ಪೆರೂರು ಡ್ಯಾಂಗೆ ಆಂಧ್ರದ ನೀರು : ಒಂದೂವರೆ ಲಕ್ಷ ಹೆಕ್ಟೇರ್ ಗೆ ನೀರಾವರಿ

0
29

ಪಾವಗಡ:


      ಪೇರೂರು ಡ್ಯಾಂಗೆ ಆಂಧ್ರ ಸರ್ಕಾರ ನೀರು ತಂದ ಪರಿಣಾಮ ಪಾವಗಡ ತಾಲ್ಲೂಕಿನ ಆಂಧ್ರ ಗಡಿ ಭಾಗದ ಹೋಬಳಿಗಳಾದ ನಾಗಲಮಡಿಕೆ, ವೈ.ಎನ್.ಹೊಸಕೋಟೆ ಹೋಬಳಿಯ ವ್ಯಾಪ್ತಿಗೆ ಬರುವ ಸುಮಾರು 100 ಹಳ್ಳಿಗಳ ಜನತೆಗೆ ಹಾಗೂ ಸಾವಿರಾರು ಕೃಷಿ ಕುಟುಂಬಗಳ ಬದುಕಿನಲ್ಲಿ ಹೊಸ ಬೆಳಕು ಚೆಲ್ಲಿದೆ.

      ಮಾನ್ಯ ಚಂದ್ರಬಾಬು ನಾಯ್ಡುರವರು 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಾದಯಾತ್ರೆಯ ಮೂಲಕ ಪೇರೂರಿನ ಡ್ಯಾಂ ಅನ್ನು ವೀಕ್ಷಿಸಿ ನದಿಮೂಲಗಳಿಂದ ಡ್ಯಾಂಗೆ ನೀರನ್ನು ಹರಿಸುತ್ತೇನೆ ಎಂಬ ಭರವಸೆ ನೀಡಿದ್ದರು. ಕೊಟ್ಟ ಮಾತಿಗೆ ತಪ್ಪದೆ ಡ್ಯಾಂಗೆ ನೀರನ್ನು ತಂದು ಸುಮಾರು ಒಂದೂವರೆ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಈ ಭಾಗದ ಜನತೆಯ ಜೀವನ ಮಟ್ಟ ಸುಧಾರಿಸಿದಂತಾಗಿದೆ.

      ರಾಯಲಸೀಮೆಯ ಒಂದು ಭಾಗವಾದ ಅನಂತಪುರ ಜಿಲ್ಲೆಯ ರ್ಯಾಪ್ತಾಡು ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಪೇರೂರು ಡ್ಯಾಂಗೆ 52 ಕಿ.ಮೀ. ದೂರವಿರುವ ಕೃಷ್ಣಾನದಿಯಿಂದ 1.7 ಟಿಎಂಸಿ ನೀರನ್ನು ಪೆನ್ನಾ ನದಿ ಮೇಲ್ಭಾಗದ ಕಾಲುವೆಯಿಂದ ಸುಮಾರು 800 ಕೋಟಿ ವೆಚ್ಚದ ಬಹುದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡು ಕೃಷ್ಣಾನದಿಯ ನೀರನ್ನು ಜಿಡಿಪಲ್ಲಿ ಡ್ಯಾಂನಲ್ಲಿ ಸಂಗ್ರಹಿಸಿ ಕಾಲುವೆ ಮುಖಾಂತರ ಪೇರೂರು ಡ್ಯಾಂಗೆ ನೀಡಲಾಗುತ್ತಿದೆ.

      ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡುರವರು ಪೇರೂರು ಡ್ಯಾಂಗೆ ಕೃಷ್ಣನದಿಯಿಂದ ಕಾಲುವೆ ಮುಖಾಂತರ ನೀರನ್ನು ನೀಡುವ ಯೋಜನೆಗೆ ಚಾಲನೆ ನೀಡಿ ಈ ಭಾಗದಲ್ಲಿನ ಐವತ್ತು ಸಾವಿರ ನೀರಾವರಿ ಭೂಮಿಗೆ ಅನುಕೂಲವಾಗಲಿದ್ದು, ಈ ಯೋಜನೆಗೆ ದಿವಂಗತ ಪೆರಿಟಾಲ ರವೀಂದ್ರರವರ ಹೆಸರು ನಾಮಕರಣ ಮಾಡಲಾಗುವುದೆಂದು ತಿಳಿಸಿದ ಅವರು, ನೀರು ಕೊಡಲೇಬೇಕು ಎಂಬ ನಿರ್ಣಯದಿಂದ ಕೇವಲ 9 ತಿಂಗಳಲ್ಲೇ ಯೋಜನೆಯನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದರು.

      ಪಾವಗಡ ತಾಲ್ಲೂಕಿನ ಚಿಕ್ಕಹಳ್ಳಿ , ಬಿ.ಕೆ.ಹಳ್ಳಿ , ವಳ್ಳೂರು , ಪೋತಗಾನಹಳ್ಳಿ , ತಿರುಮಣೆ , ರ್ಯಾಪ್ಟೆ ಮುಂತಾದ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳು ಆಂಧ್ರ ಗಡಿಯಲ್ಲಿರುವ ಕಾರಣ ಈ ಭಾಗದ ರೈತರಿಗೆ ಆನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಆಂಧ್ರ ಸರ್ಕಾರದ ನೀರಾವರಿ ಸಚಿವರಾದ ದೇವಿನೇನಿ ಉಮಾಮಹೇಶ್ವರ್ ರಾವ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಪೆರಿಟಾಲ ಸುನಿತಾ ಉಪಸ್ಥಿತರಿದ್ದರು.
 

LEAVE A REPLY

Please enter your comment!
Please enter your name here