ಪಿಎನ್ಬಿ ಹಗರಣ: ತಪಾಸಣೆ ವರದಿ ಪ್ರತಿಯನ್ನು ಬಹಿರಂಗಪಡಿಸಲು ಆರ್ ಬಿಐ ನಕಾರ

0
22

ನವದೆಹಲಿ:

ಪಂಜಾಬ್ ನ್ಯಾಷನಲ್ ಬ್ಯಾಂಕಿನ ತಪಾಸಣೆ ವರದಿಯನ್ನು ಬಹಿರಂಗಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರಾಕರಿಸಿದೆ.

ತನಿಖಾ ವರದಿಯನ್ನು ಬಹಿರಂಗಪಡಿಸಿದರೆ ಅಪರಾಧಿಗಳ ತನಿಖಾ ಪ್ರಕ್ರಿಯೆಯನ್ನು ಅಥವಾ ಕಾನೂನು ಕ್ರಮವನ್ನು ತಡೆಹಿಡಿದಂತಾಗುತ್ತದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಉಲ್ಲೇಖ ವರದಿ ಬಹಿರಂಗಪಡಿಸುವುದನ್ನು ತಡೆಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಿಸರ್ವ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂಬ ಆರೋಪದ ತನಿಖೆಗೆ ಸಂಬಂಧಿಸಿದಂತೆ ತನ್ನ ಬಳಿ ನಿರ್ದಿಷ್ಟ ಮಾಹಿತಿಯಿಲ್ಲ ಮತ್ತು ವಿವರಗಳನ್ನು ನೀಡಲು ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸೂಚಿಸಿ ಅರ್ಜಿಯನ್ನು ವರ್ಗಾಯಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿಯೇ ಅತಿದೊಡ್ಡ ವಂಚನೆ ಪ್ರಕರಣವೆಂದು ಪರಿಗಣಿಸಲಾಗಿದೆ. ಬ್ಯಾಂಕ್ ಹಗರಣದ ಆರೋಪಿಗಳು ವಜ್ರೋದ್ಯಮಿ ನೀರವ್ ಮೋದಿ ಮತ್ತು ಅವರ ಸಂಬಂಧಿ ಗೀತಾಂಜಲಿ ಜೆಮ್ಸಿನ ಮೆಹುಲ್ ಚೊಕ್ಸಿಯಾಗಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಆರ್ ಬಿಐ, ಬ್ಯಾಂಕುಗಳ ಲೆಕ್ಕಪರಿಶೋಧನೆಯನ್ನು ಆರ್ ಬಿಐ ನಡೆಸುವುದಿಲ್ಲ. ಅದು ತಪಾಸಣೆ ಮತ್ತು ಬ್ಯಾಂಕುಗಳ ಮೇಲ್ವಿಚಾರಣೆ ಮಾತ್ರ ನಡೆಸುತ್ತದೆ ಎಂದು ಹೇಳಿದೆ.

LEAVE A REPLY

Please enter your comment!
Please enter your name here