ಪೊಲೀಸರ ಅಥಿತಿಯಾದ ಚಾಲಾಕಿ ಕಳ್ಳಿಯರು

0
10

ಬೆಂಗಳೂರು

ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಕ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಜೋಡಿ ಕಳ್ಳಿಯರನ್ನು ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದ ಸಿಸಿಟಿವಿ ದೃಶ್ಯಾವಳಿ ಬಯಲಾಗಿದ್ದು ಪೊಲೀಸರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಬಿಎಂಟಿಸಿ ಬಸ್‍ನಲ್ಲಿ ಸಂಚರಿಸುತ್ತಾ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಅಕ್ಕ-ತಂಗಿಯೇ ಕಳ್ಳತನ ಮಾಡುತ್ತಿದ್ದರು.

ಇವರಿಬ್ಬರು ಪೂಲೀಸರಿಂದ ತಪ್ಪಿಸಿಕೊಂಡು ಕಳ್ಳತನ ಮಾಡುತ್ತಿದ್ದರು.ಇದನ್ನು ಸವಾಲಾಗಿ ಸ್ವೀಕರಿಸಿದ ಪೂಲೀಸರು ಆರೋಪಿಗಳಾದ ಉಷಾವಾಣಿ ಹಾಗೂ ಮೀನಾಕ್ಷಿ ಎಂಬವರ ಪತ್ತೆಗೆ ನಿದ್ದೆಗೆಟ್ಟು ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. ಎಲ್ಲ ಬಸ್ ನಿಲ್ದಾಣದಲ್ಲಿ ಮಫ್ತಿಯಲ್ಲೇ ನಿಂತು ಆರೋಪಿಗಳನ್ನು ಕೊನೆಗೂ ಭೇಟೆಯಾಡಿದ್ದಾರೆ. ಬಂಧಿತರಿಂದ 1 ಕೆ.ಜಿ.ಗೂ ಹೆಚ್ಚು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಸತತ ಎರಡು ತಿಂಗಳು ಬಸ್ ನಿಲ್ದಾಣದಲ್ಲೇ ಠಿಕಾಣಿ ಹೂಡಿದ್ದ ಆರ್‍ಎಂಸಿ ಯಾರ್ಡ್ ಪೂಲೀಸರು, ಕಳ್ಳಿಯರನ್ನು ಗಮನಿಸಿ ಬಂಧಿಸಿರುವ ಸಿಸಿ ಟಿವಿ ದೃಶ್ಯಾವಳಿಗಳು ಬಯಲಾಗಿದ್ದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here