ಬೃಂದಾವನ ಉದ್ಯಾನ ಅಭಿವೃದ್ಧಿಪಡಿಸಲು ಯೋಜನೆ

0
30
 ಬೆಂಗಳೂರು:

      ಅಮೆರಿಕದ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಮಂಡ್ಯ ಜಿಲ್ಲೆ ಕೃಷ್ಣ ರಾಜ ಸಾಗರ ಜಲಾಶಯ ಸಮೀಪದ ಪ್ರಸಿದ್ಧ ಬೃಂದಾವನ ಉದ್ಯಾನ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜನೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ. 
     ಅವರು, ಜಲಾಶಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಜೆಟ್‍ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸದ್ದು, ಇದಕ್ಕಾಗಿ ಆರಂಭಿಕ ನಿಧಿಯಾಗಿ 5 ಕೋಟಿ ರೂಪಾಯಿ ಒದಗಿಸಿದ್ದಾರೆ ಎಂದು ತಿಳಿಸಿದ ಸಚಿವರು ಉದ್ಯಾನವನು ಡಿಸ್ನಿ ಲ್ಯಾಂಡ್ ಆಗಿ ಪರಿವರ್ತಿಸುವ ನೀಲ ನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 
      ಕೆಆರ್‍ಎಸ್‍ನಲ್ಲಿ ಸದ್ಯ 185 ಎಕರೆ ಭೂಮಿ ಲಭ್ಯ ವಿದ್ದು, ಅಂದಾಜಿನಂತೆ 500 ಎಕರೆ ಭೂಮಿ ಲಭ್ಯವಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ಭೂಮಿ ಒತ್ತುವರಿಯಾಗಿದೆ, ಈ ಹಿನ್ನೆಲೆಯಲ್ಲಿ ಭೂಮಿಯ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. 
      ಉದ್ಯಾನವನದ ಮೂಲ ಸ್ವರೂಪವನ್ನು ಉಳಿಸಿಕೊಂಡೇ ಅದರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಾ.ರಾ.ಮಹೇಶ್. ದಸರಾ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಕೆಆರ್‍ಎಸ್‍ನಲ್ಲಿ ಕೆಲ ಆಕರ್ಷಣೆಗಳನ್ನು ಸ್ಥಾಪಿಸುವಂತೆ ಸಹ ತಿಳಿಸಿದರು. 
      ಕೆಆರ್‍ಎಸ್‍ಗೆ ಪ್ರತಿನಿತ್ಯ ಸರಾಸರಿ 10 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ದಸರಾ ಹಾಗೂ ಪ್ರವಾಸ ಋತುಮಾನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವುದು. ಸೌಂದರ್ಯೀಕರಣ ಯೋಜನೆ ಪೂರ್ಣಗೊಂಡಲ್ಲಿ ಬೃಂದಾವನ ಉದ್ಯಾನವನ ಪ್ರತಿ ನಿತ್ಯ 30 ರಿಂದ 50 ಸಾವಿರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ. 

 

LEAVE A REPLY

Please enter your comment!
Please enter your name here