ಪ್ರವಾಸೋಧ್ಯಮ ಇಲಾಖೆಯೊಂದಿಗೆ ನಾಮದಚಿಲುಮೆ ಸಸ್ಯೋಧ್ಯಾನಕ್ಕೆ ಭೇಟಿ ನೀಡಿದ ಗ್ರಾಮಾಂತರ ಶಾಸಕ

0
21

ತುಮಕೂರು:-


      ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಾಮದ ಚಿಲುಮೆಯ ಸಸ್ಯೋಧ್ಯಾನ ಹಾಗೂ ಜಿಂಕೆವನಕ್ಕೆಶಾಸಕ ಡಿ.ಸಿ ಗೌರಿಶಂಕರ್ ರವರು, ಪ್ರವಾಸೋಧ್ಯಮ ಇಲಾಖೆ ಹಾಗೂ ಅರಣ್ಯಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

      ಅವರು ನಾಮದ ಚಿಲುಮೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಇರುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

      ನಾಮದ ಚಿಲುಮೆಗೆ ಆಗಮಿಸುವ ಪ್ರವಾಸಿಗರಿಗೆ ಶುದ್ಧಕುಡಿಯುವ ನೀರನ್ನುಕಲ್ಪಿಸುವ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನುಶೀಘ್ರವೇ ನಾಮದ ಚಿಲುಮೆಯಲ್ಲಿ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ತಾಕೀತು ಮಾಡಿದರಲ್ಲದೇ, ಈ ಭಾಗಕ್ಕೆ ಬರುವ ಪ್ರವಾಸಿಗರು ಶೌಚಾಲಯವಿಲ್ಲದೆ ಪರೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರವಾಸಿಗರು ಶಾಸಕರ ಗಮನ ಸೆಳೆದಾಗ ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಿ ನಾಮದಚಿಲುಮೆಯಲ್ಲಿ ಶೌಚಾಲಯವನ್ನು ನಿರ್ಮಿಸುವಂತೆ ತುರ್ತುಸೂಚನೆ ನೀಡಿದರು.

      ಆನಂತರ ಜಿಂಕೆವನಕ್ಕೆ ಭೇಟಿನೀಡಿದ ಶಾಸಕರುಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೂಕ್ತ ಸಮಯದಲ್ಲಿ ಜಿಂಕೆಗಳಿಗೆ ಆಹಾರ ಮತ್ತುಕುಡಿಯುವ ನೀರಿನ ಸೌಲಭ್ಯವನ್ನುಒದಗಿಸುವಂತೆಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.ನಾಮದಚಿಲುಮೆಯಲ್ಲಿ ಶುದ್ಧಕುಡಿಯುವ ನೀರಿನಘಟಕ ಮತ್ತು ಶೌಚಾಲಯವನ್ನು ಶೀಘ್ರವೇ ನಿರ್ಮಿಸಿ ಸಾರ್ವಜನಿಕರು ಬಳಸಲು ಅನುಕೂಲಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

      ಇಲ್ಲಿರುವಉದ್ಯಾನವನವುಅಕ್ರಮ ಚಟುವಟಿಕೆಗಳ ತಾಣವಾಗಿದ್ದು ಪೋಲೀಸ್‍ಇಲಾಖೆಯ ಅಧಿಕಾರಿಗಳು ಅಕ್ರಮಎಸೆಯುವವರ ವಿರುದ್ದ ನಿರ್ದಾಕ್ಷೀಣ್ಯಕ್ರಮಜರುಗಿಸುವಂತೆ ಸೂಚನೆ ನೀಡುತ್ತೇನೆ. ಇಲ್ಲಿರುವಉದ್ಯಾನವನಕ್ಕೆ ವಾರಂತ್ಯದರಜಾದಿನಗಳಲ್ಲಿ ಇಲ್ಲಿಗೆಆಗಮಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದನ್ನು ಸುಂದರ ಪ್ರವಾಸಿತಾಣವಾಗಿಸುವ ನಿಟ್ಟಿನಲ್ಲಿ ಹೆಚ್ಚಿನಅಭಿವೃದ್ಧಿಪಡಿಸುವಯೋಜನೆರೂಪಿಸುವಂತೆ ತಿಳಿಸಿದರು.

      ಈ ವೇಳೆ ಜೆಡಿಎಸ್ ಹಿರಿಯಉಪಾಧ್ಯಕ್ಷ ಹಾಲನೂರುಅನಂತ್‍ಕುಮಾರ್, ಜೆಡಿಎಸ್‍ಯುವಘಟಕದಅಧ್ಯಕ್ಷ ಹಿರೇಹಳ್ಳಿ ಮಹೇಶ್, ಜೆಡಿಎಸ್ ಮುಖಂಡರಾದಹರಳೂರು ರುದ್ರೇಶ್, ಭೈರೇಗೌಡ, ಹಾಗೂ ಪ್ರವಾಸೋಧ್ಯಮ ಇಲಾಖೆ ಹಾಗೂ ಅರಣ್ಯಇಲಾಖೆಯ ಅಧಿಕಾರಿಗಳು, ಸ್ಥಳಿಯರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here