ಪ್ರಪಂಚದ ಈ ದೇಶಗಳಲ್ಲಿ ಆರ್ಥಿಕತೆ ಅಪಾಯದಲ್ಲಿದೆ

0
24

ಯಾವುದೇ ದೇಶದ ಆರ್ಥಿಕ ಸ್ಥಿತಿಯನ್ನು ಬಲಾಢ್ಯಗೊಳಿ ಸುವುದು ಹಾಗೂ ಅದೇ ಮಟ್ಟದಲ್ಲಿ ಸ್ಥಿರ ವಾಗಿರಿಸುವುದು ಕಷ್ಟಕರವಾದ ಗುರಿಯೇ ಆಗಿದೆ. ಹೆಚ್ಚಿನ ದೇಶಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಕೆಲವಾರು ಕ್ರಮಗಳ ಮೂಲಕ ತಮ್ಮ ಕೈಲಾದ ಯತ್ನಗಳನ್ನು ಮಾಡುತ್ತಿವೆ. ನಿರುದ್ಯೋಗ ನಿವಾರಣೆ ಹಾಗೂ ಬಡತನದ ನಿರ್ಮೂಲನೆ ಈ ದೇಶಗಳ ಪ್ರಮುಖ ಆದ್ಯತೆಯಾಗಿದ್ದು ಈ ಮೂಲಕ ಆರ್ಥಿಕವಾಗಿಯೂ ಸುಧಾರಿಸುತ್ತಿವೆ. ಉಳಿದ ರಾಷ್ಟ್ರಗಳಿಗೆ ತಮ್ಮ ಆದಾಯ ಖರ್ಚುಗಳ ಲೆಕ್ಕಾಚಾರವನ್ನು ಸರಿದೂಗಿಸುವ ಅಗತ್ಯವಿದೆ. ಆದರೆ ಈ ವಿಶ್ವದಲ್ಲಿ ಕೆಲವು ರಾಷ್ಟ್ರಗಳು ತಮ್ಮಲ್ಲಿರುವ ಕೆಲವೇ ಸಂಪನ್ಮೂಲಗಳನ್ನು ಬಹುವಾಗಿಯೇ ಆಧರಿಸಿರುವ ಕಾರಣ ವಿಶ್ವಮಟ್ಟದ ಬದಲಾವಣೆಗಳಿಗೆ ಒಗ್ಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಇವು ಆರ್ಥಿಕವಾಗಿ ಹಿಂದುಳಿಯುತ್ತವೆ. ಬನ್ನಿ, ಈ ಪರಿಸ್ಥಿತಿಗೆ ತಲುಪಿರುವ, ಸುಧಾರಣೆಗೆ ಹಲವು ಅವಕಾಶಗಳಿರುವ ಹತ್ತು ದೇಶಗಳ ಬಗ್ಗೆ ಅರಿಯೋಣ..

1. ಗ್ರೀಸ್ : ಒಂದು ಕಾಲದಲ್ಲಿ ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾಗಿದ್ದ ಗ್ರೀಸ್ ಇಂದು ಸಾಲದ ಕೂಪದಲ್ಲಿದೆ. ಇದರ ಸಾಲದ ಮೊತ್ತಗಳು ಏರುತ್ತಲೇ ಹೋಗಿದ್ದು, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕೆಲವಾರು ವರ್ಷಗಳಿಂದ ಆರ್ಥಿಕವಾಗಿ ಕುಸಿಯುತ್ತಲೇ ಸಾಗಿದೆ. ಪ್ರಸ್ತುತ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸಾಲ ಪಡೆದ ರಾಷ್ಟ್ರವಾಗಿದೆ. ಇದರ ಪರಿಣಾಮವಾಗಿ ಈ ರಾಷ್ಟ್ರದ ಜಿಡಿ ಪಿಯ 179% ದಷ್ಟು ಸಾಲ ಹೊಂದಿದೆ. ಈ ಅಂಕಿ ಅಂಶವನ್ನು ಯೂರೋಸ್ಟಾಟ್ ಸಂಸ್ಥೆಯೇ ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್ಎಫ್) ಹಾಗೂ ಯೋರೋಪಿಯನ್ ಯೂನಿಯನ್ ಗಳು ಗ್ರೀಸ್ ದೇಶವನ್ನು ರಕ್ಷಿಸಲು ನೆರವಿನ ಹಸ್ತವನ್ನು ಚಾಚಿದ್ದರೂ ಇದುವರೆಗೂ ಗ್ರೀಸ್ ಸಾಲ ಕೂಪದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. 2016ರಲ್ಲಿ ಗ್ರೀಸ್‌ನ ಜಿಡಿಪಿ ಕುಸಿಯ ತೊಡ ಗಿತ್ತು ಹಾಗೂ ಆ ವರ್ಷದ ಕಡೆಯ ಮೂರು ತಿಂಗಳುಗಳಲ್ಲಿ 2015ರ ಬಳಿಕದ ಅವಧಿಯ ಅತ್ಯಂತ ಕಳಪೆ ಸಾಧನೆ ಪ್ರಕಟಿಸಿತು. ಈ ಸಮಯದಲ್ಲಿ ದೇಶದ ವ್ಯಾಪಾರ ವಹಿವಾಟು ಕನಿಷ್ಟ ಮಟ್ಟಕ್ಕಿಳಿಯಿತು ಎಂದು ಬಿಸಿನೆಸ್ ಇನ್ಸೈಡರ್ ಮಾಧ್ಯಮ ಪ್ರಕಟಿಸಿದೆ.

2. ಇಟಲಿ : ಯೂರೋಪ್‌ನಲ್ಲಿ ಕುಸಿ ಯುವ ಆರ್ಥಿಕತೆಯ ಪಟ್ಟಿಯಲ್ಲಿ ಗ್ರೀಸ್ ಬಳಿಕ ಇಟಲಿ ಎರಡನೆಯ ಸ್ಥಾನ ದಲ್ಲಿದೆ. 2016ರಲ್ಲಿ ಇಟಲಿಯ ಸಾಲ ಆ ದೇಶದ ಜಿಡಿಪಿಯ 132.6% ರಷ್ಟಿತ್ತು ಎಂದು ಯೂರೋಸ್ಟಾಟ್ ತಿಳಿಸಿದೆ. ಸಾಲ ನೀಡಬಾರದೆಡೆ ಸಾಲ ನೀಡುವ ದುರ್ಬಲ ನಿರ್ಧಾರದ ಕಾರಣ ಇಟಲಿ ಈ ಸ್ಥಿತಿ ತಲುಪಿದೆ. ಕಳಪೆ ಪ್ರದರ್ಶನ ನೀಡಿದ ಬ್ಯಾಂಕುಗಳಿಗೆ ಇತರ ಬ್ಯಾಂಕುಗಳು, ಹೂಡಿಕೆದಾರರು ಹಾಗೂ ವಿಮಾ ಸಂಸ್ಥೆಗಳು ಹಣ ಸಾಲವಾಗಿ ನೀಡಬೇಕೆಂದು ತಾಕೀತು ಮಾಡಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಆದರೆ 47 ಬಿಲಿಯನ್ ಯೋರೋ (56 ಬಿಲಿಯನ್ ಡಾಲರ್) ಅಥವಾ 37,11,81,56,00,000 ರೂ ನಷ್ಟು ಭಾರೀ ಸಾಲ ಇರುವ ಇಟಲಿ ಸದ್ಯಕ್ಕೆ ಆರ್ಥಿಕವಾಗಿ ದುರ್ಬಲವಾಗಿದೆ. ವಿಶ್ವದ ಅತಿ ಹಳೆಯ ಮತ್ತು ಪ್ರಸ್ತುತ ಇಟಲಿಯ ಅತಿ ದುರ್ಬಲ ಬ್ಯಾಂಕ್ ಆಗಿರುವ ಮಾಂಟೆ ಡೈ ಪಾಸ್ಕಿ ಡಿ ಸಿಯೇನಾ ನ ಪುಸ್ತಕಗಳಲ್ಲಿ ಈ ಮೊತ್ತ ದಾಖಲಾಗಿದ್ದು, ಈ ಬಗ್ಗೆ ಯೂರೋಪಿಯನ್ ಯೂನಿಯನ್ ಹಾಗೂ ಇಟಲಿ ಸರ್ಕಾರ ಕಾಳಜಿ ವ್ಯಕ್ತಪಡಿಸಿದ್ದು ರಾಷ್ಟ್ರದ ಭವಿಷ್ಯದ ಬಗ್ಗೆ ಚಿಂತಿತವಾಗಿವೆ.

3. ಪೋರ್ಚುಗಲ್ : ತನ್ನ ಜಿಡಿಪಿಯ 130.4% ದಷ್ಟು ಸಾಲ ಹೊಂದಿರುವ ಪೋರ್ಚುಗಲ್ 2016ರ ಕೊನೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಆರ್ಥಿಕ ದಿವಾಳಿತನದ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆದಿದೆ ಎಂದು ಯೂರೋಸ್ಟಾಟ್ ತಿಳಿಸಿದೆ. 2015ರಲ್ಲಿ ಈ ಸಾಲ ಜಿಡಿಪಿಯ ಶೇ. 129ರಷ್ಟಿತ್ತು. 2016ರಲ್ಲಿ ಈ ಪ್ರಮಾಣ ಏರಿದ್ದರೂ ದೇಶದ ಕೆಲವಾರು ಕ್ರಮಗಳ ಪರಿಣಾಮವಾಗಿ ಕೊಂಚ ಸುಧಾರಣೆಯನ್ನು ಪ್ರಕಟಿಸಿದರೂ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. 2014ರಲ್ಲಿ ದಿವಾಳಿತನ ಘೋಷಿಸುವ ಅಂಚಿನಲ್ಲಿದ್ದ ಪೋರ್ಚುಗಲ್ ಮೂರು ವರ್ಷಗಳಲ್ಲಿ ಕೊಂಚ ಚೇತರಿಕೆ ಪಡೆದಿದೆ ಎಂದು ನಾಸ್ಡಾಕ್ ತಿಳಿಸಿದೆ. 2015 ರಲ್ಲಿ ಬದಲಾದ ಸರ್ಕಾರ ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್ಥಿಕ ಸಬಲತೆಯೆಡೆಗೆ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ. ಪೋರ್ಚುಗಲ್ ನ ಭಾರೀ ಸಾಲದ ಕಾರಣದಿಂದ ಯೂರೋಪಿಯನ್ ಯೂನಿಯನ್ ಹಿಂದೆ ವಿಧಿಸಿದ್ದ ಶಿಸ್ತುಕ್ರಮವೊಂದನ್ನು ಈ ವರ್ಷ ಕೊಂಚ ಸಡಿಲಿಸಿದೆ.

4. ಜಪಾನ್ : 24/7 ವಾಲ್ ಸ್ಟ್ರೀಟ್ ಪ್ರಕಾರ ಜಪಾನ್ ವಿಶ್ವದ ತೃತೀಯ ಅತಿ ದೊಡ್ಡ ಆರ್ಥಿಕ ದೇಶವಾಗಿದೆ. ಆದರೆ ಕೆಲವು ದಶಕಗಳ ಸ್ಥಿರ ಆರ್ಥಿಕತೆಯ ಬಳಿಕ ಕೆಲವು ಪ್ರಚೋದಕ ಹಣಕಾಸಿನ ಯೋಜನೆಗಳಿಗೆ ಸರಿಯಿತು ಎಂದು ಜಪಾನ್ ಟೈಮ್ಸ್ ತಿಳಿ ಸುತ್ತದೆ. ಆದರೆ ಈಗ 8.93 ಟ್ರಿಲಿಯನ್ ನಷ್ಟು (893,000,000,000,000 ರೂ) ಸಾಲ ಕೂಪದಲ್ಲಿದೆ ಎಂದು ನ್ಯಾಶನಲ್ ಡೆಬ್ಟ್ ಕ್ಲಾಕ್ಸ್ ಎಂಬ ಸಂಸ್ಥೆ ತಿಳಿಸಿದೆ. ಈ ಭಾರೀ ಮೊತ್ತದ ಸಾಲದಿಂದಾಗಿ ದೇಶದ ಜಿಡಿಪಿಯ 234.7% ರಷ್ಟು ಸಾಲದಲ್ಲಿದೆ. ಬಿಸಿನೆಸ್ ಇನ್ಸೈಡರ್‌ಪ್ರಕಾರ ಜಪಾನ್ ವಿಶ್ವದ ಅತಿಹೆಚ್ಚು ಸಾಲದಲ್ಲಿ ಮುಳುಗಿರುವ ದೇಶವಾಗಿದೆ. ಆದರೆ ದೇಶದ ಅತ್ಯುತ್ತಮ ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಗಳು ಈಗಲೂ ಈ ದೇಶವನ್ನು ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿಸಿದೆ.

5. ಫ್ರಾನ್ಸ್ : ಹಿಂದಿನ ವರ್ಷಗಳಲ್ಲಿ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳ ಲ್ಲೊಂದಾಗಿದ್ದ ಫ್ರಾನ್ಸ್ 2016ರಲ್ಲಿ ಅಂದಿನ ಇನ್ನೊಂದು ಬಲಾಢ್ಯ ದೇಶವಾಗಿದ್ದ, ಅಂದು ಐದನೆಯ ಸ್ಥಾನದಲ್ಲಿದ್ದ ಬ್ರಿಟನನ್ನೂ ಹಿಂದಿಕ್ಕಿತ್ತು ಎಂದು ಫಾರ್ಚೂನ್ ವರದಿ ತಿಳಿಸುತ್ತದೆ. ಅದರರ್ಥ ಈ ದೇಶಗಳಲ್ಲಿ ಆರ್ಥಿಕ ತೊಂದ ರೆಗಳೇ ಇರಲಿಲ್ಲವೆಂದು ಅರ್ಥವಲ್ಲ. ಫ್ರಾನ್ಸ್ ನ ಒಟ್ಟು ಸಾಲಗಳು ಆ ದೇಶದ ಉತ್ತಮ ಜಿಡಿಪಿಯಿಂದಾಗಿ ಹೊರ ಜಗತ್ತಿಗೆ ತಿಳಿಯಲೇ ಇಲ್ಲ. ಆದರೆ ಒಂದು ಟ್ರಿಲಿಯನ್ ಯೂರೋ ಗಳಿಗೂ ಹೆಚ್ಚಿನ ಮೊತ್ತದ ಸಾಲ ಪಡೆದ ಐದು ರಾಷ್ಟ್ರಗಳಲ್ಲಿ ಫ್ರಾನ್ಸ್ ಸಹಾ ಒಂದು. 2016ರ ಕೊನೆಯ ವೇಳೆಗೆ ಈ ಸಾಲ ಏರಿ 2.15 ಟ್ರಿಲಿಯನ್ ಯೂರೋಗಳಾಗಿದೆ! (2.57, 000,000,000,000 ಡಾಲರ್). ಅಲ್ಲದೇ ಇದುವರೆಗೆ ಮುಚ್ಚಿದ ಕೆಂಡದಂತಿದ್ದ ನಿರುದ್ಯೋಗ ಸಮಸ್ಯೆಯೂ ಈಗ ಹೊರ ಬಿದ್ದಿದ್ದು ಇದಕ್ಕಾಗಿ ಕೆಲವು ಕ್ರಮಗಳನ್ನು ಕೈ ಗೊಳ್ಳಲಾಗಿದೆ ಎಂದು ಫ್ರಾನ್ಸ್ ಸರ್ಕಾರ ಪ್ರಕಟಿಸಿರುವುದನ್ನು ರಾಯಿಟರ್ಸ್ ವರದಿ ಮಾಡಿದೆ. ಈ ಬದಲಾವಣೆಗಳಿಂದ ಸಂಸ್ಥೆಗಳು ಉದ್ಯೋಗಿಗಳನ್ನು ತಮಗಿಷ್ಟ ಬಂದಂತೆ ಕೆಲಸಕ್ಕೆ ತೆಗೆದುಕೊಳ್ಳುವ ಅಥವಾ ತೆಗೆದುಹಾಕುವ ಅರ್ಹತೆ ಪಡೆದಿವೆ. ಅಲ್ಲದೇ ಮಾರುಕಟ್ಟೆಯ ಸ್ಥಿತಿಗನುಸಾರವಾಗಿ ವೇತನವನ್ನೂ ನೀಡ ಬಹುದಾಗಿದೆ.

6. ಸೈಪ್ರಸ್ : ಕೆಲವು ಹಿಂದಿನ ವರ್ಷ ಗಳಲ್ಲಿ ಸೈಪ್ರಸ್‌ನ ಆರ್ಥಿಕ ಸ್ಥಿತಿ ಒಂದೇ ಪ್ರಕಾರವಿತ್ತು. ಅಲ್ಲದೇ ಸಾರ್ವಜನಿಕ ಖರ್ಚುಗಳನ್ನು ಅತಿ ಎಚ್ಚರಿಕೆಯಿಂದ ನಿರ್ವ ಹಿಸುತ್ತಿದ್ದ ಕಾರಣ ಈ ದೇಶದ ಬಜೆಟ್ ಸಮತೋಲನದಲ್ಲಿಯೇ ಇತ್ತು ಎಂದು ಫಾಮಾಗುಸ್ತಾ ಗೆಜೆಟ್ ವರದಿ ಮಾಡಿದೆ. 2018ರ ವರೆಗೂ ಸೈಪ್ರಸ್ ಇದೇ ಪ್ರಕಾರದ ಸಂತುಲಿತ ಬಜೆಟ್ ಹೊಂದಲಿದೆ ಎಂದು ನಿರೀಕ್ಷಿಸುತ್ತಿದೆ. ಆದರೆ ಇದಕ್ಕೂ ಹಿಂದೆ ಪಡೆದ ಸಾಲಗಳು ಮಾತ್ರ 9.3 ಬಿಲಿಯನ್ ಯೂರೋ (23.1 ಬಿಲಿಯನ್ ಡಾಲರ್) ದಷ್ಟಿದ್ದು ಇದು 2016ರಲ್ಲಿ ದೇಶದಲ್ಲಿದ್ದ ಜಿಡಿಪಿಯ 107.8 % ದಷ್ಟಿದೆ ಎಂದು ಯೂರೋಸ್ಟಾಟ್‌ತಿಳಿಸುತ್ತದೆ. (ಮುಂದುವರೆಯುತ್ತದೆ ).

LEAVE A REPLY

Please enter your comment!
Please enter your name here