ಬ್ರಹ್ಮ ಶ್ರೀ ನಾರಾಯಣ ಗುರು 164ನೇ ಜಯಂತಿ ಕಾರ್ಯಕ್ರಮ

0
29

ಹೊಳಲ್ಕೆರೆ:

              ಹಿಂದುಳಿದ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅವರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರು ಭಾರತೀಯ ಸಮಾಜ ಕಂಡ ಓರ್ವ ಶ್ರೇಷ್ಠ ಸಂತ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

               ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣ ಗುರು 164ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

               ಈಡಿಗರ ಸಮುದಾಯದಲ್ಲಿ ಹುಟ್ಟಿದ ಮಹಾನ್ ಶ್ರೇಷ್ಟ ನಟ ಡಾ.ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರು ಸಾಲದು. ಇಂತಹ ಶ್ರೇಷ್ಟ ನಟ ಮತ್ತೊಬ್ಬ ಹುಟ್ಟುವುದಿಲ್ಲ. ನಟ ಸಾರ್ವಭೌಮ ಡಾ.ರಾಜಕುಮಾರ್ ಪಟ್ಟಣವನ್ನು ಅಭಿವೃಧ್ದಿಪಡಿಸಿ ವೃತ್ತದಲ್ಲಿ ಡಾ.ರಾಜಕುಮಾರ್ ಎಚಿದು ಹೆಸರು ಇಟ್ಟು 20 ಸಾವಿರ ಜನ ಜ್ಞಾಪಕ ಮಾಡುವ ಹಾಗೆ ಮಾಡುತ್ತೇನೆ. ಈಡೀಗರ ಸಮುದಾಯಕ್ಕೆ ಜಾಗ ಕೊಟ್ಟು ಕಟ್ಟಡ ನಿರ್ಮಾಣ ಮಾಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

                ಈಡಿಗರ ಸಮುದಾಯದಲ್ಲಿ ತುಂಬಾ ನೊಂದವರು, ಕಷ್ಟದ ನೊವಿನಲ್ಲಿರುವವರ ಸಹಾಯ ಮಾಡಲು ನಾನು ಸದಾ ಸಿದ್ದ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಕೊಡಿಸುವ ಜವಾಬ್ದಾರಿ ನನ್ನ ಜವಾಬ್ದಾರಿ ಎಚಿದು ಭರವಸೆ ನೀಡಿದರು.ಈಡೀಗರ ಸಮುದಾಯದ ಪೋಷಕರು ಎಷ್ಟೇ ಕಷ್ಟ ಬರಲಿ ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸಿ ಎಂದು ಕಿವಿ ಮಾತು ಹೇಳಿದರು.
ಶ್ರೀ ರೇಣುಕಾ ನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

               ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ತಾಲ್ಲುಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಹೆಚ್.ವಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಹರೇನಹಳ್ಳಿ ತಿಪ್ಪಣ್ಣ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಓ.ಮಮತೇಶ್, ಗ್ರಾ.ಪಂ. ಅಧ್ಯಕ್ಷ ಡಿ.ಸಿ.ಮೋಹನ್, ರಾಮಗಿರಿ ರಾಮಣ್ಣ, ಆರ್ಯ ಈಡಿಗರ ಯುವಕ ಸಂಘ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಲೋಹಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here