ಬಾಕಿ ಇದ್ದ 3 ಪಾಲಿಕೆಗಳ ಚುನಾವಣೆಗೆ ಬಿತ್ತು ಗ್ರೀನ್ ಸಿಗ್ನಲ್

0
107

ಬೆಂಗಳೂರು:

      ಸ್ಥಳೀಯ ಸಂಸ್ಥೆಗಳಿಗೆ ಆ.29ರಂದು ಎಲೆಕ್ಷನ್ :  ಸೆಪ್ಟೆಂಬರ್ 1 ಮತಗಳ ಏಣಿಕೆ

      ಹೈಕೋರ್ಟ್ ನಲ್ಲಿ ತಡೆಯಾಜ್ಞೆಯಿದ್ದ 3 ಮಹಾನಗರ ಪಾಲಿಕೆಗಳ (ಮೈಸೂರು, ಶಿವಮೊಗ್ಗ ಹಾಗೂ ತುಮಕೂರು) ಚುನಾವಣೆಗೆ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

      ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕವು ಈಗಾಗಲೇ ಪ್ರಕಟಗೊಂಡಿದೆ. ಆದರೆ ತುಮಕೂರು ಸೇರಿದಂತೆ ಶಿವಮೊಗ್ಗ ಹಾಗೂ ಮೈಸೂರು ಈ ಮೂರು ಮಹಾನಗರ ಪಾಲಿಕೆಗಳು ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಕೋರಿ ರಿಟ್ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವು ಹೈಕೋರ್ಟ್ ನಲ್ಲಿ ತಡೆಯಾಜ್ಞೆಯಿದ್ದ ಕಾರಣ ಈ 3 ಪಾಲಿಕೆಗಳ ಚುನಾವಣಾ ದಿನಾಂಕವು ಪ್ರಕಟಗೊಂಡಿರಲಿಲ್ಲ.

ಇಂದು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶ ಬಿ.ವೀರಪ್ಪ ರವರು 3 ಪಾಲಿಕೆಗಳ ರಿಟ್ ಅರ್ಜಿಯನ್ನು ವಜಾಗೊಳಿಸುವ ಮೂಲಕ  ಚುನಾವಣೆಗೆ ಆದೇಶ ನೀಡಿದ್ದಾರೆ.

      ರಾಜ್ಯ ಚುನಾವಣಾ ಆಯೋಗವು ಆ.2 ರಂದು ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ಪ್ರಕಟಿಸಿತ್ತು. ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 29 ರಂದು ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 1 ರಂದು ಮತಗಳ ಏಣಿಕೆ ಕಾರ್ಯ ಜರುಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು.

 

LEAVE A REPLY

Please enter your comment!
Please enter your name here