ಮಗುವನ್ನು ವಾಪಸ್ ನೀಡಿದ ಯುವಕ : ಗುರುವಾರ ನಾಪತ್ತೆಯಾಗಿದ್ದ ಮಗು

0
12

 ತುಮಕೂರು:

Image result for ತಂದೆ ಮಗು

      ಆಗತಾನೆ ಹುಟ್ಟಿದ್ದ ಹಸುಗೂಸನ್ನು ಮಹಿಳೆ ಒಬ್ಬರಿಂದ ಪಡೆದು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸುವ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.

      ಕಳೆದ ಜುಲೈ 26 ರಂದು ಕೆ. ಆರ್. ಬಡಾವಣೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮಹಿಳೆ ಒಬ್ಬರು ಅಲ್ಲಿ ಕುಳಿತಿದ್ದ ವೃದ್ಧೆಗೆ ಮಗು ನೀಡಿ ನಾಪತ್ತೆಯಾಗಿದ್ದರು. ಆಕೆಯ ಬಳಿ ಮಗು ಇರುವುದನ್ನು ಕಂಡ ವ್ಯಕ್ತಿಯೊಬ್ಬರು ತಾನು ಸಾಕಿಕೊಳ್ಳುದಾಗಿ ಮಗುವನ್ನು ಹೆತ್ತಿಕೊಂಡು ಹೋಗಿದ್ದರು. ಅಲ್ಲಿ ಸಾರ್ವಜನಿಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿ ವಾಸಂತಿ ಉಪ್ಪಾರ್ ಮತ್ತು ಅವರ ಸಿಬ್ಬಂದಿ ಅಲ್ಲಿಗೆ ತೆರಳಿ ಪರಿಶೀಲಿಸಿದ್ದರು ಈ ಬಗ್ಗೆ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿತ್ತು.

      ನಿನ್ನೆ ಬುಧವಾರ ವ್ಯಕ್ತಿ ಒಬ್ಬರು ನಗರ ಠಾಣೆಗೆ ದೂರವಾಣಿ ಕರೆಮಾಡಿ ಮಗು ತನ್ನ ಬಳಿ ಇರುವುದಾಗಿ ತಿಳಿಸಿದ್ದಾರೆ. ಠಾಣೆಯ ರಂಗನಾಥ್ ಅವರು ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.ಸದರಿ ವ್ಯಕ್ತಿಯ ಮನೆಗೆ ತೆರಳಿ ವಿಚಾರಿಸಿದಾಗ 26 ವರ್ಷದ ಕಿಶೋರ್ ಎಂಬಾತ ಘಟನೆಯ ಬಗ್ಗೆ ವಿವರ ನೀಡಿದ್ದಾನೆ. ಆತನ ಅಕ್ಕನಿಗೆ ವಿವಾಹವಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಅಂದು ಮಗು ನೋಡಿ ಅಕ್ಕ ಸಾಕಿಕೊಳ್ಳುತ್ತಾರೆ ಎಂದು ತಿಳಿದು ಅನಾಥ ಮಗುವನ್ನು ಹೆತ್ತಿಕೊಂಡು ಹೋದೆ. ಆ ನಂತರ ಆ ಮಗು ಮನೆಯಲ್ಲಿ ಅಳುವುದು ನೋಡಿ ದುಃಖವಾಯಿತು. ಇದರಿಂದ ಮಗುವನ್ನು ವಾಪಸ್ ನೀಡುವ ತೀರ್ಮಾನಕ್ಕೆ ಬಂದೆ ಎಂದು ತಿಳಿಸಿದ್ದಾನೆ.

      ಮಗುವನ್ನು ತನ್ನ ವಶಕ್ಕೆ ಪಡೆದ ಮಕ್ಕಳ ರಕ್ಷಣಾ ಘಟಕವು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದೆ. ವಾಸಂತಿ ಉಪ್ಪಾರ್ ಮತ್ತು ಅವರ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಗುವಿಗೆ ಸೂಕ್ತ ಹಾರೈಕೆಗೆ ವೈದ್ಯಾಧಿಕಾರಿಗಳನ್ನು ಮನವಿ ಮಾಡಲಾಯಿತು. ಮಗುವನ್ನು ಪಡೆದು ಹೋಗಿದ್ದ ಕಿಶೋರ್ ಎಂಬಾತನಿಗೆ ಕಾನೂನಿನ ಪ್ರಕಿಯೆಗಳಲ್ಲದೆ ಬೇರೆ ಯಾವುದೇ ರೂಪದಲ್ಲೂ ಮಕ್ಕಳನ್ನು ತೆಗೆದುಕೊಳ್ಳುವುದು ಅಪರಾಧ ಎಂಬ ಬಗ್ಗೆ ತಿಳುವಳಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here