ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ..!?

 ಕೂಡ್ಲಿಗಿ:

      ಶನಿವಾರವಷ್ಟೇ ತಾಲೂಕಿನ ಎಂ.ಬಿ.ಐನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದ ಬಾಡಿಗೆ ಕಾರು ಮಾಲೀಕನ ಅನುಮಾನಾಸ್ಪದ ಸಾವು ಪ್ರಕರಣ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು, ಪ್ರಕರಣ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪಿಎಸ್‍ಐ ಕೃಷ್ಣ ನಾಯ್ಕ ಹಾಗೂ ಕೊಟ್ಟೂರು ಸಿಪಿಐ ರಮೇಶರವರು ಪ್ರಕರಣವನ್ನು ಗಂಭೀರ ಪರಿಗಣಿಸಿ ಅಫರಾದವನ್ನು ಕೇವಲ ಮೂರ್ನಾಲ್ಕು ದಿನಗಳಲ್ಲೇ ಬೇಧಿಸಿ, ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹೊಸಹಳ್ಳಿ ಪೊಲೀಸರು ಯಶಸ್ವೀಯಾಗಿದ್ದಾರೆ,ಪ್ರಕರಣದ ಪ್ರಮುಖ ಆರೋಪಿಗಳಾದ ಕೂಡ್ಲಿಗಿ ಪಟ್ಟಣದ ಕೆಇಬಿಯ ಲೈನ್ ಮ್ಯಾನ್ ಹಾಗೂ ಮೃತನ ಪತ್ನಿ ಫಾಮೀದಾಭಾನು ಎಂದು ತಿಳಿದುಬಂದಿದ್ದು,ಮೃತ ಫಯಾಜ್‍ನು ತನ್ನ ಪತ್ನಿ ಫಾಮೀದಾಭಾನು ಜೊತೆ ಕೆಇಬಿ ನೂರುಲ್ಲಾ ಇರಿಸಿಕೊಂಡಿದ್ದ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದೇ, ಖಂಡಿಸಿದ್ದೇ ಆತನ ಕೊಲೆಗೆ ಕಾರಣ ಎಂದು ವಿಷ್ಲೇಶಿಸಲಾಗಿದೆ.ಕೊಲೆ ಪ್ರಕರಣವನ್ನು ಅಲ್ಪ ಅವಧಿಯಲ್ಲೇ ಭೇಧಿಸಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹೊಸಹಳ್ಳಿ ಪೊಲೀಸರು ಯಶಸ್ವೀಯಾಗಿದ್ದಾರೆ.

     ಕಳೆದ ಶುಕ್ರವಾರ ತಡರಾತ್ರಿ ಜರುಗಿರಬಹುದಾದ ಘಟನೆ:

      ತಾಲೂಕಿನ ಎಂ.ಬಿ.ಐನಳ್ಳಿ ಗ್ರಾಮದ ಹತ್ತಿರದ ರಾಷ್ಠೀಯ ಹೆದ್ದಾರಿರಸ್ಥೆ ಬಳಿಯ ತಗ್ಗಿನಲ್ಲಿ ಆಯತಪಪ್ಪಿ ಬೀಳುವ ಸ್ಥಿತಿಯಲ್ಲಿ ಗೋಚರಿಸುವ ಕಾರೊಂದರಲ್ಲಿ ವೆಕ್ತಿಯೋರ್ವನು ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಗೋಚರಿಸಿರುವುದನ್ನು ಗ್ರಾಮದವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.  ಘಟನಾಸ್ಥಳಕ್ಕೆ ಪಿಎಸ್‍ಐ ಕೃಷ್ಣ ನಾಯ್ಕ ಸ್ಥಳಕ್ಕೆ ಬೆಟ್ಟಿಕೊಟ್ಟು ಪರಿಶೀಲಿಸಲಾಗಿ ಮೇಲ್ನೋಟಕ್ಕೆ ಕೊಲೆಶಂಕೆ ವೆಕ್ತಪಟ್ಟಿರುವ ಹಿನ್ನಲೆಯಲ್ಲಿ ಸಿಪಿಐರವರ ಗಮನಕ್ಕೆ ತಂದಿದ್ದು, ಸುದ್ದಿತಿಳಿದ ಸಿಪಿಐ ರಮೇಶರವರು ಘಟನಾ ಸ್ಥಳ ಪರಿಶೀಲಿಸಲಾಗಿ, ಮೃತನು ಕೂಡ್ಲಿಗಿ ಪಟ್ಟಣವಾಸಿ ಫಯಾಜ್ (45)ತಂದೆ ಅಬ್ಬಾಸಸಾಬ್ ಎಂದು ವಿಳಾಸ ಪತ್ತೆಯಾಗಿದ್ದು, ಕೂಡಲೇ ಪೊಲೀಸರು ಮೃತನ ಮನೆಯವರಿಗೆ ಸುಧ್ಧಿ ತಿಳಿಸಿದ್ದಾರೆ.

      ವಿಷಯ ತಿಳಿದ ಮನೆಯವರು ಸ್ಥಳಕ್ಕೆ ದೌಡಾಯಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆಗೆ ಕಾರಣರಾವರನ್ನು ಕೂಡಲೇ ಬಂಧಿಸಿ ತಮಗೆ ನ್ಯಾಯವ ಒಗಿಸಿಕೊಡಬೇಕೆಂದು ಹೊಸಹಳ್ಳಿ ಪೊಲೀಸರಲ್ಲಿ ಮೃತನ ಮನೆಯವರು ಮನವಿ ಮಾಡಿದ್ದರು.ಮೃತನ ಮನೆಯವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಈತನು ರೋಡ್ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಎಲ್ ಅಂಡ್ ಟಿ ಕಂನಿಯೊಂದಿಗೆ ತನ್ನ ಕಾರನ್ನು ಬಾಡಿಗೆ ಒಪ್ಪಂದದಂತೆ ಕಾರು ಬಾಡಿಗೆ ನೀಡುವ ಸಂಬಂಧ ಕಂಪನಿಯೊಂದಿಗೆ ಬಹುದಿನಗಳಿಂದ ವ್ಯವಹರಿಸುತ್ತಿದ್ದು, ಈಸಂಬಂಧ ಈತನು ಶುಕ್ರವಾರದಂದುರಾತ್ರಿ 10ಗಂಟೆ ಸಮಯದಲ್ಲಿ ಮನೆಯಿಂದ ಹೊರಟು ಬಂದಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ಹೆಣವಾಗಿ ತನ್ನ ಕಾರಿನಲ್ಲಿ ಹೆಣವಾಗಿ ಪತ್ತೆಯಾಗಿರುವುದು ತೀವ್ರ ಅನುಮಾನಾಸ್ಫದ ಮೂಡಿಸುತ್ತಿದ್ದು, ಯಾರೋ ಕೊಲೆಮಾಡಿದ್ದಾರೆಂದು ತಮಗೆ ಶಂಕೆಯಿದ್ದು,ಸೂಕ್ತ ತನಿಖೆ ನಡೆಸಿ ನ್ಯಾಯದೊರಕಿಸಿಕೊಡಬೇಕೆಂದು ಮೃತನ ಸಂಬಂಧಿಗಳು ಹಾಗೂ ಸಹೋದರರು, ಹೊಸಹಳ್ಳಿ ಪೊಲೀಸರಲ್ಲಿ ದೂರಿನ ಮೂಲಕ ಮನವಿ ಮಾಡಿದ್ದರು.

      ದೂರಿನನ್ವಯ ಅನುಮಾನಾಸ್ಪದ ಸಾವು ಕೊಲೆ ಶಂಕೆ ದೂರು ದಾಖಲಿಸಿಕೊಂಡ ಹೊಸಹಳ್ಳಿ ಪೊಲೀಸ್‍ರು.ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿ ಪ್ರಾಥಮಿಕ ಹಂತದಲ್ಲೇ ತನಿಖೆಯ ವೇಳೆ ಮೃತನ ಪತ್ನಿ ಫಾಮೀದಾಭಾನು ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಕೆಇಬಿ ಲೈನ್ ಮ್ಯಾನ್ ನೂರುಲ್ಲಾ ಎಂಬುವವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಡಲಾಗಿ, ಅವರ ಅನುಮಾನಸ್ಪದ ನಡೆಯ ಆಧಾರದ ಮೇಲೆ ಅವರನ್ನು ವಿಚಾರಣೆಗೊಳಪಡಿಸಿದಾಗ ಅಫರಾದವನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದ್ದು, ಇವರಿಬ್ಬರನ್ನೂ ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಿ ಬಂಧಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap