ಭೈರವೇಶ್ವರ ಪ್ರೌಢಶಾಲೆಯಲ್ಲಿ ಪ್ರಬಂಧ ಸ್ಪರ್ಧೆ

0
19

ತುಮಕೂರು

               ಭೈರವೇಶ್ವರ ಪ್ರೌಢಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಆದ ಪ್ರಯುಕ್ತ ಭಾರತದ ಸಂವಿಧಾನದ ಪ್ರಸ್ತಾವನೆ ಮತ್ತು ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಗಳು ಈ ಎರಡು ವಿಷಯಗಳನ್ನು ಕೊಟ್ಟು ಪ್ರಬಂಧ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಮಕ್ಕಳಿಂದ ಸಾಂಸ್ಕøತಿಕ ಸಮಾರಂಭವನ್ನು ಸಹ ಏರ್ಪಡಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು 12ನೇ ವಾರ್ಡ್ ಘಟಕದ ಅಧ್ಯಕ್ಷರಾದ ಡಾ. ಅರುಂಧತಿಯವರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯಸ್ಥರಾದ ಅಪ್ಪಾಜಪ್ಪನವರ ಉಪಸ್ಥಿತಿಯಲ್ಲಿ ಮುಖ್ಯಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷರಾದ ಬಾ.ಹ. ರಮಾಕುಮಾರಿಯವರು ಹಾಗೂ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಸುಗುಣಾದೇವಿಯವರು ಆಗಮಿಸಿದ್ದು ಭಾರತದ ಸಂವಿಧಾನದ ಪ್ರಸ್ತಾವನೆ ಬಗ್ಗೆ ಸುಗುಣಾದೇವಿಯವರು ಉದ್ಘಾಟನಾ ಭಾಷಣ ಮಾಡಿದರು. ಕ.ಸಾ.ಪ ಅಧ್ಯಕ್ಷರಾದ ಬಾ.ಹ. ರಮಾಕುಮಾರಿಯವರು ಮಾತನಾಡಿ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವುದು ಮಹತ್ವವಾದ ವಿಚಾರ. ಕನ್ನಡ ನಾಡಿನಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆಯ ಬಗ್ಗೆ ಮಾತನಾಡಿದರು. ಕ.ಸಾ.ಪ ಸದಾಶಿವನಗರದ 12ನೇ ವಾರ್ಡ್ ಘಟಕದ ಕಾರ್ಯದರ್ಶಿಗಳಾದ ಪುಟ್ಟಬೋರಯ್ಯ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎರಡು ತಂಡಗಳಿಂದ ಶ್ರೀ ಭೈರವ ಕಲಾಸಂಘದ ವತಿಯಿಂದ ಬಹುಮಾನಗಳನ್ನು ವಿಜೇತರಿಗೆ ವಿತರಿಸಿದರು. ಅಪ್ಪಾಜಪ್ಪನವರು ವಂದನಾರ್ಪಣೆ ಅರ್ಪಿಸಿದರು.

LEAVE A REPLY

Please enter your comment!
Please enter your name here