ಪಿಂಚಣಿ ಅದಾಲತ್‍ನಲ್ಲಿ ವಯೋವೃದ್ಧರ ಸಮಸ್ಯೆಗೆ ಅಧಿಕಾರಿಗಳ ಸ್ಪಂಧನೆ

0
18

ಕುಣಿಗಲ್ :

   ತಾಲ್ಲೂಕಿನ ಹುತ್ರಿದುರ್ಗ ಸಂತೆಪೇಟೆಯಲ್ಲಿ ವಿವಿಧ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ತಹಸೀಲ್ದಾರ್ ನಾಗರಾಜು ಅವರು ಆ ಭಾಗದ ಕಂದಾಯ ಅಧಿಕಾರಿಗಳೊಂದಿಗೆ ಸೇರಿ ನೂರಾರು ಗ್ರಾಮಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಆದೇಶ ನೀಡಿದರು.

    ಸಂತೇಪೇಟೆ ಸೇರಿದಂತೆ ವಿವಿಧ ಗ್ರಾಮಗಳಿಂದ ಮಾಹಿತಿ ತಿಳಿದ ನೂರಾರು ವಯೋವೃದ್ಧರು ಸೇರಿದಂತೆ ಹಲವರು ಭಾಗವಹಿಸಿ ತಮಗೆ ಸರ್ಕಾರದಿಂದ ಮಂಜೂರಾಗಿ ಬರುತ್ತಿರುವ ಪಿಂಚಣಿ ಹಣ ಕಾರಣಾಂತರದಿಂದ ನಿಂತು ಹೋಗಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ನಾಗರಾಜ್ ವಯೋವೃದ್ಧರ ಸಮಸ್ಯೆಯನ್ನು ಆಲಿಸಿ ನಂತರ ದಾಖಲಾತಿಗಳನ್ನ ಪರಿಶೀಲಿಸಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಅದೇಶ ನೀಡಿದರು.

     ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಅವರು ಹುತ್ರಿ ಹಾಗೂ ಸಂತೆಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈತರ ಮತ್ತು ವಯೋವೃದ್ಧರ ಸಮಸ್ಯೆಗಳನ್ನ ತಹಸೀಲ್ದಾರ್ ಗಮನಕ್ಕೆ ತಂದು ಸ್ಪಂದಿಸಿ ಶೀಘ್ರವಾಗಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

LEAVE A REPLY

Please enter your comment!
Please enter your name here