ಪೊಲೀಸರ ಮಿಂಚಿನ ಕಾರ್ಯಾಚರಣೆ; 36 ಗಂಟೆಗಳಲ್ಲೇ ಕೊಲೆ ಆರೋಪಿ ಸೆರೆ

0
30

 

ಚಿತ್ರದುರ್ಗ

  ಹೊಳಲ್ಕೆರೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಶೂರ ಪತ್ರಿಕೆಯ ಮಂಜುನಾಥ್ ಕೊಲೆ ಆರೋಪಿಯನ್ನು ಕೇವಲ 36 ಗಂಟೆಗಳಲ್ಲೇ ಪತ್ತೆ ಹಚ್ಚಿ ಬಂಧಿಸಿದ್ದಾರೆ.

  ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಆಗಸ್ಟ್ 6ರಂದು ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಜಮೀನಿನಲ್ಲಿ ಸುಟ್ಟ ಸ್ಕಾರ್ಫಿಯೋ ವಾಹನ ಮತ್ತು ಸುಟ್ಟ ವ್ಯಕ್ತಿಯ ದೇಹ ಪತ್ತೆಯಾಯಿತು. ಜಮೀನಿನ ಮಾಲೀಕ ನಾಗರಾಜ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಾಗ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ವ್ಯಕ್ತಿಯನ್ನು ಗುರುತಿಸಲಾಗದಷ್ಟು ಸುಟ್ಟು ಹೋಗಿತ್ತು ಎಂದಿದ್ದಾರೆ.

  ಈ ಬಗ್ಗೆ ದೂರು ದಾಖಲಿಸಿಕೊಂಡ ಹೊಳಲ್ಕೆರೆ ಪೊಲೀಸರು ತನಿಖೆ ನಡೆಸಿದಾಗ ಚಿತ್ರದುರ್ಗ ನಗರದ ಬುರುಜನಹಟ್ಟಿ ವಾಸಿ ಶೂರ ಪತ್ರಿಕೆಯ ಮಂಜುನಾಥ್(40) ಎಂಬುದು ಅವರ ಕುಟುಂಬದ ಸದಸ್ಯರಿಂದ ತಿಳಿದುಬಂದಿತ್ತು. ಮಂಜುನಾಥ್ ಕೈಗೆ ಧರಿಸುತ್ತಿದ್ದ ಮೂರ್ನಾಲ್ಕು ಉಂಗುರಗಳ ಆಧಾರದ ಮೇಲೆ ಕುಟುಂಬದ ಸದಸ್ಯರು ಮೃತದೇಹವನ್ನು ಗುರುತಿಸಿದರು.

  ಸುಳಿವು ನೀಡಿದ ಮೊಬೈಲ್: ಕೊಲೆಯಾದ ಮಂಜುನಾಥ್ ಮೂರು ಮೊಬೈಲ್ ಬಳಕೆ ಮಾಡುತ್ತಿದ್ದ ಆರೋಪಿ ಮಂಜುನಾಥ್ ಬಳಿಯಿದ್ದ ಎರಡು ಮೊಬೈಲ್ ಆಫ್ ಮಾಡಿದ್ದಾನೆ. ಆದರೆ ಮಂಜುನಾಥ್ ಬಳಿ ಹಳೆಯ ಸಣ್ಣ ಮೊಬೈಲ್ ಮಾತ್ರ ಕಿಸೆಯಲ್ಲಿತ್ತು. ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಮಾಡಿದಾಗ ಅದು ಹೊಳಲ್ಕೆರೆ ಲೋಕೇಷನ್ ತೋರಿಸಿದೆ. ಅಲ್ಲಿಗೆ ಮಂಜುನಾಥ್ ಹೊಳಲ್ಕೆರೆ ಕಡೆಗೆ ಹೋಗಿರುವುದು ಪತ್ತೆಯಾಯಿತು.

   ಹೊಳಲ್ಕೆರೆ ಹೊರವಲಯದಲ್ಲಿ ಸ್ಕಾರ್ಪಿಯೋ ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಶವ,ಏಂ 03 ಒಈ 8906ಸ್ಕಾರ್ಪಿಯೋ ವಾಹನದಲ್ಲಿ ಪತ್ತೆಯಾಗಿದ್ದ ಮೃತದೇಹ, ಮೊಬೈಲ್ ಸಂಪರ್ಕದ ಜಾಡು ಹಿಡಿದು ಆರೋಪಿಯನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

  ಮೃತ ಮಂಜುನಾಥ್(40) ಮತ್ತು ಕೊಲೆ ಆರೋಪಿ ವಿಜಯ್ ಕುಮಾರ್ ನಡುವೆ ಹಣದ ವ್ಯವಹಾರದಲ್ಲಿ ವೈಷಮ್ಯ ಹಿನ್ನೆಲೆ,ಮಂಜುನಾಥ್‍ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ನಂತರ ಸ್ಕಾರ್ಪಿಯೋ ಸಮೇತ ಸುಟ್ಟುಹಾಕಿದ್ದ ವಿಜಯ್ ಕುಮಾರ್,ನಿವೃತ್ತ ಡಿಎಆರ್ ಪೆÇಲೀಸ್ ಪೇದೆ ರಾಮಲಿಂಗಪ್ಪ ಪುತ್ರ ವಿಜಯ್ ಕುಮಾರ್ ಕೊಲೆ ಆರೋಪಿ,ಹೋಂಗಾರ್ಡ್ ವೃತ್ತಿಯಲ್ಲಿರುವ ಕೊಲೆ ಆರೋಪಿ ವಿಜಯ್ ಕುಮಾರ್ ಆಗಿದ್ದಾನೆ.

  36 ಗಂಟೆಗಳಲ್ಲಿ ಕೊಲೆ ಪ್ರಕರಣ ಭೇದಿಸಲಾಗಿದೆ. ಹೊಳಲ್ಕೆರೆ ಸಿಪಿಐ ಮಧುಸೂಧನ್, ಪಿಎಸ್‍ಐ ಮಹೇಶ್, ಚಿಕ್ಕಜಾಜೂರು ಪಿಎಸ್‍ಐ ಪಿ.ಬಿ.ಮಧು, ಸಿಬ್ಬಂದಿಗಳಾದ ತುಕರಾಂ ಬಾಬು, ಕೆ.ಜೆ.ಲೋಕೇಶ್, ದೇವೇಂದ್ರಪ್ಪ, ತಿಮ್ಮಣ್ಣ,. ರಾಘವೇಂದ್ರ, ಆನಂದ, ಶಿವಾನಂದ, ಅವಿನಾಶ, ರಮೇಶ್, ಚಂದ್ರಶೇಖರ್, ರವಿಕುಮಾರ, ಹಾಲೇಶ್, ಜಗದೀಶ್, ರಂಗಸ್ವಾಮಿ, ಮೋಹನ್‍ನಾಯ್ಕ್, ಡಿಪಿಓ ರಾಘವೇಂದ್ರ ಅವರು ಕಾರ್ಯಚರನೆ ನಡೆಸಿದ್ದು ಸೂಕ್ತ ಬಹುಮಾನ ಕೂಡ ಕೊಡಲಾಗುವುದು ಎಂದು ತಿಳಿಸಿದರು.ಹೆಚ್ಚುವರಿ ಎಸ್ಪಿ ರಾಮ್ ಲಕ್ಷ್ಮಣ ಅರಸಿದ್ದಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here