ಮತ್ತೆ ಕಾಡಿದ ಆ ಕೃಷ್ಣ ಮೃಗ ಭೇಟೆ

0
71
ಜೋಧ್ ಪುರ :
              ಬಾಲಿವುಡ್ ನ ಹೀ ಮ್ಯಾನ್ ಸಲ್ಮಾನ್  ಕೃಷ್ಣ ಮೃಗ ಬೇಟೆ ಪ್ರಕರಣದ ಕೇಂದ್ರ ಬಿಂದುವಾದರೆ ಅದರಲ್ಲಿ  ಬಾಲಿವುಡ್ ನಟಿಯರಾದ ಸೊನಾಲಿ ಬೆಂದ್ರೆ, ನೀಲಂ ಕೊಠಾರಿ, ಟಬು  ನಟ ಸೈಫ್  ಅಲಿಖಾನ್ ಹಾಗೂ ಇತರ ಕೈವಾಡ ಿತ್ತೆಂದು ನಂಬಲಾಗಿತ್ತಾದರು ನಂತರದಲ್ಲಿ  ಅವರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು  ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ರಾಜಸ್ತಾನ ಸರ್ಕಾರ ಇಂದು ತಿಳಿಸಿದೆ.ಆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ಘೋಷಿಸಿ ಐದು ವರ್ಷಗಳ ಕಾಲ ಸಜೆ ವಿಧಿಸಲಾಗಿದ್ದು, ಸೊನಾಲಿ ಬೆಂದ್ರೆ, ನೀಲಂ ಕೊಠಾರಿ, ಟಬೂ, ನಟ ಸೈಫ್ ಅಲಿಖಾನ್  ನಿರ್ದೋಷಿ ಎಂದು ಐದು ತಿಂಗಳ ಹಿಂದೆ  ನ್ಯಾಯಾಲಯ ತೀರ್ಪು ನೀಡಿತ್ತು.ಆದರೆ ಈಗ ಮತ್ತೆ  ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯಸರ್ಕಾರ ನಿರ್ಧರಿಸಿರುವುದರಿಂದ ಇವರಿಗೆ ಕಾನೂನು ಸಂಕಷ್ಟದ ಭೀತಿ ಎದುರಾಗಿದೆ.
             ಹಮ್ ಸಾಥ್  ಸಾಥ್ ಹೈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಜೋಧ್ ಪುರದಲ್ಲಿ ಎರಡು ಕೃಷ್ಣಮೃಗಗಳನ್ನು  ಬೇಟೆ ಆಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪಿತಸ್ಥರು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿತ್ತು.ಆದಾಗ್ಯೂ, ಸಾಕ್ಷ್ಯಧಾರಗಳ ಕೊರತೆಯಿಂದ ಸಹ ನಟರಾದ ಸೈಫ್ ಅಲಿಖಾನ್, ನೀಲಂ, ಟಬು ಸೊನಾಲಿ ಹಾಗೂ ಜೋಧ್ ಪುರ ನಿವಾಸಿ ದುಷ್ಯಂತ್ ಸಿಂಗ್ ಅವರನ್ನು ನಿರ್ದೋಷಿಗಳೆಂದು ಎಂದು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು.ವಿದೇಶ ಪ್ರವಾಸಕ್ಕೆ  ಅನುಮತಿಯಿಂದ ವಿನಾಯಿತಿ ನೀಡುವಂತೆ 52 ವರ್ಷದ ಸಲ್ಮಾನ್ ಖಾನ್ ಪರ ವಕೀಲರು  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು . ಈ ಸಂಬಂಧ ಪ್ರತಿಕ್ರಿಯಿಸಿದ ನ್ಯಾಯಾಲಯ ಪ್ರತಿ ಬಾರಿ  ವಿದೇಶ ಭೇಟಿ ಸಂದರ್ಭದಲ್ಲಿ  ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವಂತೆ ಸಲ್ಮಾನ್ ಖಾನ್ ಗೆ ಸೂಚನೆ ನೀಡಿತ್ತು.

LEAVE A REPLY

Please enter your comment!
Please enter your name here