ಬೇಲಿಗಳಿಲ್ಲದ ಬದುಕು

0
42

ಬೇಲಿಗಳಿಲ್ಲದ ಬದುಕು

 
ಹುಟ್ಟಿದಾಗ ನನಗೇನು ತಿಳಿಯಲಿಲ್ಲ
ಬರಬರುತ್ತ ತಿಳಿದೆ ನನಗಿರುವ ವ್ಯಾಪ್ತಿ
ಅದು ನನ್ನದು ಇದು ನನ್ನದೆಂಬ
ಅವನಮ್ಮವ ಇವನಮ್ಮವನೆಂಬ ಭೇದವನು
ಆಗಾಗ ನನ್ನ ಮನಸ್ಸು ಕೇಳುತ್ತಿತ್ತು
ಹಾರುವ ಹಕ್ಕಿಗೆ ಗಡಿಗಳ ಜಗಳವಿಲ್ಲ
ದೇಶ ವಿದೇಶಗಳನ್ನು ವೀಸಾವಿಲ್ಲದೆ ಸುತ್ತಿವೆ

ನಮ್ಮದು ಎಂದು ಬೇಲಿ ಹಾಕಿದ ಗಡಿಗಳು
ಅದೇಷ್ಟೋ ಜನರನ್ನು ಹಿಂಸಿಸಿವೆ ಕೊಂದಿವೆ
ಅದೇಷ್ಪೋ ಕುಡಿಗಳು ಅನ್ನನೀರಿಲ್ಲದೆ
ಬದುಕಲು ನಿಂತು ಬೇಡುತ್ತಿವೆ ಬೇಲಿಯಾಚೆ

ಜಾತಿಮತಗಳಿಲ್ಲದೆ ಮಾನವರೊಂದೆ ಎನ್ನೋಣ
ಗಡಿಗಳಿಲ್ಲವ ಮೀರಿದ ವಿಶ್ವಮಾನವತೆ ಸಾರಿ
ಯುದ್ದಗಳಿಲ್ಲದೆ ಬೇಲಿಗಳಿಲ್ಲದೆ ಕರಿಯ ಬಿಳಿಯರೆನ್ನದೆ ಜೇನಿನ ಜೀವನ ನಡೆಸೋಣ
ಅಡೆತಡೆಇಲ್ಲದೆ ಪ್ರೀತಿಯ ಸಿಹಿಯ ಸವಿಯೋಣ

ರಘು ಬಿ ಆರ್.
ಬಾಗೂರುಗೇಟ್ˌ ಗುಬ್ಬಿ.

LEAVE A REPLY

Please enter your comment!
Please enter your name here