ಬೈಕ್ ಗೆ ಲಾರಿ ಡಿಕ್ಕಿ: ಇಬ್ಬರ ಸಾವು

0
41

 ತುಮಕೂರು:

      ತುಮಕೂರು ತಾಲ್ಲೂಕು ಬೆಳಧರ ಸಮೀಪ ಮಧುಗಿರಿ-ತುಮಕೂರು ರಸ್ತೆಯಲ್ಲಿ ಆಗಸ್ಟ್ 7 ರಂದು ರಾತ್ರಿ ಸುಮಾರು 7-50 ರಲ್ಲಿ ತುಮಕೂರು ಕಡೆಗೆ ಬರುತ್ತಿದ್ದ ಬೈಕ್ಗೆ ತುಮಕೂರು ಕಡೆಯಿಂದ ಬಂದ ಲಾರಿ (ಕೆಎ-42-8188) ಡಿಕ್ಕಿ ಹೊಡೆದ ಕಾರಣ, ಸದರಿ ಬೈಕ್ನಲ್ಲಿದ್ದ ಮಂಜುನಾಥ ಮತ್ತು ಲಗಮಣ್ಣಾ ಲಕ್ಷ್ಮಣ ಭಂಗಿ ಎಂಬುವವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಇದೇ ಬೈಕ್ನಲ್ಲಿದ್ದ ಸುರೇಶ್ ಎಂಬುವವರು ಸಹ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

      ಮೃತ ಮಂಜುನಾಥ ತುಮಕೂರು ಹೊರವಲಯದ ಬೋವಿ ಪಾಳ್ಯದಲ್ಲಿ ವಾಸವಿದ್ದು, ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಆಗಸ್ಟ್ 7 ರಂದು ಬೆಳಗ್ಗೆ ಬೈಕ್ನಲ್ಲಿ ಇನ್ನಿಬ್ಬರು ಸ್ನೇಹಿತರೊಡನೆ ಮಧುಗಿರಿಗೆ ತೆರಳಿ, ಹಿಂತಿರುಗುತ್ತಿದ್ದಾಗ ಈ ದುರಂತ ಸಂ‘ವಿಸಿದೆ. ಈ ಬಗ್ಗೆ ಆಗಸ್ಟ್ 8 ರಂದು ಬೆಳಗ್ಗೆ ದೂರು ಸಲ್ಲಿಸಿದ್ದು, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279,337, 304 (ಎ) ಪ್ರಕಾರ ಮೊಕದ್ದಮೆ ದಾಖಲಾಗಿದೆ.

LEAVE A REPLY

Please enter your comment!
Please enter your name here