ಭಾರತದ 43 ಸಾವಿರ ಹಳ್ಳಿಗಳಲ್ಲಿ ಮೊಬೈಲ್ ಸೇವೆ ಇಲ್ಲ: ಟೆಲೆಕಾಂ ಸಚಿವ

0
32

ನವದೆಹಲಿ:

Related image

      ಭಾರತದಲ್ಲಿ ಇನ್ನೂ 43 ಸಾವಿರ ಹಳ್ಳಿಗಳಲ್ಲಿ ಮೊಬೈಲ್ ಸೇವೆ ಲಭ್ಯವಿಲ್ಲ ಎಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

      ಸಮೀಕ್ಷೆ ಪ್ರಕಾರ, ಜುಲೈ 27, 2018ರ ವರೆಗೆ ದೇಶದ 5,97,618 ಹಳ್ಳಿಗಳ ಪೈಕಿ 43,088 ಹಳ್ಳಿಗಳಲ್ಲಿ ಇನ್ನೂ ಮೊಬೈಲ್ ಸೇವೆ ಇಲ್ಲ. ಈ ಪೈಕಿ ಒಡಿಶಾ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 9,940 ಹಳ್ಳಿಗಳಲ್ಲಿ ಮೊಬೈಲ್ ಸೇನೆ ಇಲ್ಲ ಎಂದು ಸಿನ್ಹಾ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

      ಇನ್ನು ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಒಟ್ಟು 6,117 ಗ್ರಾಮಗಳಲ್ಲಿ ಹಾಗೂ ಮೂರನೇ ಸ್ಥಾನದಲ್ಲಿರುವ ಮಧ್ಯ ಪ್ರದೇಶದಲ್ಲಿ 5,558 ಗ್ರಾಮಗಳಲ್ಲಿ ಮೊಬೈಲ್ ಸೇವೆ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಛಂಡಿಗಢ, ದಾದ್ರ ಮತ್ತು ನಗರ್ ಹವೆಲಿ, ದಾಮನ್ ಮತ್ತು ದಿಯು, ದೆಹಲಿ, ಕೇರಳ ಮತ್ತು ಪುದುಚೇರಿಯ ಎಲ್ಲಾ ಹಳ್ಳಿಗಳಲ್ಲಿ ಮೊಬೈಲ್ ಸೇವೆ ಲಭ್ಯವಿದೆ.

LEAVE A REPLY

Please enter your comment!
Please enter your name here