ಫ್ಯಾಷನ್ ರೂಪ ಪಡೆಯುತ್ತಿದೆ ಮಾದಕ ವ್ಯಸನ

0
43

ಹರಪನಹಳ್ಳಿ:

      ಮಾದಕ ವಸ್ತು ವ್ಯಸನ ಇತ್ತೀಚಿನ ದಿನಗಳಲ್ಲಿ ಫ್ಯಾಸನ್ ರೂಪ ಪಡೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಬೇಸರ ವ್ಯಕ್ತಪಡಿಸಿದರು

      ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಪಟ್ಟಣದ ಎಸ್.ಸಿ.ಎಸ್ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾದಕ ವಸ್ತಗಳ ವ್ಯಸನ ನಿರ್ಮೂಲನೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

     ಸಿಗರೇಟ್ ಸೇದುವವನು ಕಾಲೇಜುಗಳಲ್ಲಿ ಹೀರೊ ಎನಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಾದಕ ವ್ಯಸನಿಗಳು ದೇಶಕ್ಕೆ ಮಾರಕವಾಗುತ್ತಿದ್ದಾರೆ. ದೇಶದ ಭವಿಷ್ಯವಾಗಿರುವ ಮಕ್ಕಳು ಕೆಟ್ಟಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಕೆಟ್ಟ ಹವ್ಯಾಸಕ್ಕೆ ವಿದ್ಯಾರ್ಥಿಗಳು ಮಾರು ಹೋಗಬಾರದು ಎಂದು ಹೇಳಿದರು.

      ಸ್ವಾಸ್ಥ್ಯ ಮನುಷ್ಯ ಯಾವುದೇ ಅಪರಾಧ ಮಾಡಲು ಸಾಧ್ಯವಿಲ್ಲ. ಮಾದಕ ವಸ್ತು ಸೇವನೆ ಮಾಡಿದಾಗ ಅಪರಾಧ ಕೃತ್ಯಗಳು ಜರುಗುವ ಸಾಧ್ಯತೆಗಳು ಹೆಚ್ಚಳವಾಗಿರುತ್ತೆ. ಮಾದಕ ವಸ್ತುಗಳಿಗೆ ಬಲಿಯಾಗುವವರು ಆಯುಷ್ಯ ಕಳೆದುಕೊಳ್ಳುವ ಜತೆಗೆ ಭವಿಷ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಸುಂದರ ಸಮಾಜ ನಿರ್ಮಾಣಕ್ಕಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ತಡೆಬೇಕಿದೆ ಎಂದು ಹೇಳಿದರು.

      ಪ್ರಾಚಾರ್ಯ ಡಾ.ಆರ್. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ಶೋಭಾ, ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಎಸ್. ಗೋಪಿಕಾ, ಸರ್ಕಾರಿ ವಕೀಲ ಮಂಜುನಾಥ್ ಕಣವಿಹಳ್ಳಿ, ವಕೀಲರ ಸಂಘದ ಉಪಾಧ್ಯಕ್ಷೆ ಜೆ.ಸೀಮಾ, ಕಾರ್ಯದರ್ಶಿ ಇದ್ಲಿ ರಾಮಪ್ಪ, ವಕೀಲರಾದ ಕೆ.ಬಸವರಾಜ, ಎ.ಎಲ್ . ರೇವಣಸಿದ್ದಯ್ಯ, ಎಂ.ಮೃತ್ಯಂಜಯ ಇತರರಿದ್ದರು.
 

LEAVE A REPLY

Please enter your comment!
Please enter your name here