ಬಿಜೆಪಿ ಅಧಿಕಾರ ಹಿಡಿಯಲು ಇನ್ನೂ ಕಾಲ ಮಿಂಚಿಲ್ಲ : ಬಿ ಎಸ್ ವೈ

0
22

ಬೆಂಗಳೂರು:

ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಅಧಿಕಾರ ಸೂತ್ರ ಹಿಡಿಯಲು ಇನ್ನೂ ಕಾಲ ಮಿಂಚಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

      ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಜನರ ಭಾವನೆಗಳಿಗೆ ವಿರುದ್ಧವಾಗಿದೆ. ಬಿಜೆಪಿ ಅಧಿಕಾರ ಹಿಡಿಯಬೇಕಿತ್ತು ಎನ್ನುವುದು ಜನರ ನಿರೀಕ್ಷೆಯಾಗಿದೆ. ನಿರೀಕ್ಷೆಗೆ ವಿರುದ್ಧವಾಗಿ ಸರ್ಕಾರ ರಚನೆಯಾಗಿದೆ. ಮೈತ್ರಿ ಸರ್ಕಾರದಿಂದ ಹೊರ ಬರಲು ಇಚ್ಚಿಸುವವರನ್ನು ಗುರುತಿಸಿ ಸ್ವಾಗತಿಸುವ ಕೆಲಸ ಆಗಬೇಕಾಗಿದೆ ಎಂದು ಶಾಸಕರು, ಸಂಸದರು, ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.

      ಜನಾದೇಶ ನಮ್ಮ ಪರವಾಗಿದೆ. ಆದರೆ ಅವಕಾಶವಾದಿ ಮೈತ್ರಿಕೂಟಗಳಾದ ಕಾಂಗ್ರೆಸ್ – ಜೆಡಿಎಸ್ ಅಧಿಕಾರದ ಸೂತ್ರ ಹಿಡಿದಿದೆ. ಸರ್ಕಾರ ಕಚ್ಚಾಟದಿಂದಲೇ ಉರುಳಲಿದೆ. ಆದರೆ ನಾವು ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ಯಾರೂ ಸಹ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಬೇಡ. ಮಾಧ್ಯಮಗಳ ಮುಂದೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಅದು ಪಕ್ಷದ ನಿಲುವನ್ನು ಪ್ರತಿಬಿಂಬಿಸಬೇಕು ಎಂದು ತಾಕೀತು ಮಾಡಿದರು.

      ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹೋರಾಟ ತೀವ್ರವಾಗಿರಲಿ. ಸರ್ಕಾರವನ್ನು ಕಟ್ಟಿಹಾಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸೋಣ. ಕಳೆದ ಚುನಾವಣೆಯಲ್ಲಿ 135 ಸ್ಥಾನ ಗೆಲ್ಲುವ ಸಾಧ್ಯತೆಯಿತ್ತು. ಆದರೆ 104 ಮಾತ್ರ ಗೆದ್ದೆವು. ಇದಕ್ಕೆ ನಮ್ಮದೇ ತಪ್ಪುಗಳು ಕಾರಣ ಎಂದರು.

      ಗೊಂದಲದ ಗೂಡಾಗಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದ್ದು, ಜನಪರ ಯೋಜನೆಗಳು ಜಾರಿಯಾಗುವ ವಿಶ್ವಾಸವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಟೀಕಿಸಿದ್ದಾರೆ.

      ಬಿಜೆಪಿ ರಾಜ್ಯ ಕಾರ್ಯಕಾರಣಿ ಉದ್ಘಾಟಿಸಿ ಮಾತನಾಡಿ, ಬಜೆಟ್ ಮಂಡಿಸುವ ವಿಚಾರದಲ್ಲಿ ಕಚ್ಚಾಟ ಜೋರಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 22 ದಿನಗಳು ಕಳೆದಿವೆ. ಇಷ್ಟಾದರೂ ಆಡಳಿತ ಯಂತ್ರ ಚುರುಕುಗೊಳ್ಳದೇ ಸ್ಥಗಿತಗೊಂಡಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಆಪಾದಿಸಿದರು.

      ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ಬಜೆಟ್‍ನ್ನು ಸೋತಿರುವವರ ಬಜೆಟ್ ಎಂದಿದ್ದಾರೆ. ಸಿದ್ದರಾಮಯ್ಯ ಬಜೆಟ್ ಬದಲಾವಣೆ ಮಾಡಬಾರದು. ಪೂರಕ ಬಜೆಟ್ ಮಂಡಿಸಬೇಕು ಎಂದಿದ್ದಾರೆ. ಬಜೆಟ್ ಮಂಡನೆಯಲ್ಲಿ ಗೊಂದಲವಿದೆ. ಏನೇ ಇರಲಿ ಸಮ್ಮಿಶ್ರ ಸರ್ಕಾರದ ಬಜೆಟ್‍ಗೆ ಪಾವಿತ್ರ್ಯತೆ ಉಳಿದಿಲ್ಲ ಎಂದರು.

      ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿ ಜನರಿಗೆ ದ್ರೋಹ ಮಾಡಿದ್ದಾರೆ. ಅವರು ಈಗಲಾದರೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲಿ. ಅವರೇ ಹೇಳಿದಂತೆ ರೈತರ ಸಾಲಮನ್ನಾ ಮಾಡಬೇಕು. ಎಸಿಬಿ ರದ್ದು ಮಾಡಿಲೋಕಾಯುಕ್ತ ಬಲಗೊಳಿಸಬೇಕು, ಹನಿನೀರಾವರಿಗೆ ಶೇ. 90 ರಷ್ಟು ಪ್ರೋತ್ಸಾಹ  ಧನ ಕೊಡಬೇಕು ಎಂದು ಆಗ್ರಹಿಸಿದರು.

      ಸಮ್ಮಿಶ್ರ ಸರ್ಕಾರದ ಆಡಳಿತ ಸ್ಥಗಿತದ ಬಗ್ಗೆ ಚರ್ಚೆಯಾಗಬೇಕಿದೆ. ಸರ್ಕಾರ ದಿವಾಳಿಯಾಗಿದೆ. ಇಂದಿರಾ ಕ್ಯಾಂಟೀನ್‍ಗೂ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ. ಹಾಲು ಉತ್ಪಾದಕರಿಗೆ ಪೆÇ್ರೀತ್ಸಾಹ ಧನ 6 ತಿಂಗಳಿಂದ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

      ರಾಜ್ಯ ಸರ್ಕಾರದ ದಿವಾಳಿತನ, ಹಾಲಿನ ಪ್ರೋತ್ಸಾಹ  ಧನ ನೀಡದಿರುವ ಬಗ್ಗೆ ಬಿಜೆಪಿ ಪದಾಧಿಕಾರಿಗಳು ಮಾತನಾಡದೇ ಇರುವುದಲ್ಲೆ ಬೇಸರ ವ್ಯಕ್ತಪಡಿಸಿದ ಯಡಯೂರಪ್ಪ ಅವರು, ಇನ್ನು ಮುಂದೆಯಾದರೂ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸಿ ಎಂದರು.

      ವಿಧಾನಸಭಾ ಚುನಾವಣೆಯ ನಂತರ ನಡೆದ ಮೊದಲ ಕಾರ್ಯಕಾರಿಣಿಯಲ್ಲಿ ಎಲ್ಲ ಹಿರಿಯ ನಾಯಕರುಗಳು, ಬಿಜೆಪಿಯ ಕೇಂದ್ರ ಸಚಿವರುಗಳು, ಬಹುತೇಕ ಶಾಸಕರು, ಸಂಸದರು ಹಾಜರಾಗಿದ್ದು, ಅನಾರೋಗ್ಯ ಕಾರಣದಿಂದ ಕೇಂದ್ರ ಸಚಿವ ಸದಾನಂದಗೌಡ ಗೈರುಹಾಜರಾಗಿದ್ದರು. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

LEAVE A REPLY

Please enter your comment!
Please enter your name here