ಪ್ರಕೃತಿ ಚಿಕಿತ್ಸಾಲಯದಿಂದ ಸಿದ್ದು ಡಿಸ್ಚಾರ್ಜ್

0
31

 ಧರ್ಮಸ್ಥಳ:

 ಜೂನ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.

      ಕಳೆದ 12 ದಿನಗಳಿಂದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯ ಅವರು, ಇಂದು ಬೆಳಿಗ್ಗೆ 10.30ರ ಸುಮಾರಿಗೆ ಡಿಸ್ಚಾರ್ಜ್ ಆದ ನಂತರ  ಶಾಂತಿವನದಿಂದ‌ ಹೊರಬಂದರು ಶ್ರೀ ಮಂಜುನಾಥ ದೇಗುಲಕ್ಕೆ ತೆರಳಿ ಶತರುದ್ರಾಭಿಷೇಕ ಪೂಜೆ ಸಲ್ಲಿಸಿದರು.

      ಮಧ್ಯಾಹ್ನದ ಊಟ ಮುಗಿಸಿ ಧರ್ಮಸ್ಥಳದಿಂದ ಹೊರಟು, ಮಂಗಳೂರಿಗೆ ಬರುವ ಅವರು ಕಾವೂರು ಶಾಂತಿನಗರದಲ್ಲಿ ನಿರ್ಮಿಸಿರುವ ಕನಕ ಭವನ ಉದ್ಘಾಟಿಸಲಿದ್ದಾರೆ. ನಂತರ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here