ಬಿಎಂಟಿಸಿ ಬಸ್ ಬಣ್ಣ ಬದಲಾವಣೆಗೆ ಚಿಂತನೆ

0
46

ಬೆಂಗಳೂರು:

       ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್‌ಗಳು ನೀಲಿ ಮತ್ತು ಬಿಳಿ ಬಣ್ಣಗಳೊಂದಿಗೆ ಗೋಚರಿಸಲಿದೆ. ಆದರೆ ಹವಾ ನಿಯಂತ್ರಿತ ಮತ್ತು ಮಿಡಿ ಬಸ್‌ಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಬಸ್‌ಗಳಿಗೆ ನೀಲಿ ಹಾಗೂ ಬಿಳಿ ಬಣ್ಣ ಬಳಿಯಲಾಗುತ್ತದೆ. ಈ ಕುರಿತು ಸಕಾಷ್ಟು ಸಮೀಕ್ಷೆಗಳು ನಡೆದಿವೆ. ನಂತರ ಬಿಎಂಟಿಸಿಯ 850 ಹವಾ ನಿಯಂತ್ರಿತ ಬಸ್‌ಗಳು ಸಂಪೂರ್ಣ ನೀಲಿ ಬಣ್ಣದಲ್ಲಿ ಹಾಗೂ ಮಿಡಿ ಬಸ್‌ಗಳು ಕೇಸರಿ ಬಣ್ಣದಲ್ಲಿ ಗೋಚರಿಸಲಿದೆ. 

      ಬೆಳಗಿನ ಜಾವ ಮತ್ತು ರಾತ್ರಿ ಹೊತ್ತು ಬಸ್ಸು ಬರುವುದು ನೀಲಿ ಮತ್ತು ಬಿಳಿ ಬಣ್ಣವಾಗಿದ್ದರೆ ಚೆನ್ನಾಗಿ ಕಾಣಿಸುತ್ತದೆ, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ ಎಂದು ಅನೇಕ ಚಾಲಕರು ಮತ್ತು ನಿರ್ವಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ಬಿಎಂಟಿಸಿ ಬಸ್ಸಿನ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಲ್ಲಿ ಬಸ್ಸುಗಳ ಬಣ್ಣ ಕುರಿತು ಸಾಕಷ್ಟು ಸಮೀಕ್ಷೆ ನಡೆಸಿದೆ. ಹಿಂದೆ ನಮ್ಮಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಸ್ಸುಗಳಿದ್ದವು. ಸಮೀಕ್ಷೆಯಲ್ಲಿ ಬಹುತೇಕರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದಾರೆನ್ನಲಾಗಿದೆ.

       ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 5,299 ನಿಗದಿತ ಬಸ್ಸುಗಳ ಬಣ್ಣಗಳನ್ನು ಬದಲಾಯಿಸಲು ಜೂ.23ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಈ ವಿಷಯವನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ದೃಢಪಡಿಸಿದ್ದಾರೆ. 

 

 

LEAVE A REPLY

Please enter your comment!
Please enter your name here