ಬಿಜೆಪಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು: ಗೆಲುವಿಗೆ ತಂತ್ರಜ್ಞಾನದ ಅಳಿಲು ಸೇವೆ

0
11

ಹರಪನಹಳ್ಳಿ:

ಚುನಾವಣೆ ಮುಗಿದು ಫಲಿತಾಂಶವೂ ಬಂದಾಯಿತು. ರಾಜ್ಯದಲ್ಲಿ ಏನೇ ಇರಲಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದವರಿಗೆ ಅತೀವ ಸಂತೋಷವಾಗಿದೆ ಎನ್ನವುದನ್ನು ಸಂಭ್ರಮಾಚರಣೆಯಲ್ಲಿ ಸಾಬೀತಾಗಿದೆ.

ಗೆಲುವು ನನ್ನದಲ್ಲಿ ಕಾರ್ಯಕರ್ತರು ಹಾಗೂ ಮತದಾರರು ನಮ್ಮ ಅಭಿವೃದ್ದಿ ಕೆಲಸಗಳುನ್ನು ಮೆಚ್ಚಿ ಹಾಕಿದ ಮತಗಳಿಗೆ ಸಂದ ಜಯವಾಗಿದೆ ಎಂದು ಜಯಶಾಲಿಯಾಗಿರುವ ಜಿ.ಕರುಣಾಕರರೆಡ್ಡಿಯವರು ಅಭಿನಂದಿಸಿದ್ದಾರೆ. 2013 ರ ಚುನಾವಣೆಯಲ್ಲಿ ಪರಾಭವಗೊಂಡು ನಂತರ ಸಾಕಷ್ಟು ವಿಷಯಗಳನ್ನು ತಿಳಿದಂತಾಗಿದೆ. ಇಲ್ಲಿ ನಿಜವಾದ ಕಾರ್ಯಕರ್ತರು ಯಾರು ಎನ್ನುವುದು ಅರ್ಥವಾಗಿದೆ. ಕೇವಲ ಸ್ವಾರ್ಥಕ್ಕಾಗಿ ಬಂದು ಹೋಗುವವರು ಸೋಲಿನ ನಂತರ ಜೊಳ್ಳಾಗಿ ಉದುರಿಹೋದ ಕಾಳುಗಳಾದರು. ಐದು ವರ್ಷಗಳ ಕಾಲ ಜೊತೆಯಲ್ಲಿ ಗಟ್ಟಿಯಾಗಿ ಯಳಿದು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮಾತೃಘಟಕದಿಂದ ಬೇರೆಯಾಗಿ ಭಿನ್ನ ಬಿಜೆಪಿ ಭಣವೂ ನಿರ್ಮಾಣವಾಗಿದ್ದು ಗೆಲುವಿಗೆ ಇನ್ನಷ್ಟು ಶ್ರಮಿಸುವಂತೆ ಮಾಡಿತ್ತು.
2018 ರ ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನಾ ದಿನಗಳಿಂದ ಪ್ರತಿ ಗ್ರಾಮ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಮತದಾರರನ್ನು ಬೇಟಿ ಮಾಡಿ ತಾಲೂಕಿನಾದ್ಯಂತ ನಿರಂತರ ಪ್ರವಾಸ ಮುಗಿಸಿದ್ದು, ಕಾರ್ಯಕರ್ತರು ಸಕ್ರೀಯವಾಗಿ ವಹಿಸಿದ ಕಾರ್ಯಗಳನ್ನು ನಿರ್ವಹಿಸಿದ್ದು, ಹಿಂದೆ ನಮ್ಮ ಆಡಳಿತಾವಧಿಯ ಅಭಿವೃದ್ದಿ ಕಾರ್ಯಗಳು ಜನಮೆಚ್ಚುಗೆಗೆ ಕಾರಣವಾಗಿ ಚುನಾವಣೆ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಅಭಿನಂದಿಸಿದ್ದಾರೆ.

ತಂತ್ರಜ್ಞಾನದ ಬಳಕೆಯ ಅಳಿಲು ಸೇವೆ
ಜೊತೆಯಲ್ಲಿ ತಂತ್ರಜ್ಞಾನ ಬಳಕೆಯೂ ಕೂಡ ತಮ್ಮ ಅಳಿಲು ಸೇವೆ ಸಲ್ಲಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪಟ್ಟಣದಲ್ಲಿ ನ್ಯಾನೋ ಟೆಕ್ನಾಲಜಿಯಲ್ಲಿ ಪಿಹೆಚ್‍ಡಿ ಅಭ್ಯಾಸ ಮಾಡುತ್ತಿರುವ ಗುರುಪ್ರಸಾದ್, ಕೃಷಿ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕಾಂತ್ ಪಾಟೀಲ್ ಹಾಗೂ ಕೆಇಬಿ ಗುತ್ತಿಗೆದಾರ ವೀರೇಶ್ ಇಟ್ಟಿಗಿ ಎಂಬ ಯುವಕರ ನೇತೃತ್ವದ ತಂಡ ತಂತ್ರಜ್ಞಾನದ ಬಳಕೆ ಮಾಡುವಲ್ಲಿ ಯಶಸ್ವಿಯಾದರು.

ಮಹಾರಾಷ್ಟ್ರದಿಂದ ಡ್ರೋಣ್ ಕ್ಯಾಮೆರಾ ತರಿಸಿ ಕರುಣಾಕರರೆಡ್ಡಿಯವರ ಭಾವಚಿತ್ರ ಹೊತ್ತು ಹಾರಾಡಿತ್ತು ಡ್ರೋಣ್. ಗ್ರಾಮಗಳಲ್ಲಿ ಜನರನ್ನು ಕ್ರೂಢಿಕರಿಸುವಲ್ಲಿ ಡ್ರೋಣ್ ಉತ್ತಮ ಸಾಧನವಾಗಿತ್ತು. ಹಾಗೆಯೇ ಜಿಕೆಆರ್ ಆಪ್ ಕ್ರಿಯೇಟ್ ಮಾಡಿದ ತಂಡ ರೆಡ್ಡಿಯವರ ಸಾಧನೆಗಳನ್ನು ವಿಡಿಯೋ ಚಿತ್ರಣವನ್ನು ಆಪ್ ಮೂಲಕ ಸುಮಾರು ಸಾವಿರಾರು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರೋಣ್ ನೋಡಲು ಕೂಡುವ ಜನರಿಗೆ ಬಿಜೆಪಿ ಹಾಗೂ ರೆಡ್ಡಿಯವರ ತಾಲೂಕಿನಲ್ಲಿನ ಸಾಧನೆಗಳನ್ನು ಪ್ರೋಜೆಕ್ಟರ್ ಮೂಲಕ ಪರದೆ ಮೇಲೆ ತೋರಿಸುವ ಕೆಲಸವೂ ಜೋರಾಗಿ ನೆಡೆದಿತ್ತು. ಮೊಬೈಲ್ ಗಳಿಗೆ ಕರುಣಾಕರರೆಡ್ಡಿಯವರ ದ್ವನಿ ಮುದ್ರಿಕೆ ರವಾನೆಯಾಗಿದ್ದವು ಇವುಗಳನ್ನೆಲ್ಲಾ ಚುನಾವಣೆಯಲ್ಲಿ ಬಳಸಿ ಬಿಜೆಪಿ ಗೆಲುವಿಗೆ ಯುವಕರ ತಂಡ ಅಳಿಲು ಸೇವೆ ಸಲ್ಲಿಸಿದೆ.
ಕರುಣಾಕರರೆಡ್ಡಿಯವರ ಸೌಮ್ಯ ಸ್ವಭಾವ, ಅಭಿವೃದ್ದಿಯ ಚಿಂತನೆ, ಅವರ ಮುಖಂಡರು, ಕಾರ್ಯಕರ್ತರು, ಯುವಕರು, ಅಭಿಮಾನಿಗಳ ಸಾಧನೆ ಬಿಜೆಪಿ ಗೆಲುವಿಗೆ ಉತ್ತಮ ಕಾರ್ಯವಾಗಿ ನರ್ವಹಣೆಗೊಂಡಿವೆ ಎಂದರೆ ಅತಿಶಯೋಕ್ತಿ ಎನಿಸಲಾರದು.

ಡಿಜಿಟಲ್ ಜನಸಂಪರ್ಕ ಕೇಂದ್ರ

ನೂತನ ಶಾಸಕರು ಅವಕಾಶ ನೀಡಿದಲ್ಲಿ ಐದು ವರ್ಷಗಳ ಕಾಲ ಜನರ ಕುಂದು ಕೊರತೆಗಳಿಗೆ ಪರಿಹಾರ ನೀಡುವಂತಾ ಶಾಸಕರು ಮತ್ತು ಜನರಿಗೆ ಕೊಂಡಿಯಾಗುವಂತಹ ತಂತ್ರಜ್ಞಾನ ಬಳಸಿ ಡಿಜಿಟೆಲ್ ಜನಸಂಪರ್ಕ ಕೇಂದ್ರವನ್ನು ತೆರೆಯಲು ಸಿದ್ದರಿದ್ದೇವೆ ಎಂದು ಸಂಶೋಧನಾ ಸಹಾಯಕರು, ಜಯಚಾಮರಾಜೇಂದ್ರ ಇಂಜಿನೀಯರಿಂಗ್ ಕಾಲೇಜ್, ಮೈಸೂರಿನ ವಿದ್ಯಾರ್ಥಿ ಗುರುಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here