ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಪಿ.ವಿ.ಸಿಂಧು ಸೆಮಿ ಫೈನಲ್ಸ್ ಗೆ ಪ್ರವೇಶ

0
47

ನಾನ್ಜಿಂಗ್:

      ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.

      ನೋಜೊಮಿ ಒಕುಹರಾ ಅವರ ವಿರುದ್ಧ 2017 ರ ವಿಶ್ವ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಸಿಂಧು ಸೋಲನ್ನನುಭವಿಸಿದ್ದರು. 2018 ರ ಕ್ವಾರ್ಟರ್ ಫೈನಲ್ ನಲ್ಲಿ 21-17, 21-19 ಸೆಟ್ ಗಳ ಅಂತರದಿಂದ ಸಿಂಧು ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು, ಫೈನಲ್ಸ್ ಪ್ರವೇಶಿಸಿದ್ದಾರೆ.

      ಪ್ರಾರಂಭಿಕ ಹಂತದಲ್ಲಿ ಪಿ.ವಿ ಸಿಂಧು ಹಿನ್ನಡೆ ಎದುರಿಸಿದರಾದರೂ ನಂತರದ ಭಾಗದಲ್ಲಿ 11-10 ರ ಮುನ್ನಡೆ ಸಾಧಿಸಿದರು. ಈ ನಂತರ ಮುನ್ನಡೆಯನ್ನು ಬಿಟ್ಟುಕೊಡದ ಸಿಂಧು, 21-17, 21-19 ಸೆಟ್ ಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ್ದಾರೆ.

LEAVE A REPLY

Please enter your comment!
Please enter your name here