ಮತ್ತೀಹಳ್ಳಿ ಕ್ಲಸ್ಟರ್ ಪ್ರತಿಭಾ ಕಾರಂಜಿ

0
31

ತಿಪಟೂರು 

       ತಾಲ್ಲೂಕಿನ ಕಸಬಾ ಹೋಬಳಿ-2, ಎಂ.ವಿ.ಹಟ್ಟಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮತ್ತೀಹಳ್ಳಿ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾಡತಾಡಿದ ಇ.ಸಿ.ಓ ಮಹೇಂದ್ರ.ವಿ ಅವರು ಹುಟ್ಟುವ ಪ್ರತಿ ಮಗುವು ಪ್ರತಿಭಾವಂತವಾಗಿರುತ್ತದೆ. ಆದರೆ ಅದನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇದಕ್ಕೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಗಳು ಮತ್ತು ಶಿಕ್ಷಕರು, ಪೋಷಕರು ಸೂಕ್ತ ರೀತಿಯಲ್ಲಿ ಸಹಕರಿಸಿ ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರತೆಗೆಯಬೇಕೆಂದರು.

      ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷಾರಾದ ಉಮೇಶ್, ಗ್ರಾ.ಪಂ ಸದಸ್ಯರಾದ ಮೂರ್ತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪಟ್ಟಾಭಿರಾಮು, ಮು.ಶಿ.ಅಡವೀಶಪ್ಪ, ಸಿ.ಆರ್.ಪಿ. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here