ಪೆಪ್ಸಿಕೋ ಸಿಇಒ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ ಇಂದ್ರಾ ನೂಯಿ

0
27

 ಹೊಸದಿಲ್ಲಿ:

      ನ್ಯೂಯಾರ್ಕ್ ಮೂಲದ ಸಾಫ್ಟ್ಡ್ರಿಂಕ್ ಕಂಪನಿ ಪೆಪ್ಸಿಕೋ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ಥಾನದಿಂದ ಇಂದ್ರಾ ನೂಯಿ ಕೆಳಕ್ಕಿಳಿಯಲು ನಿರ್ಧರಿಸಿದ್ದಾರೆ.

      ಭಾರತೀಯ ಮೂಲದ ಇಂದ್ರಾ ನೂಯಿ ಕಳೆದ 12 ವರ್ಷಗಳಿಂದ ಪೆಪ್ಸಿಕೋ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದ್ರಾ ನೂಯಿ ಬಳಿಕ ಪೆಪ್ಸಿಕೋ ಅಧ್ಯಕ್ಷ ರಾಮೊನ್ ಲಗಾರ್ತ ಕಂಪನಿಯ ಸಿಇಒ ಆಗಿ ಮುಂದುವರಿಯಲಿದ್ದಾರೆ. ರಾಮೋನ್ ನೇಮಕವನ್ನು ಪೆಪ್ಸಿ ನಿರ್ದೇಶಕರ ಮಂಡಳಿ ಅನುಮೋದಿಸಿದೆ.

      ಇಂದ್ರಾ ನೂಯಿ ಅ. 3ರಂದು ಪೆಪ್ಸಿ ಸಿಇಒ ಸ್ಥಾನದಿಂದ ಕೆಳಕ್ಕಿಳಿಯಲಿದ್ದಾರೆ. ಆದರೆ 2019ರ ಆರಂಭದವರೆಗೂ ಅವರು ಪೆಪ್ಸಿ ಕಂಪನಿಯ ಆಡಳಿತ ಮತ್ತು ಕಾರ್ಯನಿರ್ವಹಣೆಯ ಸುಗಮಕ್ಕಾಗಿ ಕಂಪನಿಯಲ್ಲಿ ಮುಂದುವರಿಯಲಿದ್ದಾರೆ.

LEAVE A REPLY

Please enter your comment!
Please enter your name here