ಮಠಾಧೀಶರು-ಹೋರಾಟಗಾರರ ನಡುವೆ ಮಾತಿನ ಚಕಮಕಿ ; ಪ್ರತ್ಯೇಕ ಧ್ವಜ ಪ್ರದರ್ಶನಕ್ಕೆ ವಿಫಲ ಯತ್ನ

0
185

  ಬೆಳಗಾವಿ:

      ಪ್ರತ್ಯೇಕ ಧ್ವಜ ಪ್ರದರ್ಶಶಿಸಿದ ಹೋರಾಟಗಾರರ ಮತ್ತು ಮಠಾಧೀಶರ ನಡುವೆ ಮಾತಿನ ಚಕಮಕಿ ನಡೆದು ಪ್ರತ್ಯೇಕ ಧ್ವಜ ಪ್ರದರ್ಶನ ವಿಫಲ ಯತ್ನ ನಡೆದಿದೆ.

      ಬೆಳಗಾವಿಯಲ್ಲಿ ಉತ್ತರಕರ್ನಾಟಕದ ಭಾಗಕ್ಕೆ ಸಮಗ್ರ ಅಭಿವೃದ್ದಿಗಾಗಿ ಆಗ್ರಹಿಸಿ, ಮಠಾಧೀಶರು ಮತ್ತು ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಕೆಲ ಹೋರಾಟಗಾರರು ಪ್ರತ್ಯೇಕ ಧ್ವಜ ಪ್ರದರ್ಶಿಸಲು ಯತ್ನಿಸಿದ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಮಠಾಧೀಶರ ನಡುವೆ ಮಾತಿನ ಚಕಮಕಿ ನಡೆಯಿತು.

      ಈ ಸಂದರ್ಭದಲ್ಲಿ ಪ್ರತ್ಯೇಕ ಧ್ವಜ ಪ್ರದರ್ಶನಕ್ಕೆ ಯತ್ನಿಸಿದ ಕೆಲ ಹೋರಾಟಗಾರರನ್ನು ಧ್ವಜ ಪ್ರದರ್ಶಿಸದಂತೆ ಮಠಾಧೀಶರು ತಾಕೀತು ಮಾಡಿದರು. ಇದಕ್ಕೂ ಜಗ್ಗದ ಹೋರಾಟಗಾರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು. ನಂತರ ಸ್ವಾಮೀಜಿಗಳು ಸಮಗ್ರ ಅಭಿವೃಧ್ದಿಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಧರಣಿ ಅಂತ್ಯಗೊಳಿಸಿದರು.

LEAVE A REPLY

Please enter your comment!
Please enter your name here