ಫೋರ್ಬ್ಸ್ : ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಕೊಹ್ಲಿ ಸ್ಥಾನ

 -  - 


ನ್ಯೂಯಾರ್ಕ್:

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಪ್ಲೊಯಡ್ ಮೇ ವೇದರ್ ಅಗ್ರ ಕ್ರಮಾಂಕದಲ್ಲಿದ್ದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಸ್ಥಾನ ಪಡೆದಿದ್ದಾರೆ.

     ಭಾರತದ ಕ್ರೀಡಾಪಟುಗಳಲ್ಲಿ ಕೊಹ್ಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. 24 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸುವ ಮೂಲಕ 83 ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಮಹಿಳೆಯರು ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ.

    29 ವರ್ಷದ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಮಾತ್ರವಲ್ಲ, ವಿಶ್ವದ ಕ್ರೀಡಾಪಟುಗಳಲ್ಲಿಯೂ ಹೆಸರುವಾಸಿಯಾಗಿದ್ದಾರೆ. 25 ಮಿಲಿಯನ್ ಗೂ ಹೆಚ್ಚು ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಪೋರ್ಬ್ಸ್ ಹೇಳಿದೆ.

     41 ವರ್ಷದ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಮೇ ವೇದರ್ 285 ಡಾಲರ್ ಮಿಲಿಯನ್ ಆದಾಯ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದುಕೊಡಿದ್ದಾರೆ.

     ಬಿಸಿಸಿಐ ಈ ವರ್ಷದ ಒಪ್ಪಂದದಂತೆ ವಿರಾಟ್ ಕೊಹ್ಲಿ ಸೇರಿದಂತೆ ಐವರನ್ನು A+ ಒಪ್ಪಂದದಂತೆ ತೆಗೆದುಕೊಂಡಿದ್ದು, ವಾರ್ಷಿಕ 1 ಮಿಲಿಯನ್ ಅಮೆರಿಕನ್ ಡಾಲರ್ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

     ಮೈದಾನದ ಹೊರಗೆಯೂ ಕೊಹ್ಲಿ ದೊಡ್ಡ ಮೊತ್ತದ ಆದಾಯ ಗಳಿಸುತ್ತಿದ್ದಾರೆ. ಪೂಮಾ, ಫೆಪ್ಸಿ, ಆಡಿ, ಒಕ್ಲಿ ಸೇರಿದಂತೆ ಮತ್ತಿತರ ಕಂಪನಿಗಳ ರಾಯಬಾರಿಯಾಗಿಯೂ ವಿರಾಟ್ ಕೊಹ್ಲಿ ಅಧಿಕ ಸಂಪಾದನೆ ಗಳಿಸುತ್ತಿದ್ದಾರೆ.

     ಆದರೆ, ಪೋರ್ಬ್ಸ್ ಪಟ್ಟಿಯಲ್ಲಿ ಯಾರೊಬ್ಬ ಮಹಿಳೆ ಕೂಡಾ ಸ್ಥಾನ ಪಡೆದುಕೊಂಡಿಲ್ಲ. ಟೆನ್ನಿಸ್ ಆಟಗಾರ್ತಿಯರಾದ ಲಿ ನಾ, ಮಾರಿಯಾ ಸರಪೋವಾ, ಸೆರೆನಾ ವಿಲಿಯಮ್ಸ್ ನಿರಂತರವಾಗಿ ಸ್ಥಾನ ಪಡೆದುಕೊಳ್ಳುತ್ತಿದ್ದರು.

     ಆದರೆ, ಲಿ 2014ರಲ್ಲಿ ನಿವೃತ್ತಿಯಾಗಿದ್ದರೆ, ನಿಷೇಧ ದ್ರವ್ಯ ಸೇವಿಸಿ ಶರಪೋವಾ 15 ತಿಂಗಳ ಕಾಲ ಅಮಾನತು ಆಗಿದ್ದಾರೆ. ಕಳೆದ ವರ್ಷ ಸೆರೆನಾ ವಿಲಿಯಮ್ಸ್ ಮಾತ್ರ ಸ್ಥಾನ ಪಡೆದುಕೊಂಡಿದ್ದರು. ಆದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಕೆ ಎರಡು ಮಕ್ಕಳಿಗೆ ಜನ್ಮ ನೀಡಿದ ನಂತರ ಆಕೆ ಬಹುಮಾನದ ಮೊತ್ತ 8 ಮಿಲಿಯನ್ ಅಮೆರಿಕನ್ ಡಾಲರ್ ನಿಂದ 62 ಸಾವಿರ ಡಾಲರ್ ಗೆ ಕುಸಿದಿತ್ತು.

comments icon 0 comments
0 notes
20 views
bookmark icon

Write a comment...

Your email address will not be published. Required fields are marked *