ಬೈಕ್‍ ವ್ಹೀಲಿಂಗ್ ಮಾಡಿರಿ ಜೋಕೆ !!!

0
22

ಬೆಂಗಳೂರು,

ಬೈಕ್‍ವ್ಹೀಲಿಂಗ್ ಮಾಡಿ ಫೇಸ್‍ಬುಕ್  ಪೊಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕನ ಮೇಲೆ ಪ್ರಕರಣ ದಾಖಲಿಸಿರುವ ಆರ್.ಟಿ ನಗರ ಸಂಚಾರ ಪೊಲೀಸರು ಬೈಕ್‍ನ್ನು ವಶಕ್ಕೆ ಪಡೆದಿದ್ದಾರೆ
ಬಾಲಕ ಬೈಕ್ ವ್ಹೀಲಿಂಗ್ ಮಾಡಿ ಫೇಸ್ ಬುಕ್‍ನಲ್ಲಿ ಪೊಸ್ಟ್ ಹಾಕಿದ್ದನು.ಫೇಸ್ ಬುಕ್ ಪೊಸ್ಟ್ ಆಧರಿಸಿ ಆರ್.ಟಿ ನಗರ ಸಂಚಾರ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದು ಪೋಷಕರಿಗೆ ನೋಟೀಸ್ ನೀಡಿದ್ದಾರೆ.
ಆರ್.ಟಿ ನಗರದ ಡಾಲರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಬಳಿ ಬಾಲಕ ವ್ಹೀಲಿಂಗ್ ಮಾಡಿದ್ದು, ನಂತರ ಪೊಟೋವನ್ನು ಫೇಸ್ ಬುಕ್ ನಲ್ಲಿ  ಅಪ್ಲೊಡ್   ಮಾಡಿಕೊಂಡಿದ್ದನು.
ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಯಮಹ ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಪೊಷಕರ ಮೇಲೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

LEAVE A REPLY

Please enter your comment!
Please enter your name here