂ ಅವರು ಪಾಲಿಕೆ ಕಚೇರಿಗೆ ನಿಯಮಿತವಾಗಿ ಬರುವುದನ್ನು ತಪ್ಪಿಸಲಿಲ್ಲ. ಅಂತೂ ಇಂತೂ ಪಾಲಿಕೆ ಕಚೇರಿಯ ಆಯುಕ್ತರ ಕೊಠಡಿ ಪಕ್ಕದಲ್ಲೇ ಇರುವ ‘‘ಸಹ ಕಾರ್ಯದರ್ಶಿ’’ ಕೊಠಡಿಯಲ್ಲೇ ಮೇಯರ್ ಸುಧೀಶ್ವರ್ ಕುಳಿತುಕೊಂಡು ನಿರ್ಗಮಿಸುತ್ತಿದ್ದರು.
ಆದರೆ ಈಗ ಚುನಾವಣೆ ಮುಗಿದಿರುವುದರಿಂದ ಮಹಾನಗರ ಪಾಲಿಕೆ ಕಚೇರಿಯು ಬು‘ಧವಾರ (ಮೇ 16) ಬಹುತೇಕ ಸಹಜ ಸ್ಥಿತಿಗೆ ಮರಳಿದಂತಾಗಿತ್ತು. ಮೇಯರ್ ಕೊಠಡಿಯನ್ನು ತೆರೆದಿದ್ದು, ಮೇಯರ್ ಸುಧೀಶ್ವರ್ ಕೊಠಡಿಯಲ್ಲಿ ಕುಳಿತು ಸಂಭ್ರಮಿಸಿದರು.. ಬಿಜೆಪಿಯ ಮತ್ತು ಜೆಡಿಎಸ್‌ನ ಕೆಲವು ಕಾರ್ಪೊರೇಟರ್‌ಗಳು ಮೇಯರ್ ಕೊಠಡಿಯಲ್ಲಿ ಆಸೀನರಾಗಿ ಮೇಯರ್ ಜೊತೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದುದು ಕಂಡುಬಂದಿತು.
ಉಪಮೇಯರ್ ಕೊಠಡಿ, ಸ್ಥಾಯಿ ಸಮಿತಿಗಳ ಕೊಠಡಿಗಳು ತೆರೆದಿದ್ದವು. ಮೇಯರ್ ಮತ್ತು ಉಪಮೇಯರ್‌ಗೆ ಅಧಿಕೃತ ವಾಹನಗಳನ್ನು ಮತ್ತೆ ನೀಡಲಾಗಿದೆ.
ಪಾಲಿಕೆ ಕಚೇರಿಯು ಚುನಾವಣಾ ಒತ್ತಡಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದರೂ, ಬು‘ವಾರ ಪಾಲಿಕೆ ಕಚೇರಿಯಲ್ಲಿ ಅಂತಹ ಜನಜಂಗುಳಿ ಕಾಣಲಿಲ್ಲ.

 

 

comments icon 0 comments
0 notes
3 views
bookmark icon

Write a comment...

Your email address will not be published. Required fields are marked *