ಭಾರಿ ಮೊತ್ತದ ಬಾಕಿಯಿಂದ ಆಡಳಿತ ನಿರ್ವಹಣೆಗೆ ತೊಡಕು : ತುಮಕೂರು ಪಾಲಿಕೆಗೆ 72 ಕೋಟಿ ತೆರಿಗೆ ಹಣ ಬಾಕಿ

0
46

ತುಮಕೂರು:


      ಆಸ್ತಿ ತೆರಿಗೆ, ನೀರಿನ ತೆರಿಗೆ ಸೇರಿದಂತೆ ವಿವಿಧ ತೆರಿಗೆ/ಶುಲ್ಕಗಳು ಸಾರ್ವಜನಿಕರಿಂದ ಸಕಾಲಕ್ಕೆ ಸಂಗ್ರಹವಾಗದೆ ತುಮಕೂರು ಮಹಾನಗರ ಪಾಲಿಕೆಗೆ ಒಟ್ಟು 72 ಕೋಟಿ 80 ಲಕ್ಷ ರೂ.ಗಳಷ್ಟು ಭಾರಿ ಮೊತ್ತದ ತೆರಿಗೆ ಹಣ ಬಾಕಿ ಉಳಿದಿದೆಯೆಂಬ ಹಾಗೂ ಇದರಿಂದ ತುಮಕೂರು ಮಹಾನಗರ ಪಾಲಿಕೆಯ ದೈನಂದಿನ ಆಡಳಿತ ನಿರ್ವಹಣೆಗೂ ತೊಡಕಾಗುತ್ತಿದೆಯೆಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ.

      ಆಸ್ತಿ ತೆರಿಗೆಯಲ್ಲಿ 3847.99 ಲಕ್ಷ ರೂ., ಜಾಹಿರಾತು ತೆರಿಗೆಯಲ್ಲಿ 65.08 ಲಕ್ಷ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 247.54 ಲಕ್ಷ ರೂ., ನೀರಿನ ಶುಲ್ಕದಿಂದ 2328.58 ಲಕ್ಷ ರೂ., ಒಳಚರಂಡಿ ಶುಲ್ಕದಿಂದ 141.92 ಲಕ್ಷ ರೂ., ಅಂಗಡಿ ಮಳಿಗೆಗಳ ಬಾಡಿಗೆಯಿಂದ 649.14 ಲಕ್ಷ ರೂ. – ಹೀಗೆ ಒಟ್ಟು ಆರು ಮೂಲಗಳಿಂದ 72 ಕೋಟಿ 80 ಲಕ್ಷ 25 ಸಾವಿರ ರೂ.ಗಳು ಮಹಾನಗರ ಪಾಲಿಕೆಗೆ ವಸೂಲಾತಿ ಆಗದೆ ಬಾಕಿ ಉಳಿದಿದೆ. 2018 ರ ಜೂನ್ ಮಾಸಾಂತ್ಯದವರೆಗಿನ ಲೆಕ್ಕಾಚಾರದಂತೆ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ಹಣ ಬಾಕಿ ಉಳಿದಿರುವುದು ಕಂಡುಬಂದಿದೆ.

      ದಿನಾಂಕ 31-03-2018 ರವರೆಗೆ ಆಸ್ತಿ ತೆರಿಗೆ ಬಾಕಿ ಮೊತ್ತ 2866.02 ರಷ್ಟಿತ್ತು. 2018-19 ನೇ ಸಾಲಿನ ಬೇಡಿಕೆ (ಡಿಮಾಂಡ್) ಮೊತ್ತ 2168.00 ಲಕ್ಷ ರೂ. ಸೇರ್ಪಡೆಗೊಂಡು, ಒಟ್ಟು 5034.02 ಲಕ್ಷ ರೂ. ಆಯಿತು. ದಿನಾಂಕ 30-06-2018 ರವರೆಗೆ 1186.03 ಲಕ್ಷ ರೂ. ವಸೂಲಿ ಆಗಿದ್ದು, 3847.99 ಲಕ್ಷ ರೂಗಳು ಬಾಕಿ ಉಳಿದಿದೆ.

      ಇದೇ ರೀತಿ ನೀರಿನ ತೆರಿಗೆಯಲ್ಲೂ ಆಗಿದೆ. ದಿನಾಂಕ 31-03-2018 ರವರೆಗೆ ನೀರಿನ ತೆರಿಗೆ ಬಾಕಿ ಮೊತ್ತ 1674.80 ರಷ್ಟಿತ್ತು. 2018-19 ನೇ ಸಾಲಿನ ಬೇಡಿಕೆ (ಡಿಮಾಂಡ್) ಮೊತ್ತ 1020.08 ಲಕ್ಷ ರೂ. ಸೇರ್ಪಡೆಗೊಂಡು, ಒಟ್ಟು 2694.88 ಲಕ್ಷ ರೂ. ಆಯಿತು. ದಿನಾಂಕ 30-06-2018 ರವರೆಗೆ 366.30 ಲಕ್ಷ ರೂ. ವಸೂಲಿ ಆಗಿದ್ದು, ಇನ್ನು 2328.58 ಲಕ್ಷ ರೂಗಳು ಬಾಕಿ ಉಳಿದಿದೆ.

      ಹೀಗೆ ಆಸ್ತಿ ತೆರಿಗೆ, ಜಾಹಿರಾತು ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ನೀರಿನ ಶುಲ್ಕ, ಒಳಚರಂಡಿ ಶುಲ್ಕ, ಅಂಗಡಿ ಮಳಿಗೆಗಳ ಬಾಡಿಗೆ- ಈ ಆರು ಮೂಲಗಳಿಂದ ದಿನಾಂಕ 31-03-2018 ರವರೆಗೆ ಒಟ್ಟಾರೆ 5282.64 ಲಕ್ಷ ರೂ. ಬಾಕಿ ಇತ್ತು. 2018-19 ನೇ ಸಾಲಿನ ಬೇಡಿಕೆ ಮೊತ್ತ 3603.98 ಸೇರಿ, ಬಾಕಿ ಮೊತ್ತ ಈ ಆರೂ ಮೂಲಗಳಿಂದ ಒಟ್ಟಾರೆ 8886.62 ರಷ್ಟಕ್ಕೆ ಏರಿತು. ದಿನಾಂಕ 30-06-2018 ರವರೆಗೆ 2014.36 ಲಕ್ಷ ರೂ. ತೆರಿಗೆ ವಸೂಲಿ ಆಗಿದ್ದು, ಇನ್ನೂ 7280.25 ಲಕ್ಷ ರೂ. ಬಾಕಿ ಉಳಿದಿದೆ ಎಂದು ಮಹಾನಗರ ಪಾಲಿಕೆಯ ಮೂಲಗಳಿಂದ ತಿಳಿದುಬಂದಿದೆ.

ಆಡಳಿತಕ್ಕೆ ತೊಡಕು

      ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೆರಿಗೆ/ಶುಲ್ಕಗಳು ಬಾಕಿ ಉಳಿದಿರುವುದು ಮಹಾನಗರ ಪಾಲಿಕೆಗೆ ಬಹುದೊಡ್ಡ ತಲೆನೋವು ಉಂಟು ಮಾಡಿದೆ. ಪಾಲಿಕೆಗೆ ಪ್ರತಿ ತಿಂಗಳೂ ದುರಸ್ತಿ, ನಿರ್ವಹಣೆ ಇತ್ಯಾದಿ ಆಡಳಿತಾತ್ಮಕ ಜವಾಬ್ದಾರಿ ನಿರ್ವಹಣೆಗೆ ಕನಿಷ್ಟ 325 ಲಕ್ಷ ರೂ.ಗಳ ಅಗತ್ಯತೆ ಇದೆ. ಆದರೆ ಈಗಿನ ಸಂಕಷ್ಟದಿಂದ ಸ್ವಚ್ಛತೆ, ಕುಡಿಯುವ ನೀರು, ಎಸ್.ಟಿ.ಪಿ. ಮೊದಲಾದ ಕಾರ್ಯಗಳಿಗೂ ಹಣ ಪಾವತಿಸಲು ತುಂಬ ಕಷ್ಟಸಾ‘್ಯವಾಗಿದೆ ಎಂದು ಪಾಲಿಕೆಯೇ ಹೇಳಿಕೊಂಡಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here