ಭಾರತಾಂಬೆಯ ರಕ್ಷಣೆಗೆ ಪ್ರಾಣಾರ್ಪಣೆ ಮಾಡುವುದೇ ಪುಣ್ಯ

0
47

ಹರಪನಹಳ್ಳಿ:

      ಹಸಿವಿನ ನೋವು ಮೃತ್ಯಕ್ಕಿಂತ ಭಯಂಕರವಾದದ್ದು ಅದನ್ನೂ ಪೂರೈಸಲು ಹಾಗೂ ಕುಟುಂಬದ ಅರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೆಚ್ಚೆದೆಯ ಯುವಕರು ಸೈನ್ಯಕ್ಕೆ ಸೇರಿ ಗಡಿ ರಕ್ಷಣೆಯಲ್ಲಿ ಪ್ರಾಣ ಭಯಬಿಟ್ಟು ಶತ್ರಗಳನ್ನು ಸದೆಬಡೆಯಲು ಸಿದ್ದರಾಗುತ್ತಿದ್ದಾರೆಂದು ಪ್ರೋ.ಎಸ್.ತಿಮ್ಮಣ್ಣ ಶ್ಲಾಘಿಸಿದರು.

      ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸೈನಿಕ ಕಾರಗಿಲ್ ಯುದ್ಧದಲ್ಲಿ ಹುತಾತ್ಮರಾದ ಕೆ.ಹನುಮಂತಪ್ಪ ಅವರ ನೆನಪಿಗಾಗಿ ನರೇಂದ್ರ ಮೋದಿಯವರ ಆದೇಶದಂತೆ ವೀರಯೋಧರ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತಾಂಬೆಯ ರಕ್ಷಣೆಗೆ ಪ್ರಾಣಾರ್ಪಣೆ ಮಾಡಲು ಹೆತ್ತ ತಾಯಿ ತನ್ನ ಮಗನನ್ನು ತ್ಯಾಗ ಮಾಡುವುದು ಅವಿಸ್ಮರಣೀಯ. ಅದರೀಗ ಜನಸಂಖ್ಯೆ ನಿಯಂತ್ರಣದಿಂದ ಇರುವ ಒಬ್ಬ ಮಗನನ್ನು ಸೈನ್ಯಕೆ ಸೇರಿಸಲು ಎಷ್ಟು ಮಾತೃ ಹೃದಯಗಳು ಸಿದ್ದವಾಗಲಿವೆ. ಯೋಧರಿಗೆ ಸಾವಿಲ್ಲ ಅವರು ಹುತಾತ್ಮರಾಗುತ್ತಾರೆ. ದ್ವೇಷ, ಅಸೂಯೆ, ಸುಳ್ಳು ಅಹಂಕಾರಗಳನ್ನು ದೂರ ಮಾಡಿ ಪ್ರಮಾಣಿಕ ಸತ್ಯಕ್ಕೆ ಬೆಲೆ ನೀಡಿ ಜೀವನ ಸಾಗಿಸಿದರೆ. ಯುದ್ಧ ಭೂಮಿಯ ಅವಶ್ಯಕತೆಯಿರುವುದಿಲ್ಲ ಎಂದರು.

      ಮದ್ರಾಸ್ ರೆಜಿಮೆಂಟ್ ಬೆಳಗಾವಿ ವಿಭಾಗದ ಸುಬೇದಾರ ಮಂಜುನಾಥ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಮೋದಿಯವರ ಆದೇಶದಂತೆ ಹುತಾತ್ಮ ಯೋಧರ ಗ್ರಾಮಗಳಿಗೆ ಸೈನಿಕಾಧಿಕಾರಿಗಳು ಭೇಟಿ ನೀಡಿ ಅವರ ಹೆಸರಿನಲ್ಲಿ ಆ ಗ್ರಾಮದ ಶಾಲೆಗೆ ಕೊಳವೆ ಬಾವಿ ಅಥವಾ ಒಂದು ಕೊಠಡಿ ನಿರ್ಮಾಣಕ್ಕೆ 8 ಲಕ್ಷ ಧನ ಸಹಾಯ ನೀಡಲಿದೆ. ಕೆ.ಹನುಮಂತಪ್ಪ ಯೋದರ ಕಂಚಿನ ಪುತಳಿಯನ್ನು ಸ್ಥಾಪಿಸಲಿದೆ. ಸ್ಮರಾಕಭವನ ನಿರ್ಮಾಣಕ್ಕೆ 2.80 ಲಕ್ಷ ಹಣವನ್ನು ನಿಡಿದ್ದಾರೆ. 2019ರ ಜ.26ರಂದು ಕಂಚಿನ ಪುತಳಿ ಆನಾವರಣ ಮಾಡಬೇಕಾಗಿದೆ ಎಂದರು.

      ಅಪರ ಸರ್ಕಾರಿ ವಕೀಲರಾದ ಮಂಜುನಾಥ ಕಣಿವಿಹಳ್ಳಿ ಮಾತನಾಡಿ, ಚಳಿ ಗಾಳಿಯನ್ನು ಲೆಕ್ಕಿಸದೇ ಹಗಲು ರಾತ್ರಿ ಸೇವೆ ಮಾಡುವ ಸೈನಿಕರು ಪ್ರತಿ ಊರಿನಲ್ಲಿಯೂ ಒಬ್ಬರಂತೆ ಸಿದ್ದರಾಗಬೇಕಿದೆ. ದೇಶಕ್ಕೆ ಪ್ರಾಣ ನೀಡಿದವರನ್ನು ಸ್ಮರೀಸುವಂತಹ ಕಾರ್ಯ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವುದು ಶ್ಲಾಘನೀಯ, ದೇಶಕ್ಕೆ ರೈತ ಬೆನ್ನಲಬು ಆದರೆ ಯೋಧ ದೇಶದ ವನ್ನು ರಕ್ಷಿಸುವ ಹೊಣೆಗಾರ ಅವನ ಮೇಲೇರುತ್ತದೆ. ‘ಜೈ ಜವಾನ ಜೈ ಕಿಸಾನ್’ ಈ ಸಂದರ್ಭದಲ್ಲಿ ಮೃತ ಯೋಧರ ತಾಯಿ ಗಿರಿಜಮ್ಮ, ಮಾಜಿ ಯೋಧರಾದ ಪೂಜಾರ್ ರಾಜು ಬೇತೋರು ಬಸವರಾಜಪ್ಪ ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ತೆಲಿಗಿ ಶಾಂತಮ್ಮ ತಾ.ಪಂ. ಸದಸ್ಯ ನಾಗರಾಜಪ್ಪ, ತಾಲ್ಲೂಕು ಬಾರಿಕರ ಸಮಾಜದ ಅಧ್ಯಕ್ಷ ಕೋಳಿ ಮಂಜುನಾಥ, ಎನ್.ಎಂ. ಬಸವರಾಜಪ್ಪ, ಕೊಟ್ರಗೌಡ್ ಭೀಮಪ್ಪ ಓಂಕಾರಪ್ಪ ಬಸವರಾಜಪ್ಪ ಕಮಲಿ ಬಾಯಿ ಪುಷ್ಟಾಬಸವರಾಜ ಕೆ ಗಣೇಶ್ ಬಡಗಿ ದಾದಾಪೀರ್ ಮೋರಗೇರಿ ಹೇಮಣ್ಣ ರವಿ ಯು ಕೊಟ್ರೇಶಪ್ಪ ಪಿಡಿಓ ಸಮುದ್ರಿ ಮಂಜುನಾಥ ಹಾಗೂ ಇತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here