ಬೈಕ್ ಗೆ ಕಾರ್ ಡಿಕ್ಕಿ

0
61

ಬೆಂಗಳೂರು:

                ವೇಗವಾಗಿ ಹೋಗುತ್ತಿದ್ದ ಆಡಿ ಕಾರು, ಬೈಕ್‍ಗೆ ಅಪ್ಪಳಿಸಿ ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಉದ್ಯಮಿಗಳು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ದುರ್ಘಟನೆ ನಗರದ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಗುರುವಾರ ರಾತ್ರಿ ನಡೆದಿದೆ.
                ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದಿಂದ ವಿಶೇಷ ಅಭಿಯೋಜಕರಾಗಿ ನೇಮಕಗೊಂಡಿದ್ದ ವಕೀಲ ಭವಾನಿ ಸಿಂಗ್ ಪುತ್ರ ಅಮರ್ ನಾಥ್ ಸಿಂಗ್ (32) ಹಾಗೂ ಸುಬೇದಾರ್ ಬೇಜ್ (30)ಎಂದ ಮೃತಪಟ್ಟ ಉದ್ಯಮಿಗಳನ್ನು ಗುರುತಿಸಲಾಗಿದೆ,ಇವರಿಬ್ಬರೂ ಕಾಡುಗೋಡಿ ನಿವಾಸಿಗಳಾಗಿದ್ದಾರೆ.
                ಗಾಯಗೊಂಡಿರುವ ಯಶವಂತ್ ಸಿಂಗ್ (42) ಹಾಗೂ ಮಂಜುನಾಥ್ ಸಿಂಗ್ (28)ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here