ಬಹುವರ್ಷಗಳ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ

 -  - 


ಬೆಂಗಳೂರು:

ಬಹುವರ್ಷಗಳ ನಂತರ ಕರ್ನಾಟಕದಲ್ಲಿ ಹೊಸ ವಿದ್ಯಮಾನವೊಂದು ದಾಖಲಾಗಿದೆ. ಅದೇನೆಂದರೆ, ಕೇಂದ್ರದಲ್ಲಿ ಮತ್ತು ಕರ್ನಾಟಕದಲ್ಲಿ ಒಂದು ಸರಕಾರ ಇರುವುದು!

ಇತಿಹಾಸದ ಪುಟಗಳನ್ನು ಒಂದು ಬಾರಿ ತಿರುವಿಹಾಕಿ ನೋಡಿದರೆ ತಿಳಿಯುತ್ತದೆ. ಇದೇನು ಕಾಕತಾಳೀಯವೋ, ಕರ್ನಾಟಕದ ದೌರ್ಭಾಗ್ಯವೋ ಕೇಂದ್ರ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷದ ಸರಕಾರ ಸ್ಥಾಪನೆಯಾಗಿದ್ದೇ ಇಲ್ಲ.

ಇದು ಆರಂಭವಾಗಿದ್ದು 1972ರಲ್ಲಿ. 1972ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ದೇಶದಲ್ಲೆಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ಕರ್ನಾಟಕದಲ್ಲಿ ಆಗ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿದ್ದಾಗ ಜನತಾ ಪಕ್ಷ ಕೇಂದ್ರದಲ್ಲಿ ಆಡಳಿತ ಚಲಾಯಿಸುತ್ತಿತ್ತು.

 
Same party in Karnataka and Centre: BJP changes long standing trend

1984ರಲ್ಲಿ ಇಂದಿರಾ ಗಾಂಧಿಯ ಹತ್ಯೆ ನಡೆದ ನಂತರ ಇಂದಿರಾ ಗಾಂಧಿಯವರು ಹತ್ಯೆಯಾದ ನಂತರ ರಾಜೀವ್ ಗಾಂಧಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಕರ್ನಾಟಕದಲ್ಲಿ ಜನತಾ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು.

ನಂತರ, 1999ರಲ್ಲಿ ಎಸ್ಎಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಮೂಲಕ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾಗ, ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಎನ್‌ಡಿಎ ಮೈತ್ರಿಕೂಟವನ್ನು ಮುನ್ನಡೆಸುತ್ತಿದ್ದರು.

2004ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ಜೆಡಿಎಸ್ ಮೈತ್ರಿಯ ಜೊತೆ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಾಗ, ಕೇಂದ್ರದಲ್ಲಿ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 10 ವರ್ಷಗಳ ಕಾಲ ಆಡಳಿತ ನಡೆಸಿದರು.

ಇದೇ ಟ್ರೆಂಡ್ ಮುಂದುವರಿದು, 2008ರಲ್ಲಿ ಆಪರೇಶನ್ ಕಮಲ ನಡೆಸಿ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬಂದಾಗ, ಒಂದು ವರ್ಷದ ನಂತರ 2009ರಲ್ಲಿ ಯುಪಿಎ ಸರಕಾರವೇ ಮತ್ತೆ ಅಧಿಕಾರದಲ್ಲಿ ಬಂದಿತ್ತು. ಡಾ. ಮನಮೋಹನ ಸಿಂಗ್ ಅವರು ಮತ್ತೆ ಪ್ರಧಾನಿಯಾಗಿದ್ದರು.

5 ವರ್ಷಗಳ ಹಿಂದೆ 2013ರಲ್ಲಿ ಕೂಡ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿ ಬಂದಾಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಬಿಜೆಪಿ ಮುಂದಾಳತ್ವದ ಎನ್ ಡಿಎ ಸರಕಾರ ಆಡಳಿತ ನಡೆಸುತ್ತಿತ್ತು.

ಇದೀಗ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದುಕೊಂಡಿದೆ. ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದೆ. ಇನ್ನೊಂದು ವರ್ಷದಲ್ಲಿ 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಬಿಜೆಪಿಯೇ ಅಧಿಕಾರಕ್ಕೆ ಬರುವುದಾ ಅಥವಾ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವುದಾ?

comments icon 0 comments
0 notes
3 views
bookmark icon

Write a comment...

Your email address will not be published. Required fields are marked *