ಬೆಂಕಿ ಅವಘಡ: ನಾಲ್ಕು ಲಕ್ಷ ರೂ. ನಷ್ಟ

0
19

 ದಾವಣಗೆರೆ:

      ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಅಗರಬತ್ತಿ ಉತ್ಪಾದನಾ ಘಟಕವೊಂದರ ಸಾಮಗ್ರಿಗಳು, ಯಂತ್ರೋಪಕರಣಗಳು ಸುಟ್ಟು ಕರಕಲಾಗಿರುವ ಪರಿಣಾಮ ಸುಮಾರು 4 ಲಕ್ಷ ರೂಪಾಯಿಗೂ ಹೆಚ್ಚಿನ ನಷ್ಟ ಆಗಿರುವ ಘಟನೆ ನಗರದ ಹೊರವಲಯದ ಜಿಎಂಐಟಿ ಕಾಲೇಜು ಬಳಿಯಲ್ಲಿ ಕಳೆದ ತಡ ರಾತ್ರಿ ನಡೆದಿದೆ.

      ಜಿಎಂಐಟಿ ಕಾಲೇಜು ಬಳಿಯಲ್ಲಿ ಮಂಜುನಾಥ್ ಎಂಬುವರಿಗೆ ಸೇರಿರುವ ಬಿ.ಕೆ. ಇಂಡಸ್ಟ್ರಿಯಲ್ಲಿನ ಅಗರಬತ್ತಿ ಉತ್ಪಾದನಾ ಘಟಕದಲ್ಲಿ ಮಂಗಳವಾರ ತಡ ರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಇಂಡಸ್ಟ್ರಿಯವೊಳಗಿದ್ದ ಅಗಬತ್ತಿ ತಯಾರಿಗೆ ಬಳಸುತ್ತಿದ್ದ ಕಚ್ಚಾವಸ್ತುಗಳು, ಯಂತ್ರೋಪಕರಣಗಳು ಹಾಗೂ ಸಂಪೂರ್ಣಸುಟ್ಟು ಭಸ್ಮವಾಗಿದ್ದು, ಸುಮಾರು ನಾಲ್ಕು ಲಕ್ಷ ರೂ. ನಷ್ಟವಾಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

      ಬೆಂಕಿ ಅನಾಹುತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ, ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಬೆಂಕಿ ನಂದಿಸಲು ಹರಸಹಾಸ ಪಟ್ಟು, ಕೊನೆಗೂ ಬೆಂಕಿಯ ಕೆನ್ನಾಲಿಗೆಯನ್ನು ತಹಬಂದಿಗೆ ತಂದು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಬೆಂಕಿ ನಂದಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಗ್ನಿ ಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮ ಮಾತನಾಡಿ, ಬಿ.ಕೆ. ಇಂಡಸ್ಟ್ರಿಯ ಸಮೀಪದಲ್ಲಿದ್ದ ಹೋಟೆಲ್‍ನವರು ತಮ್ಗೆ ಫೋನು ಮಾಡಿ, ಬೆಂಕಿ ಅನಾಹುತ ಸಂಭವಿಸಿರುವುದರ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಆಗಮಿಸಿ, ಇಂಡಸ್ಟ್ರಿಯ ಬೀಗ ಮುರಿದು ಬೆಂಕಿ ನಂದಿಸಿದ್ದೇವೆ. ಇಂಡಸ್ಟ್ರಿಯ ಒಳಗಿದ್ದ ಅಗರಬತ್ತಿ ಉತ್ಪಾದನಾ ಘಟಕದಲ್ಲಿನ ಕಚ್ಚಾ ಸಾಮಗ್ರಿ, ಅಗರಬತ್ತಿ, ಯಂತ್ರೋಪಕರ ಹಾಗೂ ಕಟ್ಟಡ ಶೇ.50 ರಷ್ಟು ಹಾನಿಗೊಳಗಾಗಿದ್ದು, ಸುಮಾರು 4 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here