ಪಾಶ್ಚಿಮಾತ್ಯರ ಕೆಟ್ಟ ಸುಸಂಸ್ಕೃತ ಮಾರುಹೋಗುತ್ತಿರುವ ಯುವ ಜನತೆ: ಶ್ರೀಗಳ ವಿಷಾದ

0
25

 

ತುರುವೇಕೆರೆ

    ಭಾರತೀಯ ಸುಸಂಸ್ಕೃತನ್ನು ಪಾಶ್ಚಿಮಾತ್ಯರು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತ ದೇಶದ ಯುವ ಜನತೆ ಪಾಶ್ಚಿಮಾತ್ಯರ ಕೆಟ್ಟ ಸುಸಂಸ್ಕೃತಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ಕೆರೆಕೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಮಹಾ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

   ತಾಲ್ಲೂಕಿನ ಮುನಿಯೂರು ವಿವೇಕಾನಂದ ನಗರದ ಕಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಲಯಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

   ನಮ್ಮ ದೇಶದ ಧರ್ಮ, ಸುಸಂಸ್ಕೃತ, ಧಾರ್ಮಿಕತೆಯನ್ನು ಮುನ್ನಡೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ. ಡಾ.ವಿರೇಂದ್ರ ಹೆಗಡೆಯವರು ಧರ್ಮಸ್ಥಳ ಸಂಸ್ಥೆಯ ಮೂಲಕ ಲಕ್ಷಾಂತರ ಯುವಕರಿಗೆ, ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಲ್ಪಿಸಿಕೊಡುವ ಹತ್ತಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂತಹ ಕಾರ್ಯಕ್ರಮದಲ್ಲಿಯೂ ಸಹ ದೇವರು, ನಂಬಿಕೆ, ಧರ್ಮ, ಸುಸಂಸ್ಕೃತಯನ್ನು ಉಳಿಸಲು ಇಂತಹ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವೂ ಒಂದು ಎಂದು ಅಭಿಪ್ರಾಯಪಟ್ಟರು.

   ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಕೊಂಡಜ್ಜಿವಿಶ್ವನಾಥ್ ಮಾತನಾಡಿ ಧರ್ಮಸ್ಥಳ ಸಂಸ್ಥೆ ತಾಲ್ಲೂಕಿಗೆ ಬಂದ ನಂತರ ಮಹಿಳೆಯರು ಹಾಗೂ ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡು ಉತ್ತಮ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.
ತುಮುಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ರೈತರು ಸ್ವಾವಲಂಬಿಗಳಾಗಿ ಬದುಕಲು ಧರ್ಮಸ್ಥಳ ಸಂಸ್ಥೆಯಿಂದ ಹೈನುಗಾರಿಕೆಗೆ ಪ್ರೋತ್ಸಾಹಿಸುತ್ತಿದ್ದು ತಾಲ್ಲೂಕಿನ 20 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ 1 ಲಕ್ಷರೂಗಳಂತೆ ನೀಡಲಾಗಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಎಸ್.ಬಸವರಾಜು ವಹಿಸಿದ್ದರು. ಜಿಲ್ಲಾ ನಿರ್ದೇಶಕ ರಾಧಾಕೃಷ್ಣರಾವ್, ತಾಲ್ಲೂಕು ಯೋಜನಾಧಿಕಾರಿ ಧರಣಪ್ಪಮೂಲ್ಯ, ಮುಖಂಡ ಕೃಷ್ಣಮೂರ್ತಿ ಮಾತನಾಡಿದರು. ಧರ್ಮಸ್ಥಳ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಯೋಗೀಶ್, ಮಂಜುಳ, ದೇವರಾಜು, ಮುನಿಯಪ್ಪ, ಶಂಕರಪ್ಪ, ಗಾಯತ್ರಿ, ಮಮತಾಅಶೋಕ್, ಸಿದ್ದಗಂಗಮ್ಮ, ಗೌರಮ್ಮ, ಪುಷ್ಪಾ ಸೇರಿದಂತೆ ಸಂಘದ ಸದಸ್ಯರುಗಳು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here