ಬಹುತೇಕ ಕೆರೆಗಳು ಬಹುತೇಕ ಭರ್ತಿ: ಶಾಸಕ

0
10

ತುರುವೇಕೆರೆ

     ತುಮಕೂರು ಶಾಖಾ ನಾಲೆಯ ತಾಲ್ಲೂಕಿನ ವಿತರಣಾ ನಾಲೆಯಲ್ಲಿ ನೀರು ಹರಿಯಲಿದ್ದು ವ್ಯಾಪ್ತಿಯ ಬಹುತೇಕ ಕೆರೆಗಳು ಹದಿನೈದು ದಿನಗಳಲ್ಲಿ ಭರ್ತಿಯಾಗಲಿವೆ ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.

   ತಾಲ್ಲೂಕಿನ ಸಂಪಿಗೆ ವಿತರಣಾ ನಾಲೆ 10 ಎ ರಲ್ಲಿ ಬುಧವಾರ ಗಂಗಾಪೂಜೆ ನೆರವೇರಿಸಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಯುವ ಎಲ್ಲಾ ಗೇಟ್‍ಗಳನ್ನು ತೆರೆದು ನಾಲೆಗೆ ನೀರು ಹರಿಸಿ ಮಾತನಾಡಿದ ಅವರು ಸತತ ಭರದಿಂದ ಕಂಗೆಟ್ಟಿರುವ ತಾಲ್ಲೂಕಿನ ಜನತೆ ಹಾಗೂ ಕೃಷಿಕರು ಪ್ರಸ್ತುತ ಸಾಲಿನಲ್ಲಾದರೂ ಕೆರೆಗಳನ್ನು ಭರ್ತಿ ಮಾಡಿಕೊಂಡು ಕೃಷಿಯೊಂದಿಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಬೇಕೆಂಬುದು ನನ್ನ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರನ್ನು ಸಂಪರ್ಕಿಸಿ ಮನವಿ ಮಾಡಲಾಗಿತ್ತು. ಇನ್ನು 15 ದಿನಗಳವರೆಗೆ ತಾಲ್ಲೂಕಿಗೆ ಹರಿಯಲಿದ್ದು 15 ರಿಂದ 30 ರವರೆಗೆ ಕುಣಿಗಲ್ ಗೆ ಹರಿಯಲಿದೆ. ನಂತರ ಸೆಪ್ಟಂಬರ್ 1 ರಿಂದ ಮತ್ತೆ ತಾಲ್ಲೂಕಿಗೆ ಹರಿಯಲಿದ್ದು ರೈತರು ಆತಂಕ ಪಡುವ ಪ್ರಮೇಯವಿಲ್ಲ. ನಾನು ನಿಮ್ಮೊಂದಿಗಿದ್ದು ತಾಲ್ಲೂಕಿನ ಕೆರೆಗಳನ್ನು ತುಂಬಿಸುವವರೆಗೆ ನಿದ್ದೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

   10 ಎ ಸಂಪಿಗೆ ಗೇಟ್ ನಂತರ ಕಾರೆಹಳ್ಳಿ ಎಸ್ಕೇಪ್, ನಿಟ್ಟೂರು, ಕಲ್ಲೂರು, ಮಾರ್ಗ ಗೇಟ್‍ಗಳನ್ನು ತೆರೆದು ನಾಲೆಯಲ್ಲಿ ನೀರು ಹರಿಸಲಾಯಿತು. ತಾಲ್ಲೂಕಿನ ರೈತಾಪಿವರ್ಗ ಸಂಯಮದಿಂದ ಕೆರೆಗಳಿಗೆ ನೀರು ಹರಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸಬೇಕು ಮನವಿ ಮಾಡಿದರು.

   ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡ ರೇಣುಕಪ್ಪ, ಮುಖಂಡರಾದ ಅಂಗರೇಕನಹಳ್ಳಿ ಶಿವಕುಮಾರ್, ದಿನೇಶ್, ಯಲ್ಲದಬಾಗಿ ಸೋಮಶೇಖರಯ್ಯ, ವಿರೇಂದ್ರಪಾಟೀಲ್, ಸಿದ್ದೇಶ್, ಷಡಕ್ಷರಿ, ಸಂಪಿಗೆ ಶಿವಲಿಂಗಮೂರ್ತಿ, ನರಸೇಗೌಡ, ನಾಗೇಶ್, ರಾಜು, ಕೋಡಿಪಾಳ್ಯ ಮಂಜುನಾಥ್, ರಾಘವದೇವನಹಳ್ಳಿ ಸುರೇಶ್, ಯೋಗೀಶ್, ಚಿಕ್ಕಬಸವಯ್ಯ, ಜಯಣ್ಣ, ಸೇರಿದಂತೆ ಸಂಪಿಗೆ ಸುತ್ತಮುತ್ತ ಭಾಗದ ರೈತ ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here