ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮಾತ್ರವಲ್ಲ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರು ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿದೆ. ವಜುಭಾಯಿ ವಾಲಾ ಅವರು ಅತಿಹೆಚ್ಚು ಸ್ಥಾನಗಳನ್ನು ಗಳಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶವನ್ನೇನೋ ನೀಡಿದ್ದಾರೆ. ಆದರೆ, ಅವರು ಇತರ ಎರಡು ಪಕ್ಷಗಳಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗಿದೆ.
ಭಾರತೀಯ ಜನತಾ ಪಕ್ಷಕ್ಕೆ ಮೇಲ್ನೋಟಕ್ಕೆ ಬಹುಮತ ಸಾಬೀತುಪಡಿಸಲು ಸಂಖ್ಯೆಗಳಿಲ್ಲ. ಆದ್ದರಿಂದ, ನಮ್ಮ ಮೈತ್ರಿಕೂಟ (ಜೆಡಿಎಸ್ ಮತ್ತು ಕಾಂಗ್ರೆಸ್)ದಲ್ಲಿ ಬಿಜೆಪಿಗಿಂತ ಹೆಚ್ಚು ಶಾಸಕರಿರುವುದರಿಂದ ನಮಗೇ ಮೊದಲ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ದುಂಬಾಲು ಬಿದ್ದಿದ್ದಾರೆ.
ಇದೀಗ ಬಿಜೆಪಿ ಬಳಿ 104 ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು ಇನ್ನೂ 8 ಸ್ಥಾನಗಳ ಅವಶ್ಯಕತೆಯಿದೆ . ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಜೊತೆಗೆ ತೆಗೆದುಕೊಂಡರೆ 78 + 38 = 116 ಸ್ಥಾನಗಳು ಇರುತ್ತವೆ. ಬಹುಮತಕ್ಕೆ ಇಷ್ಟು ಸಾಕು. ಆದ್ದರಿಂದ ನಮಗೇ ಮೊದಲ ಅವಕಾಶ ಕೊಡಬೇಕೆಂಬುದು ಕಾಂಗ್ರೆಸ್ ನಾಯಕರ ಆಗ್ರಹ.
ಆದರೆ, ವಜುಭಾಯಿ ವಾಲಾ ಅವರು ಪಕ್ಕಾ ಬಿಜೆಪಿ ನಾಯಕನಾಗಿರುವುದರಿಂದ ಯಡಿಯೂರಪ್ಪನವರಿಗೇ ಮೊದಲ ಅವಕಾಶ ಕೊಟ್ಟಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಆರೋಪ. ಇದರ ವಿರುದ್ಧ ಹೋರಾಟ ನಡೆಸಲು ಅವರು ಈಗಾಗಲೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಮೂರು ಆಯ್ಕೆಗಳು ಅವರ ಮುಂದಿವೆ.
1) ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶ ನೀಡಿದರೆ, ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟುವುದು. ಇದರಲ್ಲಿ ಕಾಂಗ್ರೆಸ್ಸಿಗೆ ಜಯ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ, ಬೊಮ್ಮಾಯಿ ಪ್ರಕರಣದಲ್ಲಿ ಅತಿದೊಡ್ಡ ಪಕ್ಷಕ್ಕೆ ಮೊದಲ ಅವಕಾಶ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತಿತ್ತು.
2) ಎರಡನೇ ಆಯ್ಕೆಯೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರನ್ನು ಕರ್ನಾಟಕದ ರಾಜ್ಯಪಾಲರ ಮುಂದೆ ಪರೇಡ್ ನಡೆಸಿ, ತಮ್ಮ ಬಳಿ ಬಹುಮತಕ್ಕೆ ಸಂಖ್ಯೆಗಳಿವೆ ಎಂದು ರುಜುವಾತು ಪಡಿಸುವುದು.
3) ಇದರಿಂದನೂ ನ್ಯಾಯ ಸಿಗದಿದ್ದರೆ, ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿಸುವುದು.
ದಾವಣಗೆರೆ
ಬೆಳ್ಳೂಡಿ ಗ್ರಾಮದ ಮೃತ ರೈತ ಪ್ರಕಾಶ್ ಅವರು ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ . ಪ್ರಕಾಶ್ ಬೆಳ್ಳೂಡಿ ಗ್ರಾಮ ಪಂಚಾಯತಿ ಸದಸ್ಯರು ಕೂಡ ಆಗಿದ್ದರು. ಇವರು ಅದೇ...