ಬಿಸಿಯೂಟ ತಯಾರಕರ ಫೆಡರೇಷನ್‍ನಿಂದ ಶಿಕ್ಷಣ ಸಚಿವರಿಗೆ ಮನವಿ: ಗೌರವಧನ ಹೆಚ್ಚಿಸುವಂತೆ ಒತ್ತಾಯ

0
18

ಹಾವೇರಿ:

            ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಡ ಮಹಿಳೆಯರ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರು ರಾಜ್ಯ ಸರಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
             ಬುಧವಾರ ಜಿಲ್ಲೆಯ ಮಾಧರಿ ಶಾಲೆಗಳ ವಿಕ್ಷಣೆಗೆ ಧಿಡಿರ್ ಭೇಟಿ ನೀಡಿದ ವೇಳೆ, ಸಚಿವರನ್ನು ಭೇಟಿ ಮಾಡಿದ ಸಂಘಟಯ ಮುಖಂಡರು ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನದಂತೆ ಗೌರವ ಧನ ನೀಡುವಂತೆ ಒತ್ತಾಯಿಸಿದರು.
ಮನವಿಯಲ್ಲಿ ಈಗಾಗಲೇ ಕೇಂದ್ರ ಸರಕಾರ ತನ್ನ ಪಾಲಿನ ಗೌರವಧನ ಹಣವನ್ನು ಕಡಿತ ಮಾಡಿದೆ. ಕಳೆದ ಮಂಗಳವಾರ ಮಾನ್ಯ ಪ್ರಧಾನಮಂತ್ರಿಗಳು ಬರಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ, ಶಿಕ್ಷಣ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಕಾರಣಿಕರ್ತರಾಗಿರುವ ಬಸಿಯೂಟ ತಯಾರಕರನ್ನು ಕಡೆಗಣಿಸಲಾಗಿದೆ. ಆದ್ದರಿಂದ ರಾಜ್ಯ ಸರಕಾರ ಬಿಸಿಯೂಟ ತಯಾರಕರ ಗೌರವಧನ ಹೆಚ್ಚಳ ಮಾಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
              ರಾಜ್ಯದಲ್ಲಿ ಬಿಸಿಯೂಟ ಯೋಜನೆ ಜಾರಿಗೆ ಬಂದು 12 ವರ್ಷಗಳು ಕಳೆದಿವೆ. 65 ಲಕ್ಷ ಕ್ಕೂ ಫಲಾನುಭವಿಗಳು ಶಾಲಾ ಮಕ್ಕಳ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಮಕ್ಕಳ ಹಾಜಾರಾತಿ, ಗುಣಮಟ್ಟ ಶಿಕ್ಷಣ ದೊರೆಯುತ್ತಿದೆ. ಆದರೆ, ಯೋಜನೆ ಯಶಸ್ಸಿಗಾಗಿ ದುಡಿಯುತ್ತಿರುವ 1.08ಲಕ್ಷ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಬದುಕು ಮಾತ್ರ ಸುದಾರಿಸಿಲ್ಲ. ಇದರಲ್ಲಿ ಜಿಲ್ಲೆಯಲ್ಲಿ 3506 ಜನ ಬಡ ಮಹಿಳೆಯರು ಆರಂಭದಲ್ಲಿ ಕೇವಲ 300,400,450 ರೂ ಸಂಭಾವನೆ ಪಡೆಯುತ್ತಾ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸಧ್ಯ ಮುಖ್ಯ ಅಡುಗೆಯವರಿಗೆ 1600 ರೂ.ಗಳ ಉಳಿದ ಅಡುಗೆಯವರಿಗೆ 1500 ರೂ ಸಂಭಾವನೆ ಪಡೆದುಕೊಳ್ಳತ್ತಿರುವ ಬಿಸಿಯೂಟ ತಯಾಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
             ಅಲ್ಲದೇ, ದಶಕಗಳಿಂದ ಕಡಿಮೆ ಸಂಭಳದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಅಡುಗೆಯವರಿಗೆ ಮುಖ್ಯವಾಗಿ ಕೆಲಸ ಭದ್ರತೆ ಇಲ್ಲ. ಪಿಂಚಣಿ, ಇ.ಎಸ್.ಐ.ಭವಿಷ್ಯ ನಿ, ಖಾಯಿಲೆಯಿಂದ ಆಸ್ಪತ್ರೆಯಲ್ಲಿದ್ದರೆ ಉಚಿತ ಚಿಕಿತ್ಸೆ ಮತ್ತು ಸಂಭಳ ಸಹಿತ ರಜವೂ ಇಲ್ಲ. ಆದ್ದರಿಂದ ಸಂವಿಧಾನಾತ್ಮಕವಾಗಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಬಿಸಿಯೂಟ ಒದಗಿಸುವ ಜವಾಬ್ದಾರಿಯನ್ನು ಇಸ್ಕಾನ್, ಅಧ್ಯಮ ಚೇತನ ಟ್ರಸ್ಟ್ ಗುತ್ತಿಗೆ ಕೊಡಬಾರೆದಂದು ಸರ್ಕಾರ ನಿಷೇದಿಸಿರುವುದನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು. ಇದರ ಜೊತೆಗೆ ಕಡಿಮೆ ಗೌರವಧನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರಿಗೆ ಮಾಸಿಕ ಕನಿಷ್ಟ ವೇತನ, ಪಿಂಚಣಿ, ಇ.ಎಸ್.ಐ. ಪಿ.ಎಫ್, ಕೆಲಸದ ಭದ್ರತೆ, ಸಂಭಳ ಸಹಿತ ರಜೆ ಘೋಷಣೆ ಮಾಡಬೇಕು ಒತ್ತಾಯಿಸಿದರ

LEAVE A REPLY

Please enter your comment!
Please enter your name here