ಬಾಲ್ಯದಲ್ಲೆ ಕ್ರೀಡಾಸಕ್ತಿ ಬೆಳೆಸಿಕೊಂಡರೆ ಉತ್ತಮ ಆರೋಗ್ಯ

0
16

ಬರಗೂರು

    ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಹಿರಿಯ-ಕಿರಿಯ ಎಂಬ ಭೇದ ಭಾವ ಕ್ರೀಡೆಗಿರುವುದಿಲ್ಲ. ಸೋಲು-ಗೆಲುವು ಲೆಕ್ಕಿಸದೆ ಪ್ರತಿಯೊಬ್ಬರು ಕ್ರೀಡಾಸಕ್ತಿ ಹೊಂದುವಂತೆ ಬರಗೂರು ಲಿಟಲ್ ರೋಸಸ್ ಶಾಲೆಯ ಪ್ರಾಂಶುಪಾಲ ಡಿವಿ.ಶಿವಪ್ರಸಾದ್ ಕರೆ ನೀಡಿದರು.

   ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿನ ಲಿಟಲ್ ರೋಸಸ್ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಹುಲಿಕುಂಟೆ ಹೋಬಳಿಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ 2018-19ರ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

    ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ಕ್ರೀಡಾ ಬಾಂಧವ್ಯ ಬೆಳೆಸಬೇಕು. ಕ್ರೀಡೆಗಳಿಂದ ಯಾವುದೇ ರೋಗ ಬರದಂತೆ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.
ಮುಕ್ತಾಯ ಸಮಾರಂಭದಲ್ಲಿ ಟಿ.ಟಿ.ಓ ರಾಜ್‍ಕುಮಾರ್, ಬರಗೂರು ಸರ್ಕಾರಿ ಹಿರಿಯ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟತಾಯಮ್ಮ, ಲಕ್ಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಮ್ಮ, ಶಿಕ್ಷಕರಾದ ರವಿ, ಲಿಟಲ್ ರೋಸಸ್ ಶಾಲೆಯ ಭಾಗ್ಯಲಕ್ಷ್ಮೀ, ಶಿಕ್ಷಣ ಸಂಯೋಜಕರಾದ ಶಿವರಾಂ, ಹುಲಿಕುಂಟೆ ಹೋಬಳಿಯ ಕ್ಲಸ್ಟರ್ ಮಟ್ಟದ ಎಲ್ಲಾ ಶಿಕ್ಷಣ ಸಂಯೋಜಕರು ಹಾಗೂ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here