ಫಲಾನುಭವಿಗಳಿಗೆ ಸಿಲೆಂಡರ್ ವಿತರಣೆ

0
25

ಚಿತ್ರದುರ್ಗ:

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ರಾಷ್ಟ್ರೀಯ ಹೆದ್ದಾರಿ-13 ರಲ್ಲಿರುವ ಎಸ್.ಎನ್.ಆರ್.ಗ್ಯಾಸ್ ಏಜೆನ್ಸಿಯಲ್ಲಿ ಗುರುವಾರ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್‍ಗಳನ್ನು ವಿತರಿಸಿದರು.

ದ್ಯಾಮವ್ವನಹಳ್ಳಿ, ಜೆ.ಎನ್.ಕೋಟೆ, ಕ್ಯಾದಿಗೆರೆ, ವಿಜಾಪುರ, ಗೊಲ್ಲರಹಟ್ಟಿ, ನರೇನಹಾಳ್, ಇಂಗಳದಾಳ್, ಕೋಡೇನಹಟ್ಟಿ ಇನ್ನು ಮುಂತಾದ ಗ್ರಾಮೀಣ ಭಾಗದ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್‍ಗಳನ್ನು ವಿತರಿಸಿ ಮಾತನಾಡುತ್ತ. ಬಡ ಮಹಿಳೆಯರು ಕಟ್ಟಿಗೆ ಒಲೆ ಊದಿ ಅಡುಗೆ ಮಾಡುವುದರಿಂದ ಹೊಗೆ ದೇಹದೊಳಗೆ ಸೇರಿಕೊಂಡು ಕ್ಯಾನ್ಸರ್ ಇನ್ನು ಮುಂತಾದ ಕಾಯಿಲೆಗಳಿಗೆ ತುತ್ತಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್‍ಗಳನ್ನು ನೀಡಿದೆ. ಇಷ್ಟೆ ಅಲ್ಲದೆ ಇನ್ನು ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಇದರ ಪ್ರಯೋಜನ ಪಡೆದುಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಹೇಳಿದರು.
ಎಸ್.ಎನ್.ಆರ್.ಗ್ಯಾಸ್ ಏಜೆನ್ಸಿ ಮಾಲೀಕರಾದ ಜ್ಯೋತಿ, ಶ್ರೀನಿವಾಸ್‍ರೆಡ್ಡಿ, ಲೋಹಿತ್, ಸಂತೋಷ್ ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here