ಬೆಂಗಳೂರು : ಕತ್ತು ಸೀಳಿ ಕೊಲೆ

0
22

ಬೆಂಗಳೂರು,

ತೆಂಗಿನ ತೋಟದ ಶೆಡ್‍ನಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯನ್ನು ಕತ್ತು ಸೀಳಿ ಕೊಲೆ ಮಾಡಿ, ಶೆಡ್‍ಗೆ ಬೀಗ ಹಾಕಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಕಾಲುವೆಯ ಬಳಿ ನಡೆದಿದೆ
ಕೆಂಗೇರಿ ರಾಜಕಾಲುವೆಯ ಐರಾವತ ಹೊಟೇಲ್ ಬಳಿಯ ತೆಂಗಿನ ತೋಟದಲ್ಲಿ ಹಸು ಸಾಕುತ್ತಿದ್ದ ಶೆಡ್‍ನಲ್ಲಿದ್ದ ಗೌರಮ್ಮ(65) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದು ಜಮೀನಿನ ವಿವಾದದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
16 ವರ್ಷಗಳ ಹಿಂದೆ ಪತಿ ತೀರಿಹೋಗಿದ್ದು ಮಕ್ಕಳಿಲ್ಲದ ಗೌರಮ್ಮ ಅವರು ವ್ಯಕ್ತಿಯೊಬ್ಬರ ತೆಂಗಿನ ತೋಟದಲ್ಲಿ ಶೆಡ್‍ನಲ್ಲಿ ಹಸುಗಳನ್ನು ನೋಡಿಕೊಂಡು ವಾಸವಿದ್ದರು ನಿನ್ನೆ ರಾತ್ರಿ ಶೆಡ್‍ಗೆ ನುಗ್ಗಿರುವ ದುಷ್ಕರ್ಮಿಗಳು ಗೌರಮ್ಮ ಅವರನ್ನು ಕೊಲೆ ಮಾಡಿ ಶೆಡ್‍ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.

ಜಮೀನು ವಿವಾದದ ಹಿನ್ನಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರಶೋಧ ನಡೆಸಿದ್ದಾರೆ.

LEAVE A REPLY

Please enter your comment!
Please enter your name here