ಭೂಮಿ ಕುಸಿತ : ರಸ್ತೆ ಸಂಚಾರ ಸ್ಥಗಿತ

0
32

ಕಾರವಾರ :

 ಬುಧವಾರ ನಸುಕಿನಲ್ಲಿ ಸಿದ್ದಾಪುರ ತಾಲ್ಲೂಕಿನ ಜೋಗಿನಮಠ (ಹೊನ್ನಾವರ-ತುಮಕೂರ ರಾಷ್ಟ್ರೀಯ ಹೆದ್ದಾರಿ 206) ರಸ್ತೆ ಪಕ್ಕದ ಭೂಮಿ ಕುಸಿದು 5-6 ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ.

     

ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಮಣ್ಣು ಮೃದುಗೊಂಡು ಧರೆ ಕುಸಿದಿದೆ‌. ಸುಮಾರು 9 ಮರಗಳು ಹಾಗೂ ಬೃಹತ್ ಬಂಡೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದವು. ಇದರಿಂದಾಗಿ ವಾಹನಗಳೆಲ್ಲವೂ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತವು. 

     

      ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಸಿಬ್ಬಂದಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಶ್ರಮಿಸಿ ರಸ್ತೆಗೆ ಅಡ್ಡಲಾಗಿದ್ದ ಮರ ಹಾಗೂ ಬಂಡೆಗಳನ್ನು ತೆರವು ಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟರು‌. 

      ತಹಶೀಲ್ದಾರ್ ಪುಟ್ಟರಾಜ ಗೌಡ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ರಸ್ತೆ ಸಂಚಾರ ಐದಾರು ತಾಸು ಸಂಪೂರ್ಣ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ. 

LEAVE A REPLY

Please enter your comment!
Please enter your name here