ಬ್ರಿಟಿಷರ ಕಾಲದ ನಾಣ್ಯಗಳು ಪತ್ತೆ

0
64

ಹೊನ್ನಾಳಿ:

 

      ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪ್ರಚಲಿತದಲ್ಲಿದ್ದ 15 ಬೆಳ್ಳಿ ನಾಣ್ಯಗಳನ್ನು ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿ ಗುರು ಬಾಗಿ ಶುಕ್ರವಾರ ಪರಿಶೀಲನೆ ನಡೆಸಿದರು.

      ಪ್ರಸಕ್ತ ಸಾಲಿನ ಮಾರ್ಚ್ 26 ರಂದು ನ್ಯಾಮತಿ ತಾಲೂಕಿನ ಹಳೇ ಜೋಗ ಗ್ರಾಮದ ವಿರೂಪಾಕ್ಷಪ್ಪ ಎಂಬುವವರ ವಾಸದ ಮನೆಯ ಗೋಡೆ ಸಮೀಪ ಈ ನಾಣ್ಯಗಳು ಲಭಿಸಿದ್ದವು. ಅವುಗಳನ್ನು ಮನೆಯ ಮುಖ್ಯಸ್ಥರು ತಾಲೂಕು ಆಡಳಿತಕ್ಕೆ ಒಪ್ಪಿಸಿದ್ದರು.

      ನಂತರ ತಾಲೂಕು ಆಡಳಿತ ಆ ಬೆಳ್ಳಿ ನಾಣ್ಯಗಳ ಬಗ್ಗೆ ಅಧ್ಯಯನ ನಡೆಸುವಂತೆ ಬೆಂಗಳೂರಿನ ಪುರಾತತ್ವ ಇಲಾಖೆಗೆ ಪತ್ರ ಬರೆದು ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿ ಗುರು ಬಾಗಿ ಶುಕ್ರವಾರ ಆ ನಾಣ್ಯಗಳನ್ನು ಪರಿಶೀಲಿಸಿ, ಅವುಗಳನ್ನು ದಾಖಲಿಸಿಕೊಂಡು ತೆರಳಿದರು.1890ರಿಂದ 1904ರವರೆಗಿನ ಆಡಳಿತಾವಧಿಯ ವಿಕ್ಟೋರಿಯಾ ರಾಣಿಯ ಚಿತ್ರವಿರುವ ಬೆಳ್ಳಿ ನಾಣ್ಯಗಳು ದೊರೆತಿವೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿ ಗುರು ಬಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ನಾಗವೇಣಿ, ಶಿರಸ್ತೇದಾರ್ ಕೆಂಚಮ್ಮ, ಕಸಬಾ ರಾಜಸ್ವ ನಿರೀಕ್ಷಕ ಜಯರಾಮ್‍ನಾಯ್ಕ್ ಇತರರು ಇದ್ದರು.

LEAVE A REPLY

Please enter your comment!
Please enter your name here