ಪೋಸ್ಟರ್‍ನಲ್ಲಿ ಹೆಸರು ಹಾಕದಿದ್ದಕ್ಕೆ ಬೇಸರ : ಸಭೆಯಿಂದ ಹೊರ ನಡೆದ ಜಿಲ್ಲಾ ಉಸ್ತುವಾರಿ ಸಚಿವ

0
42

ಮೈಸೂರು:

      ದಸರಾ ಕಾರ್ಯಕಾರಿ ಸಮಿತಿಯ ಪೋಸ್ಟರ್‍ನಲ್ಲಿ ತಮ್ಮ ಹೆಸರು ಹಾಕಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೋರ್ವರು ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಹೊರ ನಡೆದ ಪ್ರಸಂಗ ಇಂದು ನಡೆದಿದೆ.

      ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು, ಸಮಿತಿಯ ಪೋಸ್ಟರ್‍ನಲ್ಲಿ ತಮ್ಮ ಹೆಸರು ಹಾಕಲಿಲ್ಲ ಎಂಬ ಕಾರಣಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಲ್ಲದೆ, ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ನೀಡಿ ಸಭೆಯ ಮಧ್ಯದಲ್ಲಿಯೇ ಹೊರ ನಡೆದರು.

      ಸಚಿವ ಜಿ.ಟಿ.ದೇವೇಗೌಡ ಬಿಟ್ಟರೆ ನಾನೇ ಸೀನಿಯರ್‌. ಶಿಷ್ಟಾಚಾರವನ್ನು ಅಧಿಕಾರಿಗಳು ಪಾಲಿಸಿಯೇ ಇಲ್ಲ. ನಾನೇಕೆ ಸಭೆಯಲ್ಲಿರಬೇಕು’  ಶಿಷ್ಟಾಚಾರದ ಲೋಪವನ್ನು ಸಂಜೆಯೊಳಗೆ ಸರಿಪಡಿಸಿ. ನೀವು ಸರಿಪಡಿಸದಿದ್ರೆ ನಾನು ಏನಂತೂ ತೋರಿಸ್ತೀನಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

      ಸಚಿವ ಪುಟ್ಟರಂಗಶೆಟ್ಟಿ ಅವರು ಅಸಮಧಾನ ಹೊರ ಹಾಕಿದ ಹಿನ್ನೆಲೆ ಸಚಿವ ಜಿ.ಟಿ.ದೇವೇಗೌಡ ಅವರು, ಸಮಿತಿಗೆ ಮೂವರ ಉಪಾಧ್ಯಕ್ಷರ ನೇಮಕಕ್ಕೆ ಸೂಚಿಸಲಾಗಿದ್ದು, ಇದರಲ್ಲಿ ಪುಟ್ಟರಂಗ ಶೆಟ್ಟಿ ಜತೆಗೆ ಇನ್ನೀರ್ವರನ್ನು ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here