ಪ್ರತಿ ತಿಂಗಳು ನಿಮಗೆ ನಿರಂತರ ಆದಾಯ ಬೇಕೆ..?

 -  -  1


ಪ್ರತಿ ತಿಂಗಳು ಸಿಗುವ ನಿರಂತರ ಆದಾಯ ಅಂದರೆ ಪ್ರತಿಯೊಬ್ಬ ರಿಗೂ ಇಷ್ಟ. ನೌಕರಸ್ಥರಿಂದ ಹಿಡಿದು ಕೂಲಿ ಕಾರ್ಮಿಕ ರವರೆಗೂ ಎಲ್ಲರೂ ನಿರಂತರ ಆದಾಯಕ್ಕಾಗಿ ಹಂಬಲಿಸುತ್ತಾರೆ. ನನ್ನ ಸ್ನೇಹಿತನು ಓರ್ವ ವಾಣಿಜ್ಯೋದ್ಯಮಿಯಾಗಿದ್ದು, ಆತನ ಆದಾಯ ಗಳಿಕೆ ನಿಯಮಿತವಾಗಿಲ್ಲ. ಹೀಗಾಗಿ ಆತನು ನಿಯಮಿತವಾದ ತಿಂಗಳ ಆದಾಯವನ್ನು ಗಳಿಸುವುದಕ್ಕಾಗಿ ಹಣವನ್ನು ಹೂಡಬಯಸಿದ್ದಾನೆ. ನಿಯಮಿತವಾದ ಆದಾಯವು ಯಾರಿಗೆ ತಾನೇ ಬೇಡ ಹೇಳಿ? ನೀವು ಕೂಡಾ ನಿಯಮಿತವಾದ ಆದಾಯ ಗಳಿಸಲು ಬಯಸಿದ್ದೀರೆಂದು ನನಗೆ ಗೊತ್ತಿದೆ. ಈ ವಿಚಾರದಲ್ಲಿ ನಿಮಗೆ ನೆರವಾಗುವ ನಿಟ್ಟಿನಲ್ಲಿ ನಾವು ವಿವಿಧ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿದ್ದೇವೆ.

 

ಅದರ ಫಲಶ್ರುತಿಯಾಗಿ, ಭಾರತದಲ್ಲಿ ನಿಯಮಿತವಾದ ತಿಂಗಳ ಆದಾಯವನ್ನು ಗಳಿಸಲು ನೆರವಾಗಬಲ್ಲ ಹತ್ತು ಅತ್ಯುತ್ತಮವಾದ ಹೂಡಿಕೆಗಳ ಆಯ್ಕೆಗಳನ್ನು ನಾವೀಗ ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.

1) ಮ್ಯೂಚುವಲ್ ಫಂಡ್‌ಗಳಿಂದ ಡಿವಿಡೆಂಡ್... ಕೆಲವು ನಿರ್ಧಿಷ್ಟ ಮ್ಯೂಚು ವಲ್ ಫಂಡ್ ಡಿವಿಡೆಂಡ್ ಉತ್ತಮ ಆದಾಯ ಆಯ್ಕೆ ಯನ್ನೂ ಒಳಗೊಂಡಿವೆ. ಒಂದು ವೇಳೆ ನಿಮಗೆ ಈಕ್ವಿಟಿಯಲ್ಲಿ ನೇರವಾಗಿ ಹಣ ಹೂಡಲು ಇಷ್ಟವಿಲ್ಲದಿದ್ದಲ್ಲಿ, ಡಿವಿಡೆಂಡ್ ಪಾವತಿಯ ಅವಕಾಶವನ್ನು ಕಲ್ಪಿಸುವ ಮ್ಯೂಚುವಲ್ ಫಂಡ್‌ಗಳನ್ನು ನೀವು ಆಯ್ದುಕೊಳ್ಳಬಹುದು. ಈ ಮ್ಯೂಚುವಲ್ ಫಂಡ್‌ಗಳು ಡಿವಿಡೆಂಡ್‌ಗಳನ್ನು ವಾರ್ಷಿಕ ವಾಗಿಯಷ್ಟೇ ಕೊಡಮಾಡುತ್ತವೆಯೇ ಹೊರತು ಮಾಸಿಕವಾಗಿ ಅಲ್ಲ. ಆದರೆ ಒಂದು ವೇಳೆ ನೀವು ನಿಮ್ಮ ಹೂಡಿಕೆಯ ಮೊತ್ತವನ್ನು ಅನೇಕ ಮ್ಯೂಚುವಲ್ ಫಂಡ್ ಗಳಲ್ಲಿ ತೊಡಗಿಸಿದ್ದಲ್ಲಿ, ನೀವು ಆದಾಯದ ರೂಪದಲ್ಲಿ ನಿಯಮಿ ತವಾಗಿ ಡಿವಿಡೆಂಡ್‌ಅನ್ನು ಪಡೆಯಬಹುದು.

2) ಈಕ್ವಿಟಿಯಿಂದ ಡಿವಿಡೆಂಡ್ (ಲಾಭಾ ಂಶ)… ಸಾಮಾನ್ಯವಾಗಿ ಈಕ್ವಿಟಿ ಹೂಡಿಕೆಗಳು ರಿಸ್ಕ್ ಅನ್ನು ಒಳಗೊಂಡಿರುತ್ತವೆ. ಆದರೆ ಒಂದು ವೇಳೆ ನಿಮಗೆ ಜ್ಞಾನ ಮತ್ತು ಕೌಶಲ್ಯವಿದ್ದಲ್ಲಿ ನೀವು ಸ್ಟಾಕ್ ಮಾರುಕಟ್ಟೆಯಿಂದ ಅತ್ಯುತ್ತಮ ಆದಾಯವನ್ನು ಗಿಟ್ಟಿಸಿಕೊಳ್ಳಬಹುದು. ಸ್ಟಾಕ್ ನ ಬೆಲೆಯಲ್ಲಾಗುವ ಮೌಲ್ಯವರ್ಧನೆಯನ್ನೂ ಹೊರತುಪಡಿಸಿ ಡಿವಿಡೆಂಡ್‌ನಿಂದಲೂ ನೀವು ಲಾಭವನ್ನು ಗಳಿಸಿಕೊಳ್ಳಬಹುದು. ಈಕ್ವಿಟಿಯಿಂದ ವಾರ್ಷಿಕವಾಗಿ ಡಿವಿಡೆಂಡ್ ಪಾವತಿಸಲ್ಪಡುತ್ತದೆ. ಸ್ಟಾಕ್‌ನಲ್ಲಿನ ನಿಮ್ಮ ಹೂಡಿಕೆಯನ್ನು 10 ರಿಂದ 12 ರವರೆಗಿನ ಉತ್ತಮ ಸ್ಟಾಕ್‌ಗಳಲ್ಲಿ ತೊಡಗಿಸಿದಲ್ಲಿ, ನೀವು ಸುನಿಶ್ಚಿತವಾಗಿ ನಿಯಮಿತವಾದ ಆದಾಯ ಗಳಿಸಿಕೊಳ್ಳಬಹುದು.

ರಿಯಲ್ ಎಸ್ಟೇಟ್‌ನಿಂದ ಲಭ್ಯವಾಗು ವ ಬಾಡಿಗೆ... ನಿಯಮಿತ ಆದಾಯ ವನ್ನು ಗಳಿಸುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ಮತ್ತೊಂದು ಉತ್ತಮ ಮಾರ್ಗೋ ಪಾಯವಾಗಿದೆ. ರಿಯಲ್ ಎಸ್ಟೇಟ್ ಎಂದರೆ ಅತ್ಯಧಿಕ ರಿಸ್ಕ್ ಅನ್ನು ಒಳಗೊಂಡಿರುವ ಹಾಗೂ ಹಾಗೆಯೇ ಅತ್ಯಧಿಕ ರಿರ್ಟನ್‌ಅನ್ನು ಗಳಿಸಿಕೊಡುವ ಸಂಗತಿಯಾಗಿದೆ. ನೀವು ಖರೀದಿಸಿದ ಸೊತ್ತನ್ನು ಬಾಡಿಗೆಗೆ ಬಿಡುವುದರ ಮೂಲಕ ನೀವು ಆದಾಯವನ್ನು ಗಳಿಸ ಬಹುದು. ಬಾಡಿಗೆ ದಾರರು ಸಕಾಲದಲ್ಲಿ ಲಭ್ಯವಾಗದೇ ಇರುವುದು ಅಥವಾ ಅರ್ಹ ಬಾಡಿಗೆದಾರರು ಲಭಿಸದೇ ಹೋಗುವುದು ಅಥವಾ ಸೊತ್ತಿನ ದರವು ಇಳಿಮುಖವಾಗು ವುದು ಇವೇ ಮೊದಲಾದವು ರಿಯಲ್ ಎಸ್ಟೇ ಟ್ ಆಯ್ಕೆ ಒಳಗೊಂಡಿರುವ ರಿಸ್ಕ್ ಆಗಿದೆ.

ದೀರ್ಘಕಾಲೀನ ಸರ್ಕಾರಿ ಬಾಂಡ್.. ನಿಯಮಿತ ಆದಾಯ ಗಳಿಕೆಯ ನಿಟ್ಟಿನಲ್ಲಿ ದೀರ್ಘಕಾಲೀನ ಸರ್ಕಾರಿ ಬಾಂಡ್‌ಗಳು ಅತ್ಯಂತ ಸುರಕ್ಷಿತವಾದ ಆಯ್ಕೆಗಳ ಪೈಕಿ ಒಂದೆ ನಿಸಿಕೊಂಡಿದೆ. ಸರ್ಕಾರಿ ಬಾಂಡ್ ಪ್ರತೀ ಆರು ತಿಂಗಳಿಗೊಮ್ಮೆ ಶೇ. 8ರ ದರದಲ್ಲಿ ರಿರ್ಟನ್ ಅನ್ನು ಕೊಡುತ್ತದೆ. ಈ ಬಾಂಡ್ ಗಳು ದೀರ್ಘಕಾಲೀನ ಬಾಂಡ್‌ಗಳಾಗಿದ್ದು ಬಾಂಡ್ ಅವಧಿಯ ಅಂತ್ಯದ ವೇಳೆಗೆ ನೀವು ಹೂಡಿದ್ದ ನಿಮ್ಮ ಅಸಲೀ ಹಣವನ್ನು ಮರಳಿ ಪಡೆದುಕೊಳ್ಳಬಹುದು. ಈ ಬಾಂಡ್‌ಗಳು ಎರಡನೇ ಹಂತದ ಮಾರುಕಟ್ಟೆಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿಯೂ ಬಳಕೆಗೆ ಲಭ್ಯವಾಗುತ್ತದೆ. ಹೀಗಾಗಿ ನಿಮಗೆ ಈ ಬಾಂಡ್‌ಗಳು ಬೇಡವೆ ನಿಸಿದಲ್ಲಿ, ನೀವು ಅವುಗಳನ್ನು ಸೆಕೆಂಡರಿ ಮಾರು ಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೂ ಅವಕಾಶವಿದೆ.

ವಿಮಾ ಸಂಸ್ಥೆಗಳ ವೇತನ ರೂಪದ ವಾರ್ಷಿಕ ಆದಾಯ… ನಿಯಮಿತವಾದ ಮಾಸಿಕ ಆದಾಯವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ವಿಮಾ ಯೋಜನೆಯಿಂದ ಲಭ್ಯವಾಗುವ ವೇತನ ರೂಪದ ವಾರ್ಷಿಕ ಆದಾಯವೂ ಒಂದು ಆಯ್ಕೆಯಾಗಿದೆ. ಆದರೆ ಈ ಆಯ್ಕೆಯು ಆದಾಯವನ್ನು ಹುಟ್ಟು ಹಾಕಲು ತುಸು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ವಿಮಾ ಯೋಜನೆಯನ್ನು ಖರೀದಿಸುವಾಗ ನೀವು ಆಯ್ದುಕೊಂಡಿದ್ದ ಆಯ್ಕೆ ಮತ್ತು ಪೆನ್ಷನ್‌ನ ಅವಧಿಯ ಮೇಲೆ ಈ ವಿಮಾ ಯೋಜನೆ ಗಳಿಂದ ಲಭ್ಯವಾಗುವ ರಿರ್ಟನ್‌ಗಳು ಅವಲಂಬಿತವಾಗಿರುತ್ತವೆ.

comments icon 0 comments
0 notes
20 views
bookmark icon

Write a comment...

Your email address will not be published. Required fields are marked *